ಕರ್ನಾಟಕ

ಸ್ಪೀಕರ್ ಬಗ್ಗೆ ನನಗೆ ತುಂಬ ಗೌರವವಿದೆ, ಕಾನೂನು ಚೌಕಟ್ಟಿನೊಳಗೆ ಕಾರ್ಯನಿರ್ವಹಿಸುತ್ತಾರೆ ಎಂಬ ವಿಶ್ವಾಸ ಇದೆ

Pinterest LinkedIn Tumblr

ಬೆಂಗಳೂರು: ರಾಜ್ಯ ಮೈತ್ರಿ ಸರ್ಕಾರದಲ್ಲಿ ಹೊಸ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದು ಕಾದು ನೋಡೋಣ,ಸ್ಪೀಕರ್ ಅವರ ಬಗ್ಗೆ ನನಗೆ ತುಂಬ ಗೌರವವಿದೆ, ಕಾನೂನು ಚೌಕಟ್ಟಿನೊಳಗೆ ಅವರು ಕಾರ್ಯನಿರ್ವಹಿಸುತ್ತಾರೆ ಎಂಬ ವಿಶ್ವಾಸ ರಾಜ್ಯದ ಆರೂವರೆ ಕೋಟಿ ಜನರಿಗಿದೆ, ಅವರ ಮೇಲೆ ಅನುಮಾನ ಪಡುವ ಅಗತ್ಯವಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ ಎಸ್ ಯಡಿಯೂರಪ್ಪ ಹೇಳಿದ್ದಾರೆ.

ಇಂದು ಬೆಂಗಳೂರಿನಲ್ಲಿ ತಮ್ಮ ನಿವಾಸದ ಹೊರಗೆ ಸುದ್ದಿಗಾರರ ಜೊತೆ ಮಾತನಾಡಿದ ಅವರು, ರಾಜ್ಯದಲ್ಲಿನ ರಾಜಕೀಯ ಬೆಳವಣಿಗೆಗೆ ತಾವು ಯಾವುದೇ ರೀತಿಯಲ್ಲಿ ಕಾರಣವಲ್ಲ ಎಂದು ಹೇಳಿದರು.

ತುಮಕೂರಿನಲ್ಲಿ ಬಾಗೊನ್ ನವಿರೆ ಕಣಿವೆಯ ನೀರನ್ನು ಅಡ್ಡಕಟ್ಟಿ ಜನರಿಗೆ ನೀರು ಹರಿಸದಂತೆ ತೊಂದರೆ ಕೊಡುತ್ತಿದ್ದಾರೆ ಎಂಬ ಮಾಹಿತಿಯಿದೆ. ಹೀಗಾಗಿ ತುಮಕೂರಿಗೆ ಹೋಗಿ ನಮ್ಮ ಶಾಸಕರು ಮತ್ತು ಸಂಸದ ಬಸವರಾಜು ಅವರ ಜೊತೆ ಹೋಗಿ ಕಣಿವೆಯನ್ನು ಪರಿಶೀಲಿಸಿ ನಂತರ ನಮ್ಮ ಮನೆದೇವರಾದ ಯಡಿಯೂರು ಸಿದ್ದಲಿಂಗ ಸ್ವಾಮಿಯ ದೇವಸ್ಥಾನದ ದರ್ಶನ ಪಡೆದು ಸಂಜೆ 4 ಗಂಟೆಗೆ ಬೆಂಗಳೂರಿಗೆ ವಾಪಸ್ಸಾಗುತ್ತೇನೆ ಎಂದರು.

ರಾಜ್ಯದಲ್ಲಿ ನಡೆಯುತ್ತಿರುವ ರಾಜಕೀಯ ಬೆಳವಣಿಗೆಗಳ ಬಗ್ಗೆ ನಿಮಗೆಲ್ಲಾ ಗೊತ್ತು. ನಾವು ಕಾದು ನೋಡೋಣ, ಹೆಚ್ ಡಿ ಕುಮಾರಸ್ವಾಮಿ ಮತ್ತು ಸಿದ್ದರಾಮಯ್ಯನವರು ನೀಡಿದ ಹೇಳಿಕೆಗೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ. ನಾನು ಅದಕ್ಕೆ ಸಂಬಂಧಪಟ್ಟವನೇ ಅಲ್ಲ ಎಂದು ಹೇಳಿದರು.

Comments are closed.