ಮನೋರಂಜನೆ

ಸಲ್ಮಾನ್‌ ಖಾನ್‌ ಜತೆ ನಟ ಸುದೀಪ್‌ ಡಾನ್ಸ್‌ ! ವೀಡಿಯೊ ವೈರಲ್

Pinterest LinkedIn Tumblr

ಬಾಲಿವುಡ್‌ ನಟ ಸಲ್ಮಾನ್‌ ಖಾನ್‌ ಜತೆ ನಟ ಸುದೀಪ್‌ ಡಾನ್ಸ್‌ ಮಾಡುತ್ತಿರುವ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್‌ ಆಗಿದೆ. ಇದನ್ನು ಸ್ವತಃ ಸಲ್ಮಾನ್‌ ಖಾನ್‌ ತಮ್ಮ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್‌ ಮಾಡಿದ್ದಾರೆ.

https://www.instagram.com/p/BztSlvyFWLx/?utm_source=ig_embed

ದಬಾಂಗ್‌ 3 ಚಿತ್ರದಲ್ಲಿ ಸಲ್ಮಾನ್‌ ಜತೆ ಸುದೀಪ್‌ ನಟಿಸುತ್ತಿದ್ದಾರೆ. ಈ ಚಿತ್ರದ ಶೂಟಿಂಗ್‌ ಮುಂಬಯಿಯಲ್ಲಿ ನಡೆಯುತ್ತಿದ್ದು, ಇತ್ತೀಚೆಗೆ ಚಿತ್ರತಂಡ ಡಾನ್ಸ್‌ ಪ್ರಾಕ್ಟೀಸ್‌ ಮಾಡಿದೆ. ಈ ಸಂದರ್ಭದಲ್ಲಿ ಸಲ್ಲು, ಸುದೀಪ್‌ ಅವರಿಗೆ ಡಾನ್ಸ್‌ ಮಾಸ್ಟರ್‌ ಪ್ರಭುದೇವ ಸ್ಟೆಪ್‌ ಹೇಳಿಕೊಡುತ್ತಿರುವುದು ವಿಡಿಯೋದಲ್ಲಿದೆ. ಇವರ ಜತೆ ನಿರ್ಮಾಪಕ ಸಾಜಿದ್‌ ನಾದಿಯವಾಲಾ ಕೂಡ ಹೆಜ್ಜೆ ಹಾಕಿದ್ದಾರೆ.

ಕಾದಲನ್‌ ಚಿತ್ರದ ಸೂಪರ್‌ಹಿಟ್‌ ಹಾಡು ‘ಊರ್ವಶಿ ಊರ್ವಶಿ ಟೇಕ್‌ ಇಟ್‌ ಈಸಿ ಊರ್ವಶಿ..’ ಹಾಡಿಗೆ ಇವರೆಲ್ಲರೂ ಹೆಜ್ಜೆ ಹಾಕಿದ್ದಾರೆ. ವಿಡಿಯೋ ಶೇರ್‌ ಮಾಡಿರುವ ಸಲ್ಮಾನ್‌ ಖಾನ್‌,’ಮಾಸ್ಟರ್‌ ಪ್ರಭುದೇವ ಜತೆ ಡಾನ್ಸ್‌ ಕ್ಲಾಸ್‌’ ಎಂದು ಬರೆದುಕೊಂಡಿದ್ದಾರೆ. ಅಲ್ಲದೆ, ಕಿಚ್ಚ ಸುದೀಪ್‌ ಮತ್ತು ನಿರ್ಮಾಪಕ ಸಾಜಿದ್‌ಗೆ ಟ್ಯಾಗ್‌ ಮಾಡಿದ್ದಾರೆ.

Comments are closed.