ಕರಾವಳಿ

ಕದ್ರಿ ಶ್ರೀಕೃಷ್ಣ ಮಂದಿರಕ್ಕೆ ಪೇಜಾವರ ಶ್ರೀಗಳಿಂದ ಭೂಮಿ ಪೂಜೆ

Pinterest LinkedIn Tumblr

ಮಂಗಳೂರು : ಕದ್ರಿ ಮಲ್ಲಿಕಟ್ಟೆಯಲ್ಲಿರುವ ಶ್ರೀ ಕೃಷ್ಣ ಮಂದಿರಪುನರ್‌ನಿರ್ಮಾಣಗೊಳಿಸುವ ಉದ್ದೇಶದಿಂದ ಪೇಜಾವರ ಮಠದ ಹಿರಿಯ ಸ್ವಾಮಿಗಳಾದ ಶ್ರೀ ವಿಶ್ವೇಶತೀರ್ಥ ಸ್ವಾಮಿಜಿಯವರುಭೂಮಿಪೂಜೆ ನೆರವೇರಿಸಿದರು.

ಶುಭಾಸಮಾರಂಭಗಳು, ಧಾರ್ಮಿಕ ಕಾರ್ಯಕ್ರಮಗಳು, ವಿದ್ಯಾರ್ಥಿಗಳಿಗೆ ಹಾಗೂ ಸಂಶೋಧನಾ ಪ್ರಕ್ರಿಯೆಗಳಿಗೆ ನೂತನ ಸಭಾಭವನ ವು ಬಳಕೆಯಾಗಲಿದ್ದು ಅಧುನಿಕ ಸವಲತ್ತುಗಳನ್ನು ಒಳಗೊಂಡಂತೆ ಮಂದಿರವು ಪುನರ್‌ನಿರ್ಮಾಣ ಗೊಳ್ಳಲಿದೆ. ಇದರ ನಿರ್ಮಾಣ ಕಾರ್ಯಕ್ಕೆ ಸರ್ವರ ಸಹಕಾರವನ್ನು ಶ್ರೀ ಗಳು ಬಯಸುತ್ತಾ ಶೀಘ್ರಾತಿಶೀಘ್ರವೇ ನವೀಕೃತ ಶ್ರೀ ಕೃಷ್ಣ ಮಂದಿರವು ರೂಪು ಗೊಳ್ಳಲೆಂದು ಶುಭವನ್ನು ಹಾರೈಸಿದರು.

ವೈದಿಕರಾದ‌ಉಚ್ಚಿಲ ಶ್ರೀಪತಿ ಭಟ್‌ಧಾರ್ಮಿಕ ವಿಧಿಗಳನ್ನು ನೆರವೇರಿಸಿದರು. ಶ್ರೀ ಕೃಷ್ಣ ಮಂದಿರದ ವಿಶ್ವಸ್ಥರಲ್ಲೋರ್ವರಾದ‌ಎಸ್, ಪ್ರದೀಪಕುಮಾರಕಲ್ಕೂರ ಸ್ವಾಗತಿಸಿದರು. ಎಂ. ಬಿ, ಪುರಾಣಿಕ್ ಪ್ರಸ್ತಾವನೆಗೈದರು.

ಈ ಸಂದರ್ಭಕೆ.ಎಸ್. ಕಲ್ಲೂರಾಯ, ಹರಿಕೃಷ್ಣ ಪುನರೂರು, ಸ್ಥಳದ ದಾನಿಗಳಾದ ಸುಧಾಕರ ಪಾಂಗಾಳ,ಡಾ| ಜಯಪ್ರಕಾಶ್, ಡಾ| ಎಸ್. ಎಂ. ಶರ್ಮಾ, ಡಾ| ಕೃಷ್ಣ ಪ್ರಸಾದ್, ಶ್ರೀಮತಿ ಫ್ರೆನ್ನಿಡೇಸ್ಸಾ, ಇಂಜಿನಿಯರ್ ಶುಭಾನಂದರಾವ್, ವಿಪ್ರ ಸಮಾಜದ‌ ಅಧ್ಯಕ್ಷ ರಾಮಕೃಷ್ಣರಾವ್, ಡಾ. ಪ್ರಭಾಕರ‌ ಅಡಿಗ ಕದ್ರಿ, ಮಟ್ಟಿ ಲಕ್ಷ್ಮೀ ನಾರಾಯಣರಾವ್, ಮಧುಸೂದನಕಣ್ವತೀರ್ಥ, ಡಾ. ಎಮ್. ಪ್ರಭಾಕರ ಜೋಶಿ, ಪ್ರಭಾಕರರಾವ್ ಪೇಜಾವರ, ಶ್ರೀಮತಿ ಪೂರ್ಣಿಮಾರಾವ್ ಪೇಜಾವರ, ಡಾ| ಶೋಧನರಾವ್ ಪೇಜಾವರ, ನರೇಶ್‌ರಾವ್ ಬಿ. ಮೊದಲಾದವರು ಉಪಸ್ಥಿತರಿದ್ದರು.

Comments are closed.