ಬೆಂಗಳೂರು: ಜಲಸಂಪನ್ಮೂಲ ಸಚಿವ ಡಿ. ಕೆ ಶಿವಕುಮಾರ್ ಅವರಿಗೆ ಮುಂಬೈಗೆ ಬರೋದು ಬೇಡ ಎಂದು ಮೊದಲೇ ಹೇಳಿದ್ದು ಎಂದು ಶಾಸಕ ಎಸ್ .ಟಿ ಸೋಮಶೇಖರ್ ಹೇಳಿದ್ದಾರೆ.
ನಾವು ಹಿರಿಯರನ್ನು ಭೇಟಿ ಮಾಡಿ ಹಲವು ಬಾರಿ ನಮ್ಮ ಸಮಸ್ಯೆ ಹೇಳಿಕೊಂಡರು ಪ್ರಯೋಜನವಾಗಲಿಲ್ಲ
ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಗುರುವಾರ ಮಾತನಾಡಿದ ಅವರು, ಅವರ ಮನೆಗೆ ಹೋಗಿ ಒಂದು ಗಂಟೆಗಳ ಕಾಲ ನಮ್ಮ ಸಮಸ್ಯೆ ಹೇಳಿ ಕೊಂಡಿದ್ದೇ ಬಗೆಹರಿಸಿ ಎಂದರೇ ನೆಗ್ಲೆಕ್ಟ್ ಮಾಡಿದರು. ನಿನ್ನೆ ರಾತ್ರಿ ಡಿ. ಕೆ ಶಿವಕುಮಾರ್ ಮನೆಗೆ ಬಂದಿದ್ದರು ಮಾಹಿತಿ ಇದೆ. ಆದರೆ ನಾನು ಯಾರನ್ನು ಭೇಟಿ ಮಾಡೋದಿಲ್ಲ, ನಾವು ಹಿರಿಯರನ್ನು ಭೇಟಿ ಮಾಡಿ ಹಲವು ಬಾರಿ ನಮ್ಮ ಸಮಸ್ಯೆ ಹೇಳಿಕೊಂಡರು ಪ್ರಯೋಜನವಾಗಲಿಲ್ಲ ಬಗೆಹರಿಸುತ್ತೇನೆ ಎಂದು ಭರವಸೆ ನೀಡಿ ಪದೇ ಪದೇ ನಿರಾಸೆ ಮಾಡಿದರು. ಸಿಎಂ ಬಳಿ ಕೂಡ ಸಮಸ್ಯೆಯನ್ನು ವೈಯಕ್ತಿಕವಾಗಿ ಹೇಳಿಕೊಂಡಿದ್ದೇ ಕಿವಿಗೆ ಹಾಕಿಕೊಳ್ಳಲಿಲ್ಲ, ಸಮಸ್ಯೆ ಬಗೆಹರಿಸೋದಿಲ್ಲ ಎಂದರೇ ನಾವು ಪಕ್ಷದಿಂದ ಹಿಂದೆ ಸರೀಯೋದಾಗಿ ತಿಳಿಸಿದ್ದೇ ಆಗಲೂ ನೆಗ್ಲೆಕ್ಟ್ ಮಾಡಿದರು, ಈಗ ನಮ್ಮ ನಿರ್ಧಾರ ತೆಗೆದು ಕೊಂಡಿದ್ದೇವೆ ಎಂದರು.
ಬಿಜೆಪಿ ಅವರು ನಮ್ಮನ್ನು ಆಟ ಆಡಿಸ್ತಾ ಇಲ್ಲ
ಆರು ಗಂಟೆ ಒಳಗೆ ರಾಜೀನಾಮೆ ಸಲ್ಲಿಸುತ್ತೇನೆ. ಸುಪ್ರೀಂ ಕೋರ್ಟ್ ಆದೇಶವನ್ನು ಎಲ್ಲರೂ ಪಾಲಿಸುತ್ತೇವೆ. ಮುಂಬೈನಿಂದಲೂ ಅತೃಪ್ತ ಶಾಸಕರು ಸಂಜೆ ಬಂದು ಸ್ಪೀಕರ್ ಬಳಿ ಮಾತನಾಡುತ್ತಾರೆ. ಬಿಜೆಪಿ ಅವರು ನಮ್ಮನ್ನು ಆಟ ಆಡಿಸ್ತಾ ಇಲ್ಲ ಇದು ಸುಳ್ಳು.
ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಕೊಟ್ಟಿಲ್ಲ, ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದೇವೆ ಅಷ್ಟೇ, ನಮ್ಮ ವೈಯಕ್ತಿಕ ಕಾರಣಗಳಿಂದ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇವೆ ಎಂದು ತಿಳಿಸಿದರು.
ಸಂಜೆ ಎಲ್ಲರೂ ಒಟ್ಟಿಗೆ ಸ್ಪೀಕರ್ ಬಳಿ ಬರುತ್ತೇವೆ
ಮೈತ್ರಿ ಸರ್ಕಾರದ ಕೆಲ ಒಡಂಬಡಿಕೆಗಳು ನಮಗೆ ಇಷ್ಟವಾಗಿರಲಿಲ್ಲ, ಇವರು ಸರ್ಕಾರಿ ಅಧಿಕಾರಿಗಳ ಮೂಲಕ ಕೆಲಸ ಮಾಡಿಸಿಕೊಲ್ಳೋದಾದರೆ ಶಾಸಕರಾಗಿ ನಾವು ಯಾಕೆ ಇರಬೇಕು. ಈಗ ಬಂದು ಎಲ್ಲ ಸಮಸ್ಯೆ ಬಗೆಹರಿಸುತ್ತೇವೆ ಎಂದು ಹೇಳುತ್ತಿದ್ದಾರೆ. ಆದರೆ ಕಾಲ ಮೀರಿ ಹೋಗಿದೆ. ಸಂಜೆ ಎಲ್ಲರೂ ಒಟ್ಟಿಗೆ ಸ್ಪೀಕರ್ ಬಳಿ ಬರುತ್ತೇವೆ .ಅಲ್ಲಿವರೆಗೂ ಯಾರನ್ನು ಭೇಟಿ ಮಾಡಲ್ಲ ಸ್ಪೀಕರ್ ಹೊರತು ಪಡಿಸಿ ಯಾರ ಜೊತೆ ಮಾತನಾಡೊಲ್ಲ, ಭೇಟಿಯಾಗೋದಿಲ್ಲ ಎಂದರು.
Comments are closed.