ಒಂದೆಡೆ ಬಿಜೆಪಿ ಸರ್ಕಾರ ರಚಿಸುವ ಕನಸು ಕಾಣುತ್ತಿದ್ದರೇ, ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರು ಒಬ್ಬೊಬ್ಬರಾಗಿ ರಾಜೀನಾಮೆಯ ಹಾದಿ ಹಿಡಿಯುತ್ತಿದ್ದಾರೆ. ಆದರೆ ರಾಜೀನಾಮೆ ನೀಡಿದ ಶಾಸಕರನ್ನು ಬಿಜೆಪಿಗೆ ಸೆಳೆದುಕೊಂಡು ಸರ್ಕಾರ ರಚಿಸುವ ಬಿಜೆಪಿ ಕನಸಿಗೇ ಸ್ವಪಕ್ಷಿಯರೇ ಅಡ್ಡಿಯಾಗಿದ್ದು, ಹಲವು ಕಾಂಗ್ರೆಸ್-ಜೆಡಿಎಸ್ ಶಾಸಕರ ಬಿಜೆಪಿ ರ್ಸೇಪಡೆಗೆ ಪಕ್ಷದಲ್ಲೇ ತೀವ್ರ ವಿರೋಧ ವ್ಯಕ್ತವಾಗುತ್ತಿರುವುದು ಬಿಜೆಪಿ ನಾಯಕರ ಪಾಲಿಗೆ ತಲೆನೋವಾಗಿ ಪರಿಣಮಿಸಿದೆ.
ಇನ್ನೇನು ಮೈತ್ರಿ ಸರ್ಕಾರ ಪತನವಾಗುತ್ತಿದೆ. ಬಿಜೆಪಿ ಸರ್ಕಾರ ರಚನೆಯಾಗಲಿದೆ ಎಂದು ಖುಷಿಪಡುವ ವೇಳೆ ಬಿಜೆಪಿಯ ಶಾಸಕರೇ ಯಡಿಯೂರಪ್ಪರವರಿಗೆ ಒತ್ತಡ ಹೇರಲು ಆರಂಭಿಸಿದ್ದಾರೆ. ಕಾಂಗ್ರೆಸ್ ನ ಕೆಲ ಶಾಸಕರನ್ನು ಬಿಜೆಪಿ ಪಕ್ಷಕ್ಕೆ ಸೇರಿಸಿಕೊಳ್ಳಬಾರದೆಂದು ಬಿಜೆಪಿ ಶಾಸಕರು ಇದೀಗಾ ಅಪಸ್ವರ ಎತ್ತಿದ್ದಾರೆ.
ಅದರಲ್ಲಿಯೂ ಬಳ್ಳಾರಿ ಶಾಸಕರಾಗಿದ್ದು, ಅತೃಪ್ತಿಯಿಂದ ರಾಜೀನಾಮೆ ನೀಡಿರುವ ರಮೇಶ್ ಜಾರಕಿಹೊಳಿ, ತಮ್ಮನ್ನು ಹೊರತುಪಡಿಸಿ ಬೇರೆ ಬಳ್ಳಾರಿ ಭಾಗದ ಅತೃಪ್ತ ಶಾಸಕರಲ್ಲಿ ಕೆಲವರನ್ನು ಪಕ್ಷಕ್ಕೆ ಸೇರಿಸಿಕೊಳ್ಳಬಾರದೆಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದು ಬಿ ಎಸ್ ವೈ ಪಾಲಿಗೆ ಬಿಸಿ ತುಪ್ಪವಾಗಿ ಪರಿಣಮಿಸಿದೆ.
ಹೌದು ಕಾಂಗ್ರೆಸ್ ವಿರುದ್ದ ಬಂಡಾಯ ಎದ್ದಿರುವ ಶಾಸಕರಲ್ಲಿ ಮಹಾಲಕ್ಷ್ಮೀ ಲೇಔಟ್ ಜೆಡಿಎಸ್ ಶಾಸಕ ಕೆ ಗೋಪಾಲಯ್ಯ,ಕೆ ಆರ್ ಪುರಂ ಶಾಸಕ ಭೈರತಿ ಬಸವರಾಜ್ ,ಶಾಸಕ ಮುನಿರತ್ನ, ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳಬಾರದೆಂದು ಬಿಜೆಪಿ ಶಾಸಕರು ಬಿ ಎಸ್ ವೈ ಗೆ ಒತ್ತಡ ಹೇರಲಾರಂಭಿಸಿದ್ದಾರೆ. ಕೆ ಆರ್ ಪುರಂ ಶಾಸಕ ಭೈರತಿ ಬಸವರಾಜು ಸದ್ಯ ಕಾಂಗ್ರೆಸ್ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದು ಇವರು ಬಿಜೆಪಿಗೆ ಸೇರಬಹುದಾದ ಸಾಧ್ಯತೆಗಳಿರುವುದರಿಂದ ಈ ವಿಚಾರವಾಗಿ ಕೆ ಆರ್ ಪುರಂ ಬಿಜೆಪಿ ಮುಖಂಡ, ಮಾಜಿ ಶಾಸಕ ನಂದೀಶ್ ರೆಡ್ಡಿ, ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಇನ್ನೊಂದೆಡೆ ಮಹಾಲಕ್ಷ್ಮೀ ಲೇಔಟ್ ಜೆಡಿಎಸ್ ಶಾಸಕ ಕೆ ಗೋಪಾಲಯ್ಯರವರು ಬಿಜೆಪಿ ಸೇರ್ಪಡೆಗೂ ವಿರೋಧ ವ್ಯಕ್ತವಾಗುತ್ತಿದ್ದು, ಮಹಾಲಕ್ಷ್ಮೀ ಲೇಔಟ್ ಕ್ಷೇತ್ರದ ಬಿಜೆಪಿ ಮುಖಂಡರು, ಯಡಿಯೂರಪ್ಪನವರನ್ನು ಭೇಟಿಯಾಗಿ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳಬಾರದು ಎಂದು ಸಹ ಎಂದು ಮನವಿ ಮಾಡಿದ್ದಾರೆ. ಅಲ್ಲದೆ ಕಾಂಗ್ರೆಸ್ ಅತೃಪ್ತ ಶಾಸಕ ಮುನಿರತ್ನ ವಿರುದ್ದವೂ ಬಿಜೆಪಿ ಸ್ಥಳೀಯ ಮುಖಂಡರು ಮತ್ತು ತುಳಸಿ ಮುನಿರಾಜು ಅಪಸ್ವರ ಎತ್ತಿದ್ದಾರೆ.
ಇನ್ನೂ ಈ ಎಲ್ಲಾ ವಿಚಾರವನ್ನು ಆಲೋಚಿಸಿದ ಯಡಿಯೂರಪ್ಪ ಪಕ್ಷದ ಶಾಸಕರಿಗೆ ನಿಮ್ಮ ಅಸಮಾಧಾನ ಏನೇ ಇದ್ದರೂ, ನನ್ನ ಬಳಿ ಬಂದು ಚರ್ಚಿಸಿ, ಬಹಿರಂಗವಾಗಿ ಎಲ್ಲಿಯೂ ಹೇಳಿಕೆ ನೀಡಬೇಡಿ ಸದ್ಯ, ಸರಕಾರ ರಚನೆಯ ಬಗ್ಗೆ ಚರ್ಚಿಸೋಣ ಎಲ್ಲಾ ರೀತಿಯ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳೋಣ. ಸದ್ಯದ ಪರಿಸ್ಥಿತಿಯಲ್ಲಿ ನಿಮ್ಮೆಲ್ಲರ ಸಹಕಾರ ನಮಗೆ ಬೇಕಿದೆ ಎಂದು ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರಿಗೆ ಸಮಾಧಾನ ಮಾಡಿ, ಮನವಿ ಮಾಡಿಕೊಂಡಿದ್ದಾರೆ.
ಇನ್ನೂ ಈ ಎಲ್ಲಾ ವಿಚಾರವನ್ನು ಆಲೋಚಿಸಿದ ಯಡಿಯೂರಪ್ಪ ಅತೃಪ್ತರನ್ನು ಪಕ್ಷಕ್ಕೆ ಸೇರಿಸಿಕೊಳ್ಳದಿದ್ದರೆ ಸರಕಾರ ರಚಿಸುವುದು ಹೇಗೆ ಎಂಬುದು ಸದ್ಯ ಯಡಿಯೂರಪ್ಪಗೆ ಹೊಸ ತಲೆನೋವಾಗಿದೆ. ಸದ್ಯ ಎಲ್ಲರ ವಿಶ್ವಾಸ ಉಳಿಸಿಕೊಳ್ಳುವುದು ಬಿಎಸ್ ವೈ ಗೆ ಮುಖ್ಯವಾಗಿದೆ.
Comments are closed.