ಆರೋಗ್ಯ

ಮಹಿಳೆಯರು ಹಣೆ ಮೇಲೆ ಕುಂಕುಮ ಇಡೋದರಿಂದಾಗುವ ಪ್ರಯೋಜನಗಳು

Pinterest LinkedIn Tumblr

ಸಂಸ್ಕೃತಿ, ಸನಾತನ ಧರ್ಮವನ್ನು ಪೂಜಿಸಿಕೊಂಡು ಬಂದಿರುವ ದೇಶ ಭಾರತ. ಇಲ್ಲಿ ಕುಂಕುಮಕ್ಕೆ ಹೆಚ್ಚಿನ ಪ್ರಾಧಾನ್ಯತೆ ನೀಡಲಾಗುತ್ತದೆ. ಇದು ಮುತ್ತೈದೆ ಮಹಿಳೆಯರ ಒಂದು ಪ್ರಮುಖವಾದ ಸಂಕೇತವಾಗಿದೆ. ಇದು ಕೇವಲ ಸಂಪ್ರದಾಯ ಮಾತ್ರವಲ್ಲ ಇದನ್ನು ಹಣೆಗೆ ಹಚ್ಚೋದರಿಂದ ಹಲವಾರು ಪ್ರಯೋಜನಗಳಿವೆ…

ಹಣೆ ಮೇಲೆ ಕುಂಕುಮ ಇಡೋದರಿಂದ ಪ್ರಯೋಜನಗಳು ಯಾವುವು ನೋಡೋಣ…
ಕುಂಕುಮವನ್ನು ಒಣಗಿದ ಅರಿಶಿನದಿಂದ ಮಾಡಲಾಗುತ್ತದೆ. ಇದಕ್ಕೆ ಹೆಚ್ಚು ಕೆಂಪು ಬಣ್ಣ ನೀಡುವುದು ನಿಂಬೆ ಹಣ್ಣು.
ಇದು ಆರೋಗ್ಯದ ಮೇಲೂ ಸಕಾರಾತ್ಮಕ ಪರಿಣಾಮ ಉಂಟಾಗುತ್ತದೆ ಎಂದು ವೈಜ್ಞಾನಿಕವಾಗಿ ತಿಳಿದುಬಂದಿದೆ.
ಕೆಂಪು ಬಣ್ಣ ಉತ್ತೇಜಕ ಗುಣವನ್ನು ಹೊಂದಿದೆ. ಇದನ್ನು ಹಣೆ ಮೇಲೆ ಇರಿಸುವುದರಿಂದ ಪಿಟ್ಯುಟರಿ ಗ್ರಂಥಿಯನ್ನು ಉತ್ತೇಜಿಸಿ ಅದರ ಹಾರ್ಮೋನ್‌ ನಿಯಮಿತವಾಗಿ ಸ್ರವಿಸುವಂತೆ ಮಾಡುತ್ತದೆ. ಕುಂಕುಮ ಹಚ್ಚುವುದರಿಂದ ಮನಸ್ಸಿನ ಏಕಾಗ್ರತೆ ಹೆಚ್ಚುತ್ತದೆ.
ಋಣಾತ್ಮಕ ಶಕ್ತಿ ದೂರವಾಗುವುದಕ್ಕೆ ಕುಂಕುಮ ಹಚ್ಚುವುದು ಸಹಾಯ ಮಾಡುತ್ತದೆ.
ಆರನೇ ಚಕ್ರವಾದ ಆಗ್ನ ಐಬ್ರೋದ ನಡುವೆ ಇದೆ. ಇಲ್ಲಿಗೆ ಕುಂಕುಮ ಹಚ್ಚುವುದರಿಂದ ಗ್ರಹಿಕೆ ಹೆಚ್ಚಾಗುತ್ತದೆ.
ಕುಂಕುಮ ಹಚ್ಚುವುದರಿಂದ ಫೇಶಿಯಲ್‌ ಮಸಲ್ಸ್‌ ಸ್ಟ್ರಾಂಗ್‌ ಆಗುತ್ತದೆ. ಹಾಗೂ ಬೇಗನೆ ವ್ರಿಂಕಲ್‌ ಉಂಟಾಗುವುದನ್ನು ತಡೆಯುತ್ತದೆ.
ಅಷ್ಟೇ ಯಾಕೆ ತಲೆನೋವು ಕಡಿಮೆ ಮಾಡಲು ಸಹ ಕುಂಕುಮ ಸಹಾಯ ಮಾಡುತ್ತದೆ.

Comments are closed.