ಬೆಂಗಳೂರು: ಅತೃಪ್ತ ಶಾಸಕರ ರಾಜೀನಾಮೆ ಬಗ್ಗೆ ಮಾತನಾಡಿದ ಶಾಸಕಿ ಅನಿತಾ ಕುಮಾರಸ್ವಾಮಿ, ಸರ್ಕಾರ ಉಳಿಯುತ್ತೆ ಅನ್ನೋ ವಿಶ್ವಾಸ ಇದೆ. ರಾಜೀನಾಮೆ ಕೊಟ್ಟಿದ್ದಾರೆ ಆದರೆ ಇನ್ನು ಅಂಗಿಕಾರ ಆಗಿಲ್ಲ. ಅತೃಪ್ತರ ಜೊತೆ ನಾನು ಪರ್ಸನಲ್ ಆಗಿ ಮಾತನಾಡಿ ಹೇಳ್ತಿನಿ ಅಂತ ಮುಖ್ಯಮಂತ್ರಿ ಹೇಳಿದ್ದಾರೆ ಎಂದರು. ಇನ್ನು ರಿವರ್ಸ್ ಆಪರೇಷನ್ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಲು ನಿರಾಕರಿಸಿದ ಅನಿತಾ ಕುಮಾರಸ್ವಾಮಿ, ಮುಂದೆ ನಿಮಗೆ ಗೊತ್ತಾಗುತ್ತೆ ಎಂದು ಹೇಳಿದ್ದಾರೆ.
ಅಲ್ಲದೇ, ಈ ಘಟನೆಗಳಿಂದ ರಾಜ್ಯದ ಜನರಿಗೆ ಕೆಟ್ಟ ಅಭಿಪ್ರಾಯ ಬರತ್ತೆ. ಜನರಿಂದ ಒಂದು ಪಕ್ಷದಲ್ಲಿ ಗೆದ್ದ ಮೇಲೆ ಪಕ್ಷದಲ್ಲಿ ಇರ್ಬೇಕು ಎಂದು ಹೇಳಿದ್ದಾರೆ.
ಇನ್ನು ಸಚಿವ ಸಾ.ರಾ.ಮಹೇಶ್, ಬಿಜೆಪಿ ಮುಖಂಡರ ಜೊತೆ ಚರ್ಚೆ ನಡೆಸಿದ ವಿಚಾರದ ಬಗ್ಗೆ ಮಾತನಾಡಿದ ಅನಿತಾ ಕುಮಾರಸ್ವಾಮಿ, ಅದಕ್ಕೆ ಬಣ್ಣ ಕಟ್ಟೋದು ಬೇಡ. ಸ್ನೇಹಿತರು ಬೇಟಿ ಮಾಡಿದ್ದಾರೆ. ಅದ್ರಲ್ಲಿ ರಾಜಕೀಯ ಇಲ್ಲ. ಸಿಎಂ ಆರಾಮವಾಗಿ ಇದ್ದಾರೆ. ರಾಜಕೀಯದಲ್ಲಿ ಇದೆಲ್ಲ ಕಾಮನ್ 30 ವರ್ಷದಿಂದ ನಾವು ರಾಜಕಾರಣ ನೋಡಿದ್ದೇವೆ ಎಂದು ಸ್ಪಷ್ಟನೆ ನೀಡಿದ್ದಾರೆ.
ಇನ್ನು ಬೈ ಎಲೆಕ್ಷನ್ ನಡೆದ್ರೆ, ಕೆ.ಆರ್.ಪೇಟೆಯಲ್ಲಿ ನಿಖಿಲ್ ನಿಲ್ಲುತ್ತಾರಾ ಎಂಬ ಪ್ರಶ್ನೆಗೆ ಉತ್ತರಿಸಿದ್ ಅನಿತಾ ಕುಮಾರಸ್ವಾಮಿ, ಅದೆಲ್ಲ ಈಗ್ಲೆ ಯಾಕೆ..? ಅದನ್ನೆಲ್ಲ ಪಕ್ಷ ತೀರ್ಮಾನ ಮಾಡತ್ತೆ ಎಂದು ಹೇಳಿದ್ದಾರೆ.
Comments are closed.