ಮನೋರಂಜನೆ

ಥೀಮ್ ಸಾಂಗ್‌ನಲ್ಲಿ ಪೈಲ್ವಾನ್ ಖದರ್!

Pinterest LinkedIn Tumblr


ಪೈಲ್ವಾನ್​​​ ಸೌಂಡ್​ ದಿನದಿಂದ ದಿನಕ್ಕೆ ಹೆಚ್ಚಾಗ್ತಾನೇಯಿದೆ. ಅದನ್ನ ಮತ್ತೊಂದು ಹಂತಕ್ಕೆ ಕೊಂಡೋಯ್ಯೋಕ್ಕೆ ಥೀಮ್​ ಸಾಂಗ್​​ ಬಂದಿದೆ. ಮ್ಯಾಜಿಕಲ್​ ಕಂಪೋಸರ್ ಅರ್ಜುನ್​ ಜನ್ಯಾ ಮಾಸ್​ ಟ್ಯೂನು, ಡಾ. ವಿ ನಾಗೇಂದ್ರ ಪ್ರಸಾದ್​​​​ ಗಟ್ಟಿ ಸಾಹಿತ್ಯದ ಹಾಡು​​​ ಸಖತ್​ ಸೌಂಡ್ ಮಾಡ್ತಿದೆ.

ಅಭಿನಯ ಚಕ್ರವರ್ತಿ ಬಾದ್​ ಶಾ ಕಿಚ್ಚ ಸುದೀಪ್​​ ಅಭಿನಯದ ಮೋಸ್ಟ್ ಎಕ್ಸ್​ಪೆಕ್ಟೆಡ್​​ ಆ್ಯಕ್ಷನ್​ ಎಂಟ್ರಟ್ರೈನರ್​ ಪೈಲ್ವಾನ್. ಚಿತ್ರದಲ್ಲಿ ಕಿಚ್ಚ ಕುಸ್ತಿ ಪಟು ಮತ್ತು ಬಾಕ್ಸರ್ ಆಗಿ ಎರಡು ಶೇಡ್​ಗಳಿರೋ ಪಾತ್ರದಲ್ಲಿ ಮಿಂಚಿದ್ದಾರೆ. ಪಾತ್ರಕ್ಕಾಗಿ ಮೈ ಹುರಿಗೊಳಿಸಿ, ಖಡಕ್​​ ಲುಕ್​​ನಲ್ಲಿ ದರ್ಶನ ಕೊಟ್ಟಿದ್ದಾರೆ. ಪೈಲ್ವಾನ್​ ಖದರ್​ ಎಂಥಾದ್ದು ಅಂತ ‘ಬಂದ ನೋಡು ಪೈಲ್ವಾನ್’ ಥೀಮ್​ ಸಾಂಗ್​ ಸಾರಿ ಹೇಳ್ತಿದೆ.

ವ್ಯಾಸ ರಾಜ್​ ವಾಯ್ಸ್​ ಪೈಲ್ವಾನ್​​​ ಥೀಮ್​ ಬಿಟ್​​ಗೆ​​​ ಮತ್ತಷ್ಟು ಪವರ್​ ತುಂಬಿದೆ. ಟೀಸರ್​​​ ಜೊತೆಗೆ ಪೈಲ್ವಾನ್​ ಕಿಚ್ಚನ ಜಬರ್​ದಸ್ತ್​​​ ಸ್ಟಿಲ್ಸ್​​ ಮಾಂಟೇಜ್​ ಮಾಡಿ ಥೀಮ್​ ಸಾಂಗ್​​​ನ ಇನ್ನಷ್ಟು ಚೆಂದಗಾಣಿಸಿದ್ದಾರೆ. ಪೈಲ್ವಾನ್​​​ ಪೌರುಷ ನೋಡಿ ಅಭಿಮಾನಿಗಳು ಫಿದಾ ಆಗಿದ್ದು, ರಿಪೀಟ್​ ಮೋಡ್​​ನಲ್ಲಿ ಸಾಂಗ್​ನ ಕೇಳಿ ಎಂಜಾಯ್ ಮಾಡ್ತಿದ್ದಾರೆ. ರಿವೀಲ್​ ಆದ ಕೆಲವೇ ಗಂಟೆಗಳಲ್ಲಿ ಸಾಂಗ್ ಲಕ್ಷ ಲಕ್ಷ ವೀವ್ಸ್ ಸಾಧಿಸಿದೆ.

ಕನ್ನಡ ಮಾತ್ರವಲ್ಲದೇ ಹಿಂದಿ, ತಮಿಳು, ತೆಲುಗು, ಮಲಯಾಳಂ ಭಾಷೆಗಳಲ್ಲೂ ಪೈಲ್ವಾನ್​ ಥೀಮ್​ ಸಾಂಗ್​ ರಿಲೀಸ್​ ಆಗಿದೆ. ಆಯಾ ಭಾಷೆಯ ಖ್ಯಾತ ಚಿತ್ರ ಸಾಹಿತಿಗಳು ಬಂದ ನೋಡು ಪೈಲ್ವಾನ್​ ಅಂತ ಖಡಕ್​​ ಪದಗಳನ್ನ ಬಳಸಿ, ಸಾಹಿತ್ಯ ಬರೆದಿದ್ಧಾರೆ. ಎಲ್ಲಾ ಭಾಷೆಗಳಲ್ಲೂ ಪೈಲ್ವಾನ್​ ಥೀಮ್​ ಸಾಂಗ್​ಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ.

ಕಿಚ್ಚನ ಹುಟ್ಟುಹಬ್ಬದ ಸಂಭ್ರಮದಲ್ಲಿ ಆಗಸ್ಟ್​ ಕೊನೆ ವಾರದಲ್ಲಿ ವಿಶ್ವದಾದ್ಯಂತ ದೊಡ್ಡ ಮಟ್ಟದಲ್ಲಿ ಪೈಲ್ವಾನ್ ದರ್ಬಾರ್ ಸ್ಟಾರ್ಟ್ ಆಗಲಿದೆ.

Comments are closed.