ಬೆಂಗಳೂರು: ಶ್ರೀರಾಮುಲು ಅಣ್ಣಾ, ಅವರು ನಮ್ಮಣ್ಣಾ. ಯಾರಿಗೆ ಜಾಸ್ತಿ ಪ್ರೀತಿ ಇದೆಯೋ, ಅವರು ಅವರನ್ನ ನೆನಪಿಸಿಕೊಳ್ತಾರೆ ಎಂದು ಸಚಿವ ಡಿ.ಕೆ ಶಿವಕುಮಾರ್ ಅವರು ಹೇಳಿದರು.
ನಗರದಲ್ಲಿಂದು ಮಾಧ್ಯದಮದ ಜೊತೆ ಮಾತನಾಡಿದ ಅವರು, ನಾನು ಬೆಳಗ್ಗೆ ಅವರನ್ನ ನೆನೆಸಿಕೊಂಡೆ, ಬಿ.ಸಿ ಪಾಟೀಲ್ ವೀಡಿಯೋ ನೋಡಿ ನೆನೆಸಿಕೊಂಡೆ. ಅದ್ಯಾರೋ ಪಾಪ ಆಂಧ್ರ ಲೀಡರ್ ಅವರ ಹೆಸರು ಬೇಡ ಈಗ ನಮ್ಮ ಬೆಂಗಳೂರಿನಲ್ಲಿ ಇರೋರು, ಅದೇನೋ ನಂಬರ್ ಎಲ್ಲಾ ಇತ್ತು ಅದರಲ್ಲಿ ಕೊಡೋದು ತೆಗೆದುಕೊಳೋದು, ಸೋಮವಾರ ಬರಲಿ ನಾನೂ ಸ್ವಲ್ಪ ತಿಳ್ಕೊತೀನಿ. ಸ್ಪೀಕರ್ ಅವರು ಹಿರಿಯರು ಇದ್ದಾರೆ ಎಂದು ಅವರು ತಿಳಿಸಿದರು.
ಇನ್ನು ಅವರಿಗಿಂತಲೂ ಹೆಚ್ಚು ತಿಳಿದಿರೋ ಶ್ರೀರಾಮುಲು ಅವರಿಂದ ಪಾಠ ಕಲಿತುಕೊಳ್ತೇನೆ. ಶ್ರೀರಾಮುಲು ನನ್ನ ಶನಿ ಅಲ್ಲ, ಶಕುನಿ ಅಂತ ಕರೆದಿದ್ದಾರೆ. ರಾಮನ ಹೆಸರಲ್ಲಿ ಪಾಠ ಕೇಳೋಣ ಎಂದು ಅವರು ಪ್ರತಿಕ್ರಿಯೆ ನೀಡಿದ್ದಾರೆ.
Comments are closed.