ಕರ್ನಾಟಕ

ಸ್ಪೀಕರ್ ವಿರುದ್ಧ ಅವಿಶ್ವಾಸ ಮಂಡನೆಗೆ ಬಿಜೆಪಿ ಸಿದ್ಧತೆ!!

Pinterest LinkedIn Tumblr


ಶಾಸಕರುಗಳ ರಾಜೀನಾಮೆ ಅಂಗೀಕಾರವಾಗದ ಹಿನ್ನೆಲೆಯಲ್ಲಿ ಸರ್ಕಾರ ಸೇಫ್​ ಆಗಿದ್ದರೇ, ಇತ್ತ ಬಿಜೆಪಿ ಮಾತ್ರ ಸರ್ಕಾರ ಉರುಳಿಸಲು ಮೇಲಿಂದ ಮೇಲೆ ಸರ್ಕಸ್ ಮುಂದುವರೆಸಿದೆ. ಕೊನೆಯ ಪ್ರಯತ್ನ ಎಂಬಂತೆ ಬಿಜೆಪಿ ಸ್ಪೀಕರ್ ವಿರುದ್ಧವೇ ತಿರುಗಿ ಬಿದ್ದಿದ್ದು, ಅವಿಶ್ವಾಸ ಮಂಡನೆಗೆ ಸಿದ್ಧತೆ ನಡೆಸಿದೆ.

ಸ್ಪೀಕರ್ ಪಕ್ಷಪಾತ ನಡೆಸುತ್ತಿದ್ದಾರೆ. ರಾಜೀನಾಮೆ ವಿಚಾರದಲ್ಲಿ ಪಾರದರ್ಶಕವಾಗಿ ನಡೆದುಕೊಳ್ಳುತ್ತಿಲ್ಲ ಎಂದು ಆರೋಪಿಸಿ ಅವಿಶ್ವಾಸ ಮಂಡಿಸಲು ಸಿದ್ಧವಾಗಿದ್ದು, ಅಧಿವೇಶನದಲ್ಲೇ ಮಂಡನೆಗೆ ಪ್ಲ್ಯಾನ್ ಮಾಡಿದೆ.

ಅಧಿವೇಶದನಲ್ಲಿ ಸಂತಾಪ ಸೂಚನೆಯಾಗುತ್ತಿದ್ದಂತೆ ಅವಿಶ್ವಾಸ ಮಂಡಿಸಲಿದೆ. ಈ ಬಗ್ಗೆ ಬಿಜೆಪಿ ನಾಯಕರು ಸಭೆ ನಡೆಸಿದ್ದು, ಯಾವ ರೀತಿ ಕಾರ್ಯನಿರ್ವಹಿಸಬೇಕೆಂಬುದರ ಚರ್ಚೆ ನಡೆಸಿದ್ದಾರೆ.

Comments are closed.