ಕರ್ನಾಟಕ

ಕಾಂಗ್ರೆಸ್​​ ಜೊತೆ ಚರ್ಚೆ ನಂತರ ಖುಷಿಯಲ್ಲಿ ಹೊರಟ ಕುಮಾರಸ್ವಾಮಿ

Pinterest LinkedIn Tumblr


ಬೆಂಗಳೂರು(ಜುಲೈ.12): ಕಾಂಗ್ರೆಸ್​​​-ಜೆಡಿಎಸ್​​ ಮೈತ್ರಿ ಸರ್ಕಾರ ಸದ್ಯಕ್ಕೆ ಸೇಫ್​​ ಆಗುವ ಮುನ್ಸೂಚನೆ ಲಭ್ಯವಾಗಿದೆ. ಹಾಗಾಗಿಯೇ ಕಾಂಗ್ರೆಸ್​​ ನಾಯಕರ ಜೊತೆಗಿನ ಮಾತುಕತೆ ಬಳಿಕ ಸಿಎಂ ಎಚ್​​.ಡಿ ಕುಮಾರಸ್ವಾಮಿ ಖುಷಿಯಲ್ಲಿ ಹೊರಟಿದ್ಧಾರೆ. ಸುಮಾರು 1 ಗಂಟೆ 30 ನಿಮಿಷಗಳ ಕಾಲ ಚರ್ಚೆ ನಡೆಸಿದ ಸಿಎಂ ಅವರಿಗೆ, ಅತೃಪ್ತ ಶಾಸಕರು ರಾಜೀನಾಮೆ ವಾಪಸ್​​ ತೆಗೆದುಕೊಳ್ಳಲಿದ್ದಾರೆ ಎಂಬ ಭರವಸೆ ಸಿಕ್ಕಿದೆ. ಇಲ್ಲದೇ ಹೋದರೆ ಬಿಜೆಪಿ ಶಾಸಕರ ರಿವರ್ಸ್​​​ ಆಪರೇಷನ್ ಮಾಡುವ ಮೂಲಕ ಸರ್ಕಾರ ಉಳಿಸಿಕೊಳ್ಳಬಹುದು ಎಂದು ಭಾವಿಸಿ ಸಿಎಂ ನಗು ಮುಖದಿ ಕೆ.ಕೆ ಗೆಸ್ಟ್​​ ಹೌಸ್​​ಗೆ ಆಗಮಿಸಿದ್ದಾರೆ.

ಶಾಸಕರ ಸಾಮೂಹಿಕ ರಾಜೀನಾಮೆಯಿಂದಾಗಿ ಸಂಕಷ್ಟಕ್ಕೆ ಸಿಲುಕಿರುವ ಸರ್ಕಾರ ಉಳಿಸಿಕೊಳ್ಳಲು ಕಾಂಗ್ರೆಸ್​ ಮತ್ತು ಜೆಡಿಎಸ್​​ ಎಲ್ಲಾ ರೀತಿಯ ಕಾರ್ಯತಂತ್ರ ರೂಪಿಸಿದೆ. ದೋಸ್ತಿ ನಾಯಕ ಜೊತೆಗೆ ಸಿಎಂ ಕುಮಾರಸ್ವಾಮಿ ಕಾರ್ಯತಂತ್ರ ರೂಪಿಸಿದ ಬಳಿಕವೇ ಬಹುಮತ ಸಾಬೀತುಪಡಿಸಲು ನನಗೆ ಅವಕಾಶ ಕೊಡಿ ಎಂದು ಸ್ಪೀಕರ್​​ಗೆ ಮನವಿ ಮಾಡಿದ್ದಾರೆ ಎನ್ನಲಾಗುತ್ತಿದೆ.

ಕೆಲವು ಅತೃಪ್ತ ಶಾಸಕರು ರಾಜೀನಾಮೆ ನೀಡಿರುವುದರಿಂದ ಸರ್ಕಾರ ಅಲ್ಪಮತಕ್ಕೆ ಕುಸಿದಿದೆ. ಶಾಸಕರ ರಾಜೀನಾಮೆ ಅಂಗೀಕಾರ ಕುರಿತಾಗಿ ಇನ್ನೂ ಯಾವುದೇ ತೀರ್ಮಾನ ಸ್ಪೀಕರ್​ ಕೈಗೊಂಡಿಲ್ಲ. ಈ ಮಧ್ಯೆ ಅಧಿವೇಶನ ಆರಂಭವಾಗಿದ್ದು, ಸೋಮವಾರಕ್ಕೆ ಕಲಾಪ ಮುಂದೂಡಲಾಗಿದೆ.

ಬಹುಮತ ಸಾಬೀತುಪಡಿಸಲು ಸ್ಪೀಕರ್ ಬಳಿ ಸಿಎಂ ಸಮಯ ಕೇಳಿದ್ದಾರೆ. ಕಲಾಪ ಸಮಿತಿ ಸಭೆಯಲ್ಲೂ ಕೂಡ ಬುಧವಾರ ದಿನಾಂಕ ನಿಗದಿ ಮಾಡುವಂತೆ ಮನವಿ ಮಾಡಿದ್ದಾರೆ. ಮಂಗಳವಾರ ಸುಪ್ರೀಂಕೋರ್ಟ್ ಶಾಸಕರ ರಾಜೀನಾಮೆ ವಿಚಾರ ಮತ್ತೆ ವಿಚಾರಣೆ ನಡೆಸಲಿದೆ. ಅಷ್ಟೊತ್ತಿಗಾಗಲೇ ಸರ್ಕಾರ ಉಳಿಸಬಹುದು ಎಂಬುದು ಸಿಎಂ ಲೆಕ್ಕಚಾರ.

ಕೆ.ಕೆ ಗೆಸ್ಟ್​​ ಹೌಸ್​​ನಲ್ಲಿ ಸಿಎಂ ಕುಮಾರಸ್ವಾಮಿ ಹಾಗೂ ಕಾಂಗ್ರೆಸ್ ನಾಯಕರು ಮುಂದಿನ ಕಾರ್ಯತಂತ್ರಗಳ ಬಗ್ಗೆ ಚರ್ಚೆ ನಡೆಸಿದರು. ಸದ್ಯ ಸಿಎಂ ನುಗು ಮುಖದಿಂದಲೇ ಹೊರಗೆ ಬಂದಿದ್ದು, ಸರ್ಕಾರ ಉಳಿಯೋದು ಪಕ್ಕಾ ಎಂದು ಹೇಳಲಾಗುತ್ತಿದೆ.

Comments are closed.