ಕರ್ನಾಟಕ

ಡಿಕೆಶಿ ಸಂಧಾನಕ್ಕೆ ಮೆತ್ತಗಾದ ಎಂಟಿಬಿ ನಾಗರಾಜ್ ! ಹೇಳಿದ್ದೇನು..?

Pinterest LinkedIn Tumblr

ಬೆಂಗಳೂರು: ಕೆಲವು ಅಸಮಾಧಾನ ಮತ್ತು ಬೇಸರಗಳಿಂದ ಕಾಂಗ್ರೆಸ್ ಪಕ್ಷದ ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡಿದ್ದೇನೆ. ಹಲವು ಗಂಟೆಗಳ ಕಾಲ ಮಾತುಕತೆ ನಡೆಸಿದ್ದೇವೆ, ಎಲ್ಲಾ ನಾಯಕರು ನನ್ನ ಮನವೊಲಿಸುವ ಕಾರ್ಯ ನಡೆಸಿದ್ದಾರೆ ಎಂದು ಎಂಟಿಬಿ ನಾಗರಾಜ್ ಹೇಳಿದ್ದಾರೆ.

ಬೆಂಗಳೂರಿನ ಹೂಡಿಯಲ್ಲಿರುವ ನಾಗರಾಜ್ ಅವರ ಮನೆಗೆ ಇಂದು ಬೆಳಗ್ಗೆಯೇ ಸಚಿವ ಡಿಕೆ ಶಿವಕುಮಾರ್, ಪರಮೇಶ್ವರ ಸೇರಿದಂತೆ ಹಲವು ನಾಯಕರು ಭೇಟಿ ನೀಡಿದ್ದರು, ಕೆಲವು ಗಂಟೆಗಳ ಚರ್ಚೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜಿನಾಮೆ ವಾಪಸ್ ಪಡೆಯಲು ನಾನು ಕಾಲಾವಕಾಶ ಕೇಳಿದ್ದೇವೆ ಎಂದು ತಿಳಿಸಿದ್ದಾರೆ.

ಡಾ.ಸುಧಾಕರ್ ಮತ್ತು ನಾನು ಒಂದೇ ದಿನ ರಾಜಿನಾಮೆ ನೀಡಿದ್ದೇವು, ಹಾಗಾಗಿ ಡಾ. ಸುಧಾಕರ್ ಜೊತೆಗೆ ಚರ್ಚಿಸಿ ಆ ನಂತರ ನಿರ್ಧಾರ ಕೈಗೊಳ್ಳುವುದಾಗಿ ತಿಳಿಸಿದ್ದಾರೆ. ಇನ್ನೂ ಎಂಟಿಬಿ ನಾಗರಾಜ್ ಅವರ ಮನವೊಲಿಸಲು ಬಂದಿದ್ದ ಡಿಕೆ ಶಿವಕುಮಾರ್, ಪರಮೇಶ್ವರ್, ಕೃಷ್ಣ ಭೈರೇಗೌಡ, ರಿಜ್ವಾನ್ ಹರ್ಷದ್ ಜೊತೆ ಸೇರಿ ಚಿಕ್ಕಬಳ್ಳಾಪುರ ಶಾಸಕ ಸುಧಾಕರ್ ಅವರ ಮನವೊಲಿಸಲು ಅವರ ಮನೆಗೆ ತೆರಳಿದ್ದಾರೆ ಎಂದು ತಿಳಿದು ಬಂದಿದೆ.

ಎಲ್ಲಾ ರಾಜಕೀಯ ಪಕ್ಷಗಳಲ್ಲೂ ಅಸಮಾಧಾನ ಇದ್ದೇ ಇರುತ್ತದೆ., ಹೀಗಾಗಿ ಮುಂದಿನ ದಿನಗಳಲ್ಲಿ ಎಲ್ಲರೂ ಒಂದಾಗಿ ಕೆಲಸ ಮಾಡುತ್ತೇವೆ ಎಂದು ಹೇಳಿದ್ದಾರೆ.

Comments are closed.