ಕರಾವಳಿ

ನಾಳೆ ಸಂಜೆ ಮಂಗಳೂರಿನಲ್ಲಿ ನಿರ್ಮಿಲ್ಲೆಂ ನೀರ್ಮೋಣೆಂ ಕೊಂಕಣಿ ಚಲನ ಚಿತ್ರದ ಧ್ವನಿ ಸುರುಳಿ ಬಿಡುಗಡೆ

Pinterest LinkedIn Tumblr

ಮಂಗಳೂರು, ಜುಲೈ 13: ಪ್ರೇಸ್ಟನ್ ಎಂಟರ್ ಪ್ರೈಸಸ್ ಲಾಂಛನದಲ್ಲಿ ಹೆನ್ರಿ ಡಿಸಿಲ್ವಾ ಸುರತ್ಕಲ್ ನಿರ್ಮಿಸಿರುವ ಮೆಲ್ವಿನ್ ಎಲ್ಪೇಲ್ ನಿರ್ದೇಶನದ `ನಿರ್ಮಿಲ್ಲೆಂ ನಿರ್ಮೋಣೆಂ’ ಕೊಂಕಣಿ ಚಲನ ಚಿತ್ರದ ಧ್ವನಿ ಸುರುಳಿ ಬಿಡುಗಡೆ ಸಮಾರಂಭವು ಜುಲೈ ೧೪ರಂದು ಸಂಜೆ ೬ ಗಂಟೆಗೆ ಬೆಂದೂರ್‌ವೆಲ್‌ನ ಸೈಂಟ್ ಸೆಬಾಸ್ಟಿಯನ್ ಚರ್ಚ್‌ನ ಮಿನಿ ಹಾಲ್‌ನಲ್ಲಿ ನಡೆಯಲಿದೆ ಎಂದು ಚಿತ್ರದ ನಿರ್ಮಾಪಕ ಹೆನ್ರಿ ಡಿಸಿಲ್ವಾ ತಿಳಿಸಿದ್ದಾರೆ.

ನಗರದ ಪತ್ರಿಕಾ ಭವನದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು, ಒಬ್ಬ ಅನಾಥ ಮಗುವನ್ನು ಚರ್ಚ್‌ನ ಫಾದರ್ ಸಾಕಿ ದೊಡ್ಡವರನ್ನಾಗಿ ಮಾಡಿ ಆ ಹುಡುಗ ಪ್ರೀತಿ-ಪ್ರೇಮ ಎಂದು ಹೇಳಿ ಫಾದರ್ ವಿರುದ್ಧ ಹಾಗೂ ದೇವರ ವಿರುದ್ಧ ಹೋಗಿ ಏನೆಲ್ಲಾ ಮಾಡುತ್ತಾನೆ ಎಂಬುವುದನ್ನು ಚಿತ್ರದಲ್ಲಿ ತೋರಿಸಲಾಗಿದೆ. ಚಿತ್ರ ಅಗೋಷ್ಟ್ ತಿಂಗಳಲ್ಲಿ ಬಿಡುಗಡೆಯಾಗಲ್ಲಿದ್ದು, ನಾಳೆ ಚಿತ್ರದ ಧ್ವನಿ ಸುರುಳಿ ಬಿಡುಗಡೆ ಸಮಾರಂಭ ಮಂಗಳೂರಿನಲ್ಲಿ ನಡೆಯಲಿದೆ ಎಂದು ತಿಳಿಸಿದರು.

ಚಿತ್ರದ ನಿರ್ದೇಶಕ ಮೆಲ್ವಿನ್ ಎಲ್ಫೇರ್ ಮಾತನಾಡಿ, `ನಿರ್ಮಿಲ್ಲೆಂ ನಿರ್ಮೋಣೆಂ’ ಕೊಂಕಣಿ ಚಲನ ಚಿತ್ರಕ್ಕೆ ಒಂದೇ ಹಂತದಲ್ಲಿ ೪೨ ದಿನಗಳ ಕಾಲ ಚಿತ್ರೀಕರಣ ನಡೆದಿತ್ತು. ಬೆಂಗಳೂರು, ಮರವಂತೆ, ಕುಂದಾಪುರ, ಉಡುಪಿ, ಕಾರ್ಕಳ ಹಾಗೂ ಮಂಗಳೂರು ಸುತ್ತಮುತ್ತ ಚಿತ್ರೀಕರಣ ನಡೆದಿದೆ.

ಸಿನಿಮಾದ ಕತೆ ಹೆನ್ರಿ ಡಿಸಿಲ್ವಾ ಅವರದ್ದಾಗಿದ್ದು, ಸಿನಿಮಾವನ್ನು ಅವರೇ ನಿರ್ಮಿಸಿದ್ದಾರೆ. ಮೆಲ್ವಿನ್ ಎಲ್ಫೇರ್ ಸಿನಿಮಾವನ್ನು ನಿರ್ದೇಶಿಸಿ ದ್ದಾರೆ. ಚಿತ್ರಕತೆ ಮತ್ತು ಸಹ ನಿರ್ದೇಶಕ ರಾಗಿ ನೋರ್ಬಟ್ ಜೋನ್ ಡಿ’ ಸೋಜಾ ಕೆಲಸ ಮಾಡಿದ್ದಾರೆ.
ತಾರಾಗಣದಲ್ಲಿ ಪ್ರತಾಪ್ ಮಿನೇಜಾಸ್, ಸೀಮಾ ಬುತ್ತೆಲ್ಲೋ, ಹೇರಾ ಪಿಂಟೋ, ಗೋಡ್ವಿನ್, ಮೀನಾಕ್ಷಿ ಮಾರ್ಟಿನ್, ಹಂಬಾರ್ಟ್, ನೋರ್ಬಟ್, ವಿನ್ನಿ ಫೆರ್ನಾಂಡಿಸ್, ಚಾಲ್ಸ್‌ಗೋಮ್ಸ್, ರೋನಿ ಫೆರ್ನಾಂಡಿಸ್ ಇದ್ದಾರೆ.

ಬಪ್ಪನ್ ಜೋಸ್ಸಿನ್ ಸಂಗೀತ ನೀಡಿದ್ದಾರೆ. ಮಂಜುನಾಥ್ ಛಾಯಾ ಗ್ರಾಹಕರಾಗಿದ್ದು, ದಿ. ವಿಲ್ಪಿ ರೆಬಿಂಬಸ್ ಸಾಹಿತ್ಯ ಒದಗಿಸಿದ್ದಾರೆ. ಚಂದು ಉಪ್ಪಲ್ಪಳ್ಳಿ ಸಂಕಲನಕಾರರಾಗಿ ದುಡಿದಿದ್ದಾರೆ. `ನಿರ್ಮಿಲ್ಲೆಂ ನಿರ್ಮೋಣೆಂ’ ಆಗಸ್ಟ್‌ನಲ್ಲಿ ತೆರೆಕಾಣಲಿದೆ ಎಂದು ಹೇಳಿದರು.

ಕಥೆ ಸಾರಾಂಶ:

ಒಬ್ಬ ಅನಾಥ ಮಗುವನ್ನು ಚರ್ಚ್‌ನ ಫಾದರ್ ಸಾಕಿ ದೊಡ್ಡವರನ್ನಾಗಿ ಮಾಡಿ ಆ ಹುಡುಗ ಪ್ರೀತಿ-ಪ್ರೇಮ ಎಂದು ಹೇಳಿ ಫಾದರ್ ವಿರುದ್ಧ ಹಾಗೂ ದೇವರ ವಿರುದ್ಧ ಹೋಗಿ ಏನೆಲ್ಲಾ ಮಾಡುತ್ತಾನೆ. ಕೊನೆಯಲ್ಲಿ ಆತನ ಪ್ರೀತಿ ಪ್ರೇಮ ಏನಾಯಿತು ಫಾದರ್ ಕಡೆ ತಿರುಗಿ ಬರುತ್ತಾನೋ ಇಲ್ಲವೋ ಎಂಬ ಕುತೂಹಲಕಾರಿ ವಿಚಾರಗಳನ್ನು ಸಮಾಜಕ್ಕೆ ಸಂದೇಶ ಭರಿತವಾಗಿ ನೀಡಲಾಗಿದೆ ಎಂದು ನಿರ್ದೇಶಕರು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದ ನಟರಾದ ಪ್ರತಾಪ್ ಮಿನೇಜಸ್, ಹೇರಾ ಪಿಂಟೋ ಹಾಗೂ ನೋರ್ಬಟ್ ಚಿತ್ರದ ಬಗೆಗಿನ ಪೂರಕ ಮಾಹಿತಿ ನೀಡಿದರು.

Comments are closed.