ಚಿಕ್ಕಬಳ್ಳಾಪುರ: ಮಾಧ್ಯಮದ ಜೊತೆ ಮಾತನಾಡಿದ ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್, ರಾಜಕೀಯ ವ್ಯವಸ್ಥೆಯಲ್ಲಿ ನೀವು ನೋಡುತ್ತಿದ್ದೀರಿ. ಸೋಮವಾರ ಅಧಿವೇಶನ ಇದೆ, ನಾವೆಲ್ಲರೂ ಒಟ್ಟಿಗೆ ಇರಬೇಕು ಎಂದು ಇಲ್ಲಿದ್ದೇವೆ. ಎರಡು ಪಕ್ಷದ ನಾಯಕರು ಅತೃಪ್ತರ ಮನವೊಲಿಸುವ ಕೆಲಸ ಮಾಡುತ್ತಿದ್ದಾರೆ ಎಂದರು.
ಬಿಜೆಪಿ ಮುರುಳಿಧರ್, ಈಶ್ವರಪ್ಪ ಭೇಟಿ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಸಾ.ರಾ. ಅದು ಆಕಸ್ಮಿಕ ಭೇಟಿ, ರಾಜಕೀಯ ಲೇಪನ ಬೇಡ. KSTDC ವ್ಯಾಪ್ತಿಯ ಕಟ್ಟಡದಲ್ಲಿ ಅನೇಕ ನಾಯಕರು ಅಲ್ಲಿಗೆ ಬರುತ್ತಾರೆ. ನಾನು ಹೋಗಿ ಬರುವ ಸಂಧರ್ಭದಲ್ಲಿ ಅಲ್ಲಿ ಭೇಟಿಯಾದೆ. ನಾನು ಮೀಟಿಂಗ್ ಹೋಗಿ, ರೆಸ್ಟ್ ಮಾಡಿದ್ದು ನಿಜ. ಆದ್ರೆ ರೂಂನಿಂದ ಹೊರಬಂದಾಗ ಆಕಸ್ಮಿಕ ಭೇಟಿಯಾಗಿದ್ದೆ ಎಂದಿದ್ದಾರೆ.
ರಾಜಿನಾಮೆ ಅಂಗಿಕಾರವಾಗಿಲ್ಲ. ಕೆಲವು ಶಾಸಕರು ನಾವು ಇನ್ನೂ ಕಾಂಗ್ರೆಸ್ ಜನತಾದಳದಲ್ಲೇ ಇದ್ದೀವಿ ಅಂತಾ ಹೇಳಿದ್ದಾರೆ. ಮುಖ್ಯಮಂತ್ರಿಗಳು ಬಹುಮತ ಸಾಬೀತು ಪಡಿಸುತ್ತಾರೆ ಕಾದು ನೋಡಿ ಎಂದು ಸಾ.ರಾ.ಮಹೇಶ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
Comments are closed.