ಮನೋರಂಜನೆ

ಲಿಪ್​ಲಾಕ್​ ಎಂದರೇನು?: ರಶ್ಮಿಕಾ ಮಂದಣ್ಣ-ವಿಜಯ್ ದೇವರುಕೊಂಡ​

Pinterest LinkedIn Tumblr


ಕರ್ನಾಟಕದ ಕ್ರಶ್​ ರಶ್ಮಿಕಾ ಮಂದಣ್ಣ ಮತ್ತು ಸೌತ್ ಇಂಡಿಯಾದ ಸೆನ್ಸೇಷನಲ್​ ನಟ ವಿಜಯ್ ದೇವರುಕೊಂಡ ನಡುವೆ ಕುಚ್ ಕುಚ್ ನಡೆತೀದೆ ಅನ್ನೋ ಗಾಸಿಪ್​ ಚಿತ್ರರಂಗದಲ್ಲಿದೆ. ಇದಕ್ಕೆ ಕಾರಣವಾಗಿದ್ದು, ಇಬ್ಬರ ನಡುವಿನ ಕಿಸ್ಸಿಂಗ್ ಸೀನ್. ಇಬ್ಬರ ನಟನೆಯ ಚಿತ್ರಗಳಲ್ಲಿ ಎರ್ರಾಬಿರ್ರಿಯಾಗಿದ್ದ ಕಿಸ್ಸಿಂಗ್ ಸೀನಗಳು ಇಂತಹದೊಂದು ಅನುಮಾನ ಹುಟ್ಟುಹಾಕಿತ್ತು. ಆದರೇ ಈಗ ಲಿಪ್​​ ಲಾಕ್ ಅಂದ್ರೇನು? ನಂಗೇ ಅರ್ಥವೇ ಆಗಲಿಲ್ಲ ಅನ್ನೋ ಮೂಲಕ ವಿಜಯ್ ಸಿನಿಪ್ರಿಯರಿಗೆ ಶಾಕ್​ ನೀಡಿದ್ದಾರೆ.

ನಿನ್ನೆ ನಗರದಲ್ಲಿ ನಡೆದ ಡಿಯರ್ ಕಾಮ್ರೇಡ್​​ ಸುದ್ದಿಗೋಷ್ಠಿಯಲ್ಲಿ ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸುತ್ತಿದ್ದ ನಟ ವಿಜಯ್ ದೇವರುಕೊಂಡ, ಲಿಪ್​ ಲಾಕ್​? ಹಾಗಂದ್ರೇನು? ನನಗೆ ಅಂತಹದೊಂದು ಶಬ್ದವೇ ಇಷ್ಟವಾಗಲಿಲ್ಲ ಎನ್ನುವ ಮೂಲಕ ಮುಗ್ಧರಂತೆ ಪೋಸು ಕೊಡುವ ಪ್ರಯತ್ನ ಮಾಡಿದ್ದಾರೆ.

ಕಿಸ್ಸಿಂಗ್ ಒಂದು ಭಾವನಾತ್ಮಕ ದೃಶ್ಯ. ಅದಕ್ಕೆ ಬೆಲೆ ಕೊಡಬೇಕು. ಅಳುವುದು, ಕೋಪ ವ್ಯಕ್ತಪಡಿಸುವುದು, ಪ್ರೀತಿಯಿಂದ ಚುಂಬಿಸುವುದು ಎಲ್ಲವೂ ಒಂದು ದೃಶ್ಯವಷ್ಟೇ. ಅದರಲ್ಲಿ ಪಾತ್ರಗಳು ತಲ್ಲಿನರಾಗಿರುತ್ತಾರೆ. ಆದರೆ ಅದನ್ನು ವಿಜಯ್ ಮತ್ತು ರಶ್ಮಿಕಾ ಎಂದು ಭಾವಿಸುವುದು ತಪ್ಪು ಎನ್ನುವ ಮೂಲಕ ಎಲ್ಲ ಗಾಸಿಪ್​ಗಳಿಗೆ ಬ್ರೇಕ್​ ಹಾಕುವ ಪ್ರಯತ್ನ ಮಾಡಿದ್ದಾರೆ.

ಇನ್ನು ಕಿಸ್ಸಿಂಗ್ ಸೀನ್​ ಬಗ್ಗೆ ರಶ್ಮಿಕಾ ಕೂಡ ಮಾತನಾಡಿದ್ದು, ಇದೊಂದು ಭಿನ್ನ ವಿಷಯಾಧಾರಿತ ಸಿನಿಮಾ. ಇದರಲ್ಲಿ ಹಲವು ಭಾವನಾತ್ಮಕ ವಿಚಾರಗಳಿವೆ. ಆದರೆ ಕಿಸ್ಸಿಂಗ್ ಸೀನ್ ಬಗ್ಗೆ ಮಾತ್ರ ಚರ್ಚೆ ಸರಿಯಲ್ಲ ಎಂದರು.

ಡಿಯರ್ ಕಾಮ್ರೆಡ್ ಚಿತ್ರ ಇದೇ ತಿಂಗಳ 26 ರಂದು ತೆರೆಗೆ ಬರಲಿದ್ದು, ಈಗಾಗಲೇ ಬಿಡುಗಡೆಯಾಗುವ ಟೀಸರ್ ನಲ್ಲೂ ರಶ್ಮಿಕಾ ವಿಜಯ್ ಜೋಡಿ ಸಖತ್ ಹಸಿಬಿಸಿ ದೃಶ್ಯಗಳಲ್ಲಿ ಕಾಣಿಸಿಕೊಂಡಿದೆ.

ಹೀಗಾಗಿ ಕಿಸ್ಸಿಂಗ್​ ಸೀನು ಮತ್ತು ರಶ್ಮಿಕಾ, ವಿಜಯ್ ಸ್ಟೇಟಸ್​​ಗಳ ಆಧಾರದ ಮೇಲೆ ಅಭಿಮಾನಿಗಳು ಈ ಇಬ್ಬರು ಕ್ಯೂಟ್​​ ನಟ-ನಟಿ ನಡುವೆ ಏನೋ ನಡೆದಿದೆ ಎಂದು ಊಹಿಸಿದ್ದರು. ಆದರೆ ಲಿಪ್​ ಲಾಕ್​ ಬಗ್ಗೆ ವಿಜಯ್ ಮಾತು ಈ ಅನುಮಾನಗಳಿಗೆ ಸ್ಪಷ್ಟನೆ ಕೊಡುವಂತಿದೆ. ಆದರೂ ಪ್ರೆಸ್ಮಿಟ್​ನಲ್ಲಿ ಇವರಿಬ್ಬರನ್ನು ನೋಡಿದವರು ಮಾತ್ರ ಸಮಥಿಂಗ್​ ಹ್ಯಾಪನಿಂಗ್ ಅಂತ ಮಾತಾಡಿಕೊಂಡಿದ್ದು ಸುಳ್ಳಲ್ಲ.

Comments are closed.