ಅತೃಪ್ತ ಸಚಿವ ಎಂಟಿಬಿ ನಾಗರಾಜ್ ದಿಢೀರ ಯೂ ಟರ್ನ್ ಹಿನ್ನೆಲೆಯಲ್ಲಿ ಬೆಳ್ಳಗ್ಗೆಯಿಂದ ಟೆಂಪಲ್ ರನ್ ನಡೆಸಿದ್ದ ಮುಂಬೈನ ಅತೃಪ್ತ ಶಾಸಕರು ತರಾತುರಿಯಲ್ಲಿ ಪ್ರವಾಸ ಮೊಟಕುಗೊಳಿಸಿ ಮುಂಬೈನ ರಿನೈಸನ್ಸ್ ಹೊಟೇಲ್ಗೆ ವಾಪಸ್ಸಾಗಿದ್ದಾರೆ.
ರಿನೈಸೆನ್ಸ್ ಹೊಟೇಲ್ನಲ್ಲಿ ವಾಸವಾಗಿದ್ದ ಅತೃಪ್ತರು ಇಂದು ಸಾಯಿಬಾಬಾ ದರ್ಶನಕ್ಕೆ ವಿಶೇಷ ವಿಮಾನದಲ್ಲಿ ಶಿರಡಿಗೆ ತೆರಳಿದ್ದರು. ಅಲ್ಲಿಂದ ಶನಿ ಶಿಂಗ್ನಾಪುರ, ಅಜಂತಾ ಎಲ್ಲೋರಾ ಗುಹೆಗೆ ಭೇಟಿ ನೀಡಲಿದ್ದರು. ಬಳಿಕ ಔರಂಗಾಬಾದ್ನಲ್ಲಿ ವಾಸ್ತವ್ಯ ಹೂಡಿದ ಬಳಿಕ ನಾಳೆ ನಾಸಿಕ್ ಗೆ ತೆರಳಿ ತ್ರಯಂಬಕೇಶ್ವರ್ ದರ್ಶನ ಪಡೆಯಲು ಪ್ಲ್ಯಾನ್ ಹಾಕಿದ್ದರು.
ಆದರೆ ಶಿರಸಿ ಸಾಯಿಬಾಬಾ ಮಂದಿರದಲ್ಲಿ ದರ್ಶನ ಮುಗಿಸುತ್ತಿದ್ದಂತೆ ಎಂಟಿಬಿ ನಾಗರಾಜ್ ಅತೃಪ್ತಿ ಕೈಬಿಟ್ಟು ಕಾಂಗ್ರೆಸ್ ಜೊತೆ ಕೈಜೋಡಿಸಲು ಮುಂದಾಗಿರುವ ಸುದ್ದಿ ಅತೃಪ್ತರನ್ನು ತಲುಪಿದೆ. ಈ ಹಿನ್ನೆಲೆಯಲ್ಲಿ ಆತಂಕಗೊಂಡ ಅತೃಪ್ತ ಶಾಸಕರು ತರಾತುರಿಯಲ್ಲಿ ಉಳಿದ ಕಾರ್ಯಕ್ರಮ ರದ್ದುಗೊಳಿಸಿ ಮುಂಬೈಗೆ ವಾಪಸ್ಸಾಗಿದ್ದು, ಹೊಟೇಲ್ನಲ್ಲಿ ಮುಂದಿನ ನಡೆ ಬಗ್ಗೆ ತುರ್ತು ಚರ್ಚೆ ನಡೆಸಲಿದ್ದಾರೆ ಎನ್ನಲಾಗಿದೆ.
ಇದಕ್ಕೂ ಮುನ್ನ ಶಿರಡಿ ದರ್ಶನದ ವೇಳೆ ಅತೃಪ್ತರು ಯಾವುದೇ ಕಾರಣಕ್ಕೂ ಅಧಿವೇಶನಕ್ಕೆ ಹಾಜರಾಗುವುದಿಲ್ಲ ಹಾಗೂ ತಮ್ಮ ನಿರ್ಧಾರ ಬದಲಾಯಿಸುವುದಿಲ್ಲ ಎಂದು ಶಪಥ ಮಾಡಿದ್ದಾರೆ ಎನ್ನಲಾಗಿದೆ. ಇನ್ನೊಂದು ಮೂಲಗಳ ಪ್ರಕಾರ ಎಂಟಿಬಿ ನಿರ್ಧಾರದ ಕುರಿತು ಚರ್ಚೆ ನಡೆಸಲು ಶಾಸಕರು ಪ್ರವಾಸ ಮೊಟಕುಗೊಳಿಸಿದ್ದಾರೆ ಎನ್ನಲಾಗಿದೆ. ನಿನ್ನಯಷ್ಟೇ ಮುಂಬೈನ ಸಿದ್ಧಿವಿನಾಯಕ ಟೆಂಪಲ್ಗೆ ತೆರಳಿದ್ದ ಅತೃಪ್ತರು ಪೂಜೆ ಸಲ್ಲಿಸಿದ್ದರು.
Comments are closed.