ಕರಾವಳಿ

ಎಚ್‌ಡಿ ರೇವಣ್ಣ ಟೆಂಪಲ್ ರನ್: ಕೊಲ್ಲೂರು, ಆನೆಗುಡ್ಡೆ, ಹಟ್ಟಿಯಂಗಡಿ ದೇವಾಲಯ ಭೇಟಿ!

Pinterest LinkedIn Tumblr

ಕುಂದಾಪುರ: ಅತ್ತ ಮೈತ್ರಿ ಸರಕಾರ ಅಭದ್ರತೆ ಭೀತಿ ಎದುರಿಸುತ್ತಿದ್ದರೆ ಇತ್ತ ಅದೇ ಸರಕಾರದ ಮಂತ್ರಿ ಹಾಗೂ ಸಿಎಂ ಅವರ ಸೋದರ ಎಚ್.ಡಿ. ರೇವಣ್ಣ ಶತಾಯಗತಾಯ ಸರಕಾರವನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ದೇವರ ಮೊರೆಹೋಗಿದ್ದಾರೆ.

ಭಾನುವಾರದಂದು ಉಡುಪಿ ಜಿಲ್ಲೆ ಕುಂದಾಪುರ ತಾಲೂಕಿನ ಪುರಾಣ ಪ್ರಸಿದ್ಧ ದೇವಾಲಯಗಳಾದ ಕೊಲ್ಲೂರು ಶ್ರೀ ಮೂಕಾಂಬಿಕಾ, ಆನೆಗುಡ್ಡೆ ಶ್ರೀ ವಿನಾಯಕ ದೇವಳ ಹಾಗೂ ಹಟ್ಟಿಯಂಗಡಿ ಶ್ರೀ ಸಿದ್ದಿ ವಿನಾಯಕ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು.
ಮಂತ್ರಿಗಳ ದೇವಾಲಯ ಭೇಟಿ ಬಗ್ಗೆ ದೇವಸ್ಥಾ‌ನ ಸಂಬಂಧಪಟ್ಟವರಿಗೆ ಪೂರ್ವ ಮಾಹಿತಿ ಇರಲಿಲ್ಲ.

Comments are closed.