ಬೆಂಗಳೂರು: ಬಹುಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿವಾಜಿನಗರ ಶಾಸಕ ರೋಷನ್ ಬೇಗ್ ಅವರನ್ನು ವಿಶೇಷ ತನಿಖಾ ದಳ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ಐಎಂಎ ಜ್ಯುವೆಲ್ಸ್ ವಂಚನೆ ಪ್ರಕರಣದಲ್ಲಿ ಮಾಲೀಕ ಮೊಹಮದ್ ಮನ್ಸೂರ್ ಅಲಿ ಖಾನ್ ಈ ಹಿಂದೆ ವೀಡಿಯೋ ಬಿಡುಗಡೆ ಮಾಡಿ, ರೋಷನ್ ಬೇಗ್ಗೆ ಐದು ಕೋಟಿ ರೂಪಾಯಿ ನೀಡಿದ್ದೇ ಎಂದು ಹೇಳಿದ್ದರು.
ಈ ಹಿನ್ನೆಲೆಯಲ್ಲಿ ವಿಚಾರಣೆಗೆ ಆಗಮಿಸಲು ರೋಷನ್ ಬೇಗ್ಗೆ ಹಲವಾರು ಬಾರಿ ಸಮನ್ಸ್ ಜಾರಿ ಮಾಡಿದ್ದರೂ ಗೈರು ಹಾಜರಾಗಿದ್ದರು.
24 ಗಂಟೆಯೊಳಗೆ ಬೆಂಗಳೂರಿಗೆ ವಾಪಸ್ ಬರ್ತೇನೆ, ಎಲ್ಲರ ಹಣ ವಾಪಸ್ ಕೊಡುತ್ತೇನೆ: ಐಎಂಎ ಜ್ಯುವೆಲ್ಸ್ ಮಾಲೀಕ
ಸೋಮವಾರ ರಾತ್ರಿ ಕೆಂಪೇಗೌಡ ವಿಮಾನ ನಿಲ್ದಾಣದಿಂದ ಪ್ರಯಾಣ ಬೆಳೆಸಲು ಮುಂದಾದ ಸಂದರ್ಭದಲ್ಲಿ ಎಸ್ಐಟಿ ಅಧಿಕಾರಿ ಗಿರೀಶ್ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ ರೋಷನ್ ಬೇಗ್ ಅವರನ್ನು ವಶಕ್ಕೆ ಪಡೆದುಕೊಂಡರು. ವಿಮಾನ ನಿಲ್ದಾಣದಲ್ಲಿಯೇ ವಿಚಾರಣೆಗೊಳಪಡಿಸಲಾಯಿತು.
ರೋಷನ್ ಬೇಗ್ ಬೆಂಗಳೂರು ವಿಮಾನ ನಿಲ್ದಾಣದಿಂದ ಪುಣೆಗೆ ತೆರಳಿ ಅಲ್ಲಿಂದ ದುಬೈಗೆ ತೆರಳು ಸಜ್ಜಾಗಿದ್ದರು ಎಂದು ತಿಳಿದುಬಂದಿದೆ.
ಮುಂಬಯಿಗೆ ತೆರಳಲು ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೋಗಿದ್ದ ರೋಷನ್ ಬೇಗ್, ಇನ್ನೇನು ವಿಮಾನ ಹತ್ತುವ ಸಿದ್ಧತೆಯಲ್ಲಿದ್ದಾಗಲೇ ಎಸ್ಐಟಿ ತಂಡ ಅವರನ್ನು ರಾತ್ರಿ 11 ಗಂಟೆ ಸುಮಾರಿಗೆ ವಶಕ್ಕೆ ಪಡೆಯಿತು. ಬಳಿಕ ವಿಚಾರಣೆಗಾಗಿ ಅವರನ್ನು ಎಸ್ಐಟಿ ಕಚೇರಿಗೆ ಕರೆದುಕೊಂಡು ಹೋಗಲಾಯಿತು.
ಐಎಂಎ ಮಾಲೀಕ ಮನ್ಸೂರ್ ಖಾನ್ ದೇಶದಿಂದ ಪರಾರಿ ಆಗುವ ಮೊದಲು ಬಿಡುಗಡೆ ಮಾಡಿದ್ದ ಆಡಿಯೊದಲ್ಲಿ, ಶಾಸಕ ರೋಷನ್ ಬೇಗ್ ತಮ್ಮಿಂದ ಕೋಟಿಗಟ್ಟಲೆ ಹಣ ಪಡೆದಿದ್ದರು ಎಂದು ಆರೋಪಿಸಿದ್ದರು. ನಂತರದ ಬೆಳವಣಿಗೆಯಲ್ಲಿ ಎಸ್ಐಟಿ ತಂಡ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಜಾರಿ ಮಾಡಿತ್ತು. ಮೊದಲ ನೋಟಿಸ್ಗೆ ಉತ್ತರಿಸಿದ್ದ ಬೇಗ್, ಪತ್ನಿಯ ಅನಾರೋಗ್ಯದ ನೆಪವೊಡ್ಡಿ 15 ದಿನಗಳ ಕಾಲಾವಕಾಶ ಕೇಳಿದ್ದರು. ಅದಕ್ಕೆ ಒಪ್ಪದ ಎಸ್ಐಟಿ, ಜು.15ರ ಸೋಮವಾರ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿತ್ತು. ಸೋಮವಾರವೂ ವಿಚಾರಣೆಗೆ ಹಾಜರಾಗದ ಅವರು ಜು.25ರವರೆಗೂ ಸಮಯಾವಕಾಶ ಕೇಳಿದ್ದರು. ಅದಕ್ಕೆ ಒಪ್ಪದ ಎಸ್ಐಟಿ ಜು.19ಕ್ಕೆ ವಿಚಾರಣೆಗೆ ಹಾಜರಾಗಬೇಕು ಎಂದು ಸೋಮವಾರ ಮತ್ತೊಂದು ನೋಟಿಸ್ ನೀಡಿತ್ತು. ಇಷ್ಟೆಲ್ಲದರ ಬಳಿಕ ಸೋಮವಾರ ತಡರಾತ್ರಿಯಲ್ಲಿ ರೋಷನ್ ಬೇಗ್ ಅವರು ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ವಿಮಾನ ಹತ್ತುವ ಸಿದ್ಧತೆಯಲ್ಲಿದ್ದರು.
ಮುಂಬಯಿಯಿಂದ ದುಬೈಗೆ?
ಅತೃಪ್ತ ಶಾಸಕರನ್ನು ಸೇರಿಕೊಳ್ಳಲು ರೋಷನ್ ಬೇಗ್ ಅವರು ಮುಂಬಯಿಗೆ ತೆರಳುತ್ತಿದ್ದಾರೆ ಎನ್ನುವ ಸಂಗತಿ ರಾಜಕೀಯ ವಲಯದಲ್ಲಿ ಹರಿದಾಡಿತ್ತು. ಆದರೆ, ಮುಂಬಯಿಗೆಂದು ಬೆಂಗಳೂರಿನಿಂದ ತೆರಳುತ್ತಿದ್ದ ರೋಷನ್ ಬೇಗ್ ಪುಣೆ ಮೂಲಕವೇ ದುಬೈಗೆ ಹಾರಿಬಿಡುವ ಸಾಧ್ಯತೆಗಳ ಬಗ್ಗೆಯೂ ಪೊಲೀಸ್ ವಲಯದಲ್ಲಿ ಅನುಮಾನಗಳು ಹರಿದಾಡಿದ್ದವು. ಈ ಎಲ್ಲಾ ಅನುಮಾನ, ಬೆಳವಣಿಗೆಗಳ ನಡುವೆಯೇ ಅವರನ್ನು ಎಸ್ಐಟಿ ತಂಡ ಬಂಧಿಸಿದೆ.
ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ವಿರುದ್ಧ ಬಹಿರಂಗವಾಗಿ ವಾಗ್ದಾಳಿ ನಡೆಸಿದ್ದ ರೋಷನ್ ಬೇಗ್ ಇತ್ತೀಚೆಗಷ್ಟೇ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.
Comments are closed.