ಅಹಮದಾಬಾದ್ [ಜು.16] : ಮಾಜಿ ಕಾಂಗ್ರೆಸ್ ಶಾಸಕ ಅಲ್ಪೇಶ್ ಟಾಕೂರ್ ಹಾಗೂ ದವಳ್ ಸಿನ್ಹ್ ಜಾಲಾ ಶೀಘ್ರದಲ್ಲೇ ಬಿಜೆಪಿ ಸೇರ್ಪಡೆಗೆ ಸಜ್ಜಾಗಿದ್ದಾರೆ. ಟಾಕೂರ್ ಸೇನಾ ಮುಖಂಡರೊಂದಿಗೆ ನಡೆಸಿದ ಸಭೆಯ ಬಳಿಕ ಜಾಲಾ ತಮ್ಮ ನಿರ್ಧಾರ ತಿಳಿಸಿದ್ದಾರೆ.
ಜುಲೈ 5 ರಂದು ಗುಜರಾತ್ ರಾಜ್ಯಸಭಾ ಚುನಾವಣೆಯಲ್ಲಿ ಕ್ರಾಸ್ ಓಟಿಂಗ್ ಮಾಡಿದ್ದ ಅಲ್ಪೇಶ್ ಟಾಕೂರ್ , ಜಾಲಾ ಇಬ್ಬರೂ ಕೂಡ ಕಾಂಗ್ರೆಸ್ ಗೆ ರಾಜೀನಾಮೆ ನೀಡಿದ್ದರು.
ಇದೀಗ ಅಹಮದಾಬಾದ್ ನಲ್ಲಿ ಹಲವು ಮುಖಂಡರೊಂಡಿಗೆ ನಡೆಸಿದ ಸಭೆ ಬಳಿಕ ತಾವೂ ಬಿಜೆಪಿ ಸೇರಲು ನಿರ್ಧರಿಸಿದ್ದಾಗಿ ದವಳ್ ಸಿನ್ಹ್ ಜಾಲಾ ಘೋಷಿಸಿದ್ದಾರೆ.
ಪಟೇಲ್ ಸಮುದಾಯದ ಮೀಸಲಾತಿಗಾಗಿ ಅಲ್ಪೇಶ್ ಟಾಕೂರ್ 2015ರಲ್ಲಿ ತಮ್ಮ ಹೋರಾಟ ಆರಂಭ ಮಾಡಿದ್ದು, ಅದಾದ ಬಳಿ ರಧಾನ್ ಪುರ್ ಕ್ಷೇತ್ರದಿಂದ 2017ರಲ್ಲಿ ಚುನಾವಣೆಗೆ ಸ್ಪರ್ಧಿಸಿ ಗೆದ್ದಿದ್ದರು.
ಆದರೆ 2019 ಲೋಕಸಭಾ ಚುನಾವಣೆಗೆ ಕೆಲ ಸಮಯ ಇರುವಂತೆಯೇ ಕಾಂಗ್ರೆಸ್ ನ ಎಲ್ಲಾ ಸ್ಥಾನಗಳಿಗೂ ರಾಜೀನಾಮೆ ನೀಡಿದ್ದರು. ಇದೀಗ ಶಿಘ್ರ ಬಿಜೆಪಿ ಸೇರುವ ನಿರ್ಧಾರ ಮಾಡಿದ್ದಾರೆ.
Comments are closed.