ಕರ್ನಾಟಕ

ಮಹಿಳೆಯಿಂದ ವ್ಯಕ್ತಿಯೋರ್ವನ ವಿರುದ್ಧ ರಣಚಂಡಿ ಅವತಾರ!

Pinterest LinkedIn Tumblr


ದಾವಣಗೆರೆ: ಮಹಿಳೆಯೊಬ್ಬರು ವ್ಯಕ್ತಿಯೊಬ್ಬನಿಗೆ ಮನಬಂದಂತೆ ಹಿಗ್ಗಾಮುಗ್ಗಾ ಥಳಿಸುತ್ತಿರುವ ದೃಶ್ಯವೊಂದು ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್ ಆಗಿದ್ದು, ಇತ್ತೀಚೆಗೆ ಹೊನ್ನಾಳಿ ಖಾಸಗೀ ಬಸ್ ನಿಲ್ದಾಣದಲ್ಲಿ ಈ ಘಟನೆ ಜರುಗಿದೆ.

ಬಸ್​​ ನಿಲ್ದಾಣದಲ್ಲಿ ಸಾಕಷ್ಟು ಸಾರ್ವಜನಿಕರ ಎದುರೆ ಚಪ್ಪಲಿಯಿಂದ ಮಹಿಳೆ ರೊಚ್ಚಿಗೆದ್ದು ಗೂಸಾ ಕೊಟ್ಟಿದ್ದಾರೆ. ಈ ಘಟನೆಗೆ ನಿಖರವಾದ ಮಾಹಿತಿ ತಿಳಿದು ಬಂದಿಲ್ಲ, ಆದರೆ, ಇಬ್ಬರು ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲೂಕಿನ ತಿಮ್ಮನಕಟ್ಟೆ ಮೂಲದ ನಿವಾಸಿಗಳು ಎಂದು ಹೇಳಲಾಗುತ್ತಿದೆ.

ಮಹಿಳೆಯು ವ್ಯಕ್ತಿ ಮೇಲೆ ಸಾಕಷ್ಟು ಕೋಪಗೊಂಡು ಚಪ್ಪಲಿ ಸೇವೆ ಮಾಡಿದ್ದಾರೆ. ಆಕೆ ದೃಶ್ಯದಲ್ಲಿ ತನ್ನೆಲ್ಲಾ ಹಳೆಯ ಕೋಪವನ್ನು ಹೊರಹಾಕಿದಂತೆ ಅವರ ಮಾತುಗಳಲ್ಲಿ ವ್ಯಕ್ತವಾಗುತ್ತಿರುವುದು ಕಾಣಬಹುದು.

ಇನ್ನು ಮಹಿಳೆಯು ಚಪ್ಪಲಿಯಿಂದ ಥಳಿಸುತ್ತಿರುವ ದೃಶ್ಯವನ್ನು ಬಸ್​ ನಿಲ್ದಾಣದಲ್ಲಿ ನೆರೆದಿದ್ದ ಸಾರ್ವಜನಿಕರು ಮೊಬೈಲ್​ ಪೋನಿನಲ್ಲಿ ಚಿತ್ರೀಕರಿಸಿದ್ದು, ಸದ್ಯ ಈ ದೃಶ್ಯವು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಹೊನ್ನಾಳಿ ಪೊಲೀಸರಿಗೆ ಈ ಬಗ್ಗೆ ಯಾವುದೇ ಮಾಹಿತಿ ಲಭ್ಯವಿಲ್ಲ ಎಂದು ಹೇಳಲಾಗುತ್ತಿದೆ.

Comments are closed.