ಟಾಲಿವುಡ್ ಹ್ಯಾಂಡ್ ಸಮ್ ಹೀರೋ ವಿಜಯ್ ದೇವರಕೊಂಡ ಹಾಗೂ ದಕ್ಷಿಣ ಭಾರತದ ಕ್ರಶ್ ರಶ್ಮಿಕ ಮಂದಣ್ಣ ಕಾಂಬಿನೇಷನ್ ನ ಎರಡನೇ ಬಹುನಿರೀಕ್ಷಿತ ಚಿತ್ರ ಡಿಯರ್ ಕಾಮ್ರೇಡ್ ಮ್ಯೂಸಿಕ್ ಫೆಸ್ಟಿವಲ್ ನನ್ನು ಕೊಚ್ಚಿಯಲ್ಲಿ ಏರ್ಪಡಿಸಲಾಗಿತ್ತು.
ಹೌದು ಕೆಳೆದ ವರ್ಷ ಈ ಕ್ಯೂಟ್ ಪೇರ್ ಕಾಂಬಿನೇಷನ್ ನಲ್ಲಿ ಮೂಡಿಬಂದಿದ್ದ ಗೀತಾ ಗೋವಿಂದಂ ಚಿತ್ರ ಟಾಲಿವುಡ್ ಬಾಕ್ಸ್ ಆಫಿಸ್ ನಲ್ಲಿ ಸೂಪರ್ ಡೂಪರ್ ಹಿಟ್ ಆಗಿ ಟಾಲಿವುಡ್ ನಲ್ಲಿ ಇವರಿಬ್ಬರ ಜೋಡಿ ಹೊಸ ಸಂಚಲನವನ್ನೇ ಸೃಷ್ಟಿ ಮಾಡಿದ್ದರು. ಸದ್ಯ ಇದೀಗಾ ಮತ್ತೊಮ್ಮೆ ಡಿಯರ್ ಕಾಮ್ರೇಡ್ ಎಂಬ ಚಿತ್ರದ ಮೂಲಕ ನಟ ವಿಜಯ್ ದೇವರಕೊಂಡ ಹಾಗೂ ನಟಿ ರಶ್ಮಿಕ ಮಂದಣ್ಣ ಪೇರ್ ಇನ್ನೊಮ್ಮೆ ತೆರೆ ಮೇಲೆ ಪ್ರೇಕ್ಷಕರನ್ನು ಮೋಡಿ ಮಾಡಲು ಬರುತ್ತಿದ್ದು, ಇದೇ ತಿಂಗಳ 26ರಂದು ತೆಲುಗು, ತಮಿಳು, ಕನ್ನಡ ಮತ್ತು ಮಲಯಾಳಂ ನಾಲ್ಕು ಭಾಷೆಗಳಲ್ಲಿ ಸ್ಕ್ರೀನ್ ಮೇಲೆ ಬರಲು ರೆಡಿಯಾಗಿದ್ದಾರೆ.
ಸದ್ಯ ಡಿಯರ್ ಕಾಮ್ರೇಡ್ ಚಿತ್ರವನ್ನು ಪ್ರಮೋಟ್ ಮಾಡಲು ಡಿಯರ್ ಕಾಮ್ರೇಡ್ “ಮ್ಯೂಸಿಕ್ ಫೆಸ್ಟಿವಲ್” ನನ್ನು ಕೊಚ್ಚಿಯಲ್ಲಿ ಏರ್ಪಡಿಸಲಾಗಿತ್ತು. ಇನ್ನೂ ಈಗಾಗಲೇ ಬಿಡುಗಡೆಯಾಗಿರುವ ಚಿತ್ರದ ಟೀಸರ್, ಟ್ರೇಲರ್, ಹಾಡುಗಳು ಸಿನಿಮಾ ಮೇಲಿನ ನಿರೀಕ್ಷೆಯನ್ನು ಹೆಚ್ಚಿಸಿವೆ. ಅಲ್ಲದೆ ಚಿತ್ರದ ಲಿರಿಕಲ್ ವಿಡಿಯೋವಿಗೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿದ್ದು, ಹಾಡುಗಳನ್ನು ಕನ್ನಡ ಪ್ರೇಕ್ಷಕರು ಸಹ ಮೆಚ್ಚಿಕೊಂಡಿದ್ದಾರೆ.
ಸೌತ್ ಸಿನಿ ಇಂಡಸ್ಟ್ರಿಯಲ್ಲಿ ಸಿಕ್ಕಾಪಟ್ಟೆ ಕುತೂಹಲ ಮೂಡಿಸಿರುವ ‘ಡಿಯರ್ ಕಾಮ್ರೇಡ್’ ಚಿತ್ರದ ಆಡಿಯೋ ಈಗಾಗಲೆ ಬಿಡುಗಡೆಯಾಗಿದೆ. ಜೊತೆಗೆ ಈ ಸಿನಿಮಾದ ಕನ್ನಡ ಗೀತೆಗಳ ಆಡಿಯೋ ಲಾಂಚ್ ನನ್ನು ಇತ್ತೀಚೆಗಷ್ಟೇ ಬೆಂಗಳೂರಿನಲ್ಲಿ ಅದ್ಧೂರಿಯಾಗಿ ಮ್ಯೂಸಿಕ್ ಫೆಸ್ಟಿವಲ್ ಕಾರ್ಯಕ್ರಮದಲ್ಲಿ ವಿಶೇಷ ಅತಿಥಿಯಾಗಿ ಸ್ಯಾಂಡಲ್ ವುಡ್ ನ ರಾಕಿಂಗ್ ಸ್ಟಾರ್ ಯಶ್ ಭಾಗವಹಿಸಿ ಆಡಿಯೋ ಲಾಂಚ್ ಮಾಡಿದ್ದಾರೆ. ಅಲ್ಲದೆ ಇದೇ ವೇಳೆ ರಾಕಿ ಬಾಯ್ ವಿಜಯ್ ದೇವರುಕೊಂಡಗೆ ತಮ್ಮ ಸಿನಿಮಾದ ಡೈಲಾಗ್ ನನ್ನು ಹೇಳಿಕೊಟ್ಟಿದ್ದು ವಿಶೇಷವಾಗಿತ್ತು.
Comments are closed.