ಮನೋರಂಜನೆ

ಕರೆಂಟ್ ಬಿಲ್ ನೋಡಿ ಶಾಕ್ ಗೊಂಡ ನಟಿ ರಾಯ್‌ ಲಕ್ಷ್ಮಿ !

Pinterest LinkedIn Tumblr

ಟಾಲಿವುಡ್‌ ಮತ್ತು ಸ್ಯಾಂಡಲ್‌ವುಡ್‌ ನಟಿ ರಾಯ್‌ ಲಕ್ಷ್ಮಿಶಾಕ್‌ಗೆ ಒಳಗಾಗಿದ್ದಾರೆ. ಇದಕ್ಕೆ ಕಾರಣ ಅವರ ಮನೆ ಕರೆಂಟ್‌ ಬಿಲ್‌. ಪ್ರತಿ ತಿಂಗಳು ಬರುವುದಕ್ಕಿಂತ ದುಪ್ಪಟ್ಟು ಬಿಲ್ ಬಂದಿದ್ದು ಈ ಬಗ್ಗೆ ಅವರು ಸಾಮಾಜಿಕ ಮಾಧ್ಯಮದಲ್ಲಿ ಬರೆದುಕೊಂಡಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಲಕ್ಷಾಂತರ ಅಭಿಮಾನಿಗಳು ಫಾಲೊ ಮಾಡುವ ನಟಿ ರಾಯ್‌ ಲಕ್ಷ್ಮಿ.ಇವರ ಫೋಟೋಗಳು ವೈರಲ್‌ ಆಗುವುದು ಸಾಮಾನ್ಯ ಸಂಗತಿ. ಆದರೆ ಈಗ ಅವರ ಒಂದು ಸ್ಟೇಟಸ್‌ ಎಲ್ಲರಿಗೂ ತಮ್ಮ ಮನೆ ಕರೆಂಟ್‌ ಬಿಲ್‌ ನೋಡುವಂತೆ ಮಾಡಿದೆ. ಗ್ಲಾಮರಸ್‌ ಬೆಡಗಿ ಶಾಕ್‌ಗೊಳಗಾಗಲು ಕಾರಣ ದುಪಟ್ಟು ಹೆಚ್ಚಾದ ವಿದ್ಯುತ್‌ ಬಿಲ್‌.

ಟ್ವೀಟ್‌ ಮಾಡಿ ತಮ್ಮ ಆತಂಕ ವ್ಯಕ್ತಪಡಿಸಿದ್ದಾರೆ ರಾಯ್‌ ಲಕ್ಷ್ಮಿ. ‘ನನ್ನ ಎಲೆಕ್ಟ್ರಿಕ್‌ ಬಿಲ್‌ ಅನ್ನು ಗಮನಿಸಿದೆ. ಪ್ರತಿ ತಿಂಗಳು ನಾನು ಕಟ್ಟುತ್ತಿದ್ದುದಕ್ಕಿಂತ ದುಪ್ಪಟ್ಟು ಮೊತ್ತ ಬಿಲ್‌ನಲ್ಲಿ ಬಂದಿದೆ. ಕಳೆದ ಮೂರು ತಿಂಗಳ ಬಿಲ್‌ ಗಮನಿಸಿದಾಗ ಇದು ದುಬಾರಿ ಆಗಿರುವುದು ಗಮನಕ್ಕೆ ಬಂದಿದೆ. ಪದೇ ಪದೇ ಸಂಬಂಧಪಟ್ಟವರಿಗೆ ಸಂಪರ್ಕಿಸಲು ಯತ್ನಿಸುತ್ತಿದ್ದೇನೆ. ಟೋಲ್‌ಫ್ರೀ ನಂಬರ್‌ ಕೂಡ ಕೆಲಸ ಮಾಡುತ್ತಿಲ್ಲ. ಇದೇ ರೀತಿ ಎಷ್ಟು ಜನ ಕಷ್ಟಪಡುತ್ತಿರಬಹುದು ಅಂತ ಆಶ್ಚರ್ಯ ಆಗುತ್ತಿದೆ. ಸಂಬಂಧಪಟ್ಟವರನ್ನು ಸಂಪರ್ಕಿಸಲು ಯಾರಾದರೂ ನನಗೆ ಸಹಾಯ ಮಾಡಿ. ಕಷ್ಟಪಟ್ಟು ಸಂಪಾದಿಸಿದ ಹಣ ಹೀಗೆ ವ್ಯರ್ಥವಾಗುವುದು ಬೇಸರ ತಂದಿದೆ’ ಎಂದು ಟ್ವಿಟ್ಟರ್‌ನಲ್ಲಿ ಬರೆದುಕೊಂಡಿದ್ದಾರೆ ರಾಯ್‌ ಲಕ್ಷ್ಮಿ.

ಟ್ವಿಟ್ಟರ್‌ನಲ್ಲಿ ಸಂಬಂಧಪಟ್ಟ ಸಂಸ್ಥೆಗೆ ಟ್ಯಾಗ್‌ ಮಾಡಿದ್ದ ರಾಯ್‌ ಲಕ್ಷ್ಮಿಗೆ ಆ ಸಂಸ್ಥೆ ಟ್ವಿಟ್ಟರ್‌ನಲ್ಲೇ ಉತ್ತರ ನೀಡಿದೆ. ‘ತೊಂದರೆ ಆಗಿದ್ದಕ್ಕೆ ವಿಷಾದಿಸುತ್ತೇವೆ. ನಿಮ್ಮ ಅಕೌಂಟ್‌ ನಂಬರ್‌ ಮತ್ತು ಫೋನ್‌ ನಂಬರ್‌ ನಮಗೆ ಕಳಿಸಿ. ಏನಾಗಿದೆ ಎಂದು ನೋಡುತ್ತೇವೆ’ ಎಂದು ಉತ್ತರಿಸಿದ್ದಾರೆ.

Comments are closed.