ಕರಾವಳಿ

ಪ್ರಕೃತಿ ವಿಕೋಪದ ಅನುದಾನ : ಅಳಪೆ ದಕ್ಷಿಣ ವಾರ್ಡಿನ ಚರಂಡಿ ಕಾಮಗಾರಿಗೆ ಗುದ್ದಲಿಪೂಜೆ

Pinterest LinkedIn Tumblr

ಮಂಗಳೂರು : ಪ್ರಕೃತಿ ವಿಕೋಪದ ಅನುದಾನಡಿಯಲ್ಲಿ ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ 50 ನೇ ಅಳಪೆ ದಕ್ಷಿಣ ವಾರ್ಡಿನ ಶ್ರೀ ವಿಷ್ಣುಮೂರ್ತಿ ಮಠದ ಬಳಿಯ ಚರಂಡಿ ಕಾಮಗಾರಿಗೆ ಮಂಗಳೂರು ನಗರ ದಕ್ಷಿಣ ಶಾಸಕ ಡಿ ವೇದವ್ಯಾಸ ಕಾಮತ್ ಅವರ ಆಶಯದಂತೆ ಪಾಲಿಕೆಯ ಮಾಜಿ ಸದಸ್ಯರಾದ ವಿಜಯಕುಮಾರ್ ಶೆಟ್ಟಿ ಗುದ್ದಲಿಪೂಜೆ ನೆರವೇರಿಸಿದರು.

ಸ್ಥಳೀಯ ಪ್ರಮುಖರಾದ ಚಂದ್ರಶೇಖರ್, ದಕ್ಷಿಣ ಮಂಡಲದ ಪ್ರಧಾನ ಕಾರ್ಯದರ್ಶಿ ಭಾಸ್ಕರಚಂದ್ರ ಶೆಟ್ಟಿ, ಬೂತಿನ ಅಧ್ಯಕ್ಷ ಸುಕೇಶ್ ಕುಮಾರ್, ನವೀನ್ ಚಂದ್ರ, ದಿನೇಶ್ ಶೆಟ್ಟಿ, ಹೇಮಪ್ರಕಾಶ್, ರವೀಂದ್ರ, ಮಾಧವ ನಿಯಲ್, ಗೌತಮ್, ಸೂರಜ್ ಸಹಿತ ಹಲವರು ಉಪಸ್ಥಿತರಿದ್ದರು.

Comments are closed.