ಮನೋರಂಜನೆ

ಟಿಕ್ ಟಾಕ್‌ನಲ್ಲಿ ಕಿರುತೆರೆ ನಟನಿಂದ ಪೊಲೀಸರ ಕುರಿತು ಅವಹೇಳನ!: ಬಂಧನ!!

Pinterest LinkedIn Tumblr

ಇತ್ತೀಚಿನ ದಿನಗಳಲ್ಲಿ ಸೋಷಿಯಲ್ ಮೀಡಿಯಾ ಆ್ಯಪ್ ಟಿಕ್ ಟಾಕ್ ಕೋಮು ಸೌಹಾರ್ದತೆಯನ್ನು ಹದಗೆಡಿಸುವಂತೆ ಮಾಡುತ್ತಿದೆ. ಕೋಮು ಸೌಹಾರ್ದತೆಯನ್ನು ಹದಗೆಡಿಸುವಂತಹ ಟಿಕ್ ಟಾಕ್ ಹಾಗೂ ಮುಂಬೈ ಪೊಲೀಸರನ್ನು ಅಣಕಿಸುವಂತಹ ವಿಡಿಯೋವನ್ನು ಮಾಡಿದ್ದಕ್ಕೆ ಬಿಗ್ ಬಾಸ್ ನಟ ಅಜಾಜ್ ಖಾನ್ ರನ್ನು ಅರೆಸ್ಟ್ ಮಾಡಲಾಗಿದೆ.

ಬಿಗ್ ಬಾಸ್ ನಟ ಅಜಾಜ್ ಖಾನ್ ಇತ್ತೀಚೆಗೆ ತೆಬ್ರಿಜ್ ಅನ್ಸಾರಿ ಮೇಲೆ ಗುಂಪು ಥಳಿತದ ಬಗ್ಗೆ ತನಿಖೆ ನಡೆಸಬೇಕೆಂದು ವಿಡಿಯೋ ಮಾಡಿದ್ದು ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿತ್ತು. ಈ ವಿಡಿಯೋದಲ್ಲಿ ಮುಂಬೈ ಪೊಲೀಸರನ್ನು ಅಣಕು ಮಾಡಿದ್ದಾರೆ ಎನ್ನಲಾಗಿದ್ದು. ಇದು ಕೋಮು ಸೌಹಾರ್ದತೆಯನ್ನು ಹದಗೆಡಿಸುವಂತಿದೆ ಎಂದು ನಟ ಅಜಾಜ್ ಖಾನ್ ರನ್ನು ಇದೀಗಾ ಮುಂಬೈ ಪೊಲೀಸರು ಅರೆಸ್ಟ್ ಮಾಡಿದ್ದಾರೆ.

ಇನ್ನು ಖಾನ್ ವಿವಾದಗಳಿಗೆ ಹೊಸದೇನಲ್ಲ. ಅಕ್ಟೋಬರ್ 2018 ರಲ್ಲಿ, ಮುಂಬೈ ಪೊಲೀಸರ ಮಾದಕವಸ್ತು ವಿರೋಧಿ ಕೋಶವು ಮಾಜಿ ಬಿಗ್ ಬಾಸ್ ಸ್ಪರ್ಧಿಯನ್ನು ಹೋಟೆಲ್ ನಿಂದ ಮಾದಕವಸ್ತು ಹೊಂದಿದ್ದ ಆರೋಪದ ಮೇಲೆ ಬಂಧಿಸಿಲಾಗಿತ್ತು.ಬ್ಯೂಟಿಷಿಯನ್‌ಗೆ ಅಶ್ಲೀಲ ಚಿತ್ರಗಳು ಮತ್ತು ಅಶ್ಲೀಲ ಸಂದೇಶಗಳನ್ನು ಕಳುಹಿಸಿದ ಆರೋಪದ ಮೇಲೆ 2016 ರಲ್ಲಿ ಆತನನ್ನು ಬಂಧಿಸಲಾಗಿತ್ತು.ಟಿವಿ ರಿಯಾಲಿಟಿ ಶೋ ಬಿಗ್ ಬಾಸ್ ನ ಸ್ಪರ್ಧಿಯಾಗಿದ್ದ ಖಾನ್ ಚಲನಚಿತ್ರಗಳು ಮತ್ತು ಹಾಸ್ಯ ಧಾರಾವಾಹಿಗಳಲ್ಲಿ ಕಾಣಿಸಿಕೊಂಡಿದ್ದಾರೆ.

Comments are closed.