(ಸಾಂದರ್ಭಿಕ ಚಿತ್ರ)
ಮಂಗಳೂರು : ಚಿತ್ರದುರ್ಗ ಜಿಲ್ಲೆಯ ಸಾಣೇಹಳ್ಳಿ ಶ್ರೀಮಠದ ಡಾ. ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿಯವರ ಸಾರಥ್ಯದಲ್ಲಿ 2019ರ ಆಗಸ್ಟ್ 1ರಿಂದ 30ರ ತನಕ ‘ಮತ್ತೆ ಕಲ್ಯಾಣ’ ಎಂಬ ರಾಜ್ಯ ಮಟ್ಟದ ಜನಾಂದೋಲನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ನಾಡಿನ ಪ್ರಮುಖ ಜನಪರ ಸ್ವಾಮೀಜಿಗಳು, ಚಿಂತಕರು, ಪ್ರಗತಿಪರರು, ಸಾಹಿತಿಗಳು, ಕಲಾವಿದರು ಹಾಗೂ ಸಂಘಟಕರ ನ್ನೊಳಗೊಂಡ ಸಲಹಾ ಸಮಿತಿಯಿರುವ ‘ಸಹಮತ ವೇದಿಕೆ’ ಈ ಆಂದೋಲನವನ್ನು ಮುನ್ನಡೆಸುತ್ತಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆಗಸ್ಟ್ 3ರಂದು ಮಂಗಳೂರಿನ ಶ್ರೀ ಕುದ್ಮುಲ್ ರಂಗರಾವ್ ಪುರಭವನದಲ್ಲಿ ‘ಮತ್ತೆ ಕಲ್ಯಾಣ’ದ ಕಾರ್ಯಕ್ರಮಗಳು ನಡೆಯಲಿದ್ದು, ಇದರ ಭಾಗವಾಗಿ ಜಿಲ್ಲೆಯ ಪದವಿ ಪೂರ್ವ ಮತ್ತು ಪದವಿ (ವೃತ್ತಿಪರ ಕೋರ್ಸ್ಗಳು ಒಳಗೊಂಡಂತೆ) ವಿದ್ಯಾರ್ಥಿಗಳಿಗೆ ‘ವಚನಗಳು ಮತ್ತು ಸಹಬಾಳ್ವೆ ಎಂಬ ವಿಷಯದಲ್ಲಿ ಜಿಲ್ಲಾ ಮಟ್ಟದ ಭಾಷಣ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ.
ಕನ್ನಡ ಅಥವಾ ಇಂಗ್ಲಿಷ್ ಭಾಷೆಯಲ್ಲಿ ನಾಲ್ಕು ನಿಮಿಷ (3+1) ಮಾತನಾಡಲು, ಒಂದು ಕಾಲೇಜಿನಿಂದ ಒಂದೇ ವಿದ್ಯಾರ್ಥಿಗೆ ಅವಕಾಶವಿದೆ. ರೂ. 3000, ರೂ. 2000 ಮತ್ತು ರೂ. 1000 ಕ್ರಮವಾಗಿ ಮೊದಲ, ಎರಡನೇ ಮತ್ತು ಮೂರನೇ ನಗದು ಬಹುಮಾನವಿದ್ದು, ಭಾಗವಹಿಸಿದ ಎಲ್ಲ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ನೀಡಲಾಗುವುದು. ಮಧ್ಯಾಹ್ಮ ಗಂಟೆ 2.00ರಿಂದ ಸಂಜೆ 4.00ರ ತನಕ ಸ್ಪರ್ದೆ ನಡೆಯಲಿದ್ದು, ಆಸಕ್ತ ವಿದ್ಯಾರ್ಥಿಗಳು ಕಾಲೇಜು ದೃಡೀಕರಣ ಪತ್ರದೊಂದಿಗೆ ಆ. 3ರಂದು ಬೆಳಿಗ್ಗೆ ಗಂಟೆ 10.00ರ ಒಳಗಾಗಿ ಸಭಾಂಗಣ ತಲುಪಬೇಕಾಗಿದೆ.
ವಿದ್ಯಾರ್ಥಿಗಳಿಗೆ ಉಚಿತ ಉಪಹಾರ ಮತ್ತು ಊಟದ ವ್ಯವಸ್ಥೆ ಮಾಡಲಾಗಿದ್ದು, ಆಸಕ್ತರು ಆ. 25ರ ಒಳಗಾಗಿ ಸಹಮತ ವೇದಿಕೆ, ದ.ಕ. ಜಿಲ್ಲಾ ಸಮಿತಿ, ಸಿ-24, 2ನೇ ಮಹಡಿ, ಅಲ್ ರಹಬಾ ಪ್ಲಾಝಾ, ನೆಲ್ಲಿಕಾಯಿ ರಸ್ತೆ, ಮಂಗಳೂರು-575001 ಅಥವಾ ಮೊ.ಸಂ. 9980951074 (ಡಾ. ಪ್ರವೀಣ್ ಬಿ.ಎಂ.)ಯನ್ನು ಸಂಪರ್ಕಿಸಬಹುದೆಂದು ‘ಮತ್ತೆ ಕಲ್ಯಾಣ’ ಜಿಲ್ಲಾ ಸಂಯೋಜಕ ಉಮರ್ ಯು.ಹೆಚ್. ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Comments are closed.