ಬೆಂಗಳೂರು: ಅತೃಪ್ತರು ಮಾಜಿ ಸಿಎಂ ಸಿದ್ದರಾಮಯ್ಯ ಕರೆ ಮಾಡಿದ ವಿಚಾರವಾಗಿ ಪ್ರತಿಕ್ರಿಯಿಸಿದ್ದು, ಮಾಜಿ ಸಚಿವ ಎಂಬಿ ಪಾಟೀಲ್ ಅವರು ಹೇಳಿರುವುದು ನಿಜ, ಇಬ್ಬರು ಅತೃಪ್ತರು ನನಗೆ ಕರೆ ಮಾಡಿದ್ದು ನಿಜ ಆದರೆ ನಾನು ಫೋನ್ ರಿಸೀವ್ ಮಾಡಿಲ್ಲ ಎಂದು ಅವರು ಹೇಳಿದರು.
ನಗರದಲ್ಲಿಂದು ಮಾತನಾಡಿದ ಮಾಧ್ಯಮದ ಜೊತೆ ಮಾತನಾಡಿದ ಅವರು, ಎಲ್ಲಿ ಅನರ್ಹತೆ ಮಾಡ್ತಾರೋ ಎಂಬ ಭಯವಿರಬೇಕು. ನಾನು ಯಾಕೆ ಫೋನ್ ರಿಸೀವ್ ಮಾಡ್ಬೇಕು, ಅದು ಮುಖ್ಯವಾದ ವಿಷಯವಲ್ಲ ಎಂದು ಸಿದ್ದರಾಮಯ್ಯ ಅವರು ನುಡಿದರು.
ಇನ್ನು ಅತೃಪ್ತರು ಬಂದಿದ್ದರೆ ಸರ್ಕಾರ ಪತನವಾಗುತ್ತಿರಲಿಲ್ಲ, ಬಿ.ಎಸ್ ಯಡಿಯೂರಪ್ಪ ಅವರು ಪ್ರಮಾಣ ಸ್ವೀಕರಿಸಿದ್ದೇ ಸಂವಿಧಾನ ಬಾಹಿರವಾದುದ್ದು. ಬಿಜೆಪಿಯವರು ಕುದುರೆ ವ್ಯಾಪಾರ ಮಾಡಿದ್ದಾರೆ. ಇದು ನಾಡಿನ ಜನರ ವಿಜಯವಲ್ಲ ಎಂದರು.
ಅಲ್ಲದೇ ಜೆಡಿಎಸ್ ಬಿಜೆಪಿ ಸರ್ಕಾರಕ್ಕೆ ಬಾಹ್ಯ ಬೆಂಬಲ ವಿಚಾರವಾಗಿ ಮಾತನಾಡಿದ ಸಿದ್ದರಾಮಯ್ಯ ಅವರು, ಈ ಬಗ್ಗೆ ಜಿ.ಟಿ ದೇವೇಗೌಡ ಅವರನ್ನೇ ಕೇಳಿ ಎಂದು ಅವರು ತಿಳಿಸಿದರು.
Comments are closed.