ಕರ್ನಾಟಕ

ಇನ್ನು ಮುಂದೆ ಹೆಲ್ಮೆಟ್ ಹಾಕದಿದ್ದರೆ ಪೆಟ್ರೋಲ್ ಇಲ್ಲ!

Pinterest LinkedIn Tumblr


ಹೆಲ್ಮೆಟ್ ಧರಿಸಿದರೆ ಹೇರ್ ಸ್ಟೈಲ್ ಹಾಳಾಗುತ್ತೆ ಎನ್ನುವ ದ್ವಿ ಚಕ್ರ ವಾಹನ ಸವಾರರಿಗೆ ಇದೀಗಾ ಶಾಕ್ ಎದುರಾಗಿದೆ..! ಹೆಲ್ಮೆಟ್ ಧರಿಸಿದರೆ ಮಾತ್ರ ಬೈಕ್ ಗೆ ಪೆಟ್ರೋಲ್ ಹಾಕಲಾಗುತ್ತದೆ ಎಂಬ ನಿಯಮವನ್ನು ಈ ಹಿಂದೆ ಮೈಸೂರಿನಲ್ಲಿ ಜಾರಿ ತಂದು ಕಾರಣಾಂತರಗಳಿಂದ ಕೈ ಬಿಟ್ಟಿದ್ದ ಈ ನಿಯಮವನ್ನು ಇದೀಗಾ ಬೆಂಗಳೂರು ನಗರದಾದ್ಯಂತ ಎಲ್ಲೆಡೆ ಜಾರಿ ತರಲು ಮುಂದಾಗಿದ್ದಾರೆ.

ವಾಹನ ಸವಾರರ ಮತ್ತು ರಸ್ತೆ ಸುರಕ್ಷತೆಯ ಉದ್ದೇಶದಿಂದ ನಗರ ಸಂಚಾರ ಪೊಲೀಸರು ‘ಹೆಲ್ಮೆಟ್‌ ಇಲ್ಲದಿದ್ದರೆ, ಪೆಟ್ರೋಲ್‌ ಇಲ್ಲ’ ಎಂಬ ನಿಯಮವನ್ನು ಜಾರಿಗೊಳಿಸಲು ಮುಂದಾಗಿದ್ದು, ಈ ಸಂಬಂಧ ಆದೇಶವೊಂದನ್ನು ಜಾರಿಗೊಳಿಸುವ ಉದ್ದೇಶವಿದೆ ಎಂದು ಸಂಚಾರ ವಿಭಾಗದ ಹೆಚ್ಚುವರಿ ಪೊಲೀಸ್‌ ಆಯುಕ್ತ ಪಿ.ಹರಿಶೇಖರನ್‌ ತಿಳಿಸಿದ್ದಾರೆ.

ಮೋಟಾರು ವಾಹನ ಕಾಯ್ದೆ-1988 ಕಲಂ 129ರ ಪ್ರಕಾರ ಪ್ರತಿಯೊಬ್ಬ ದ್ವಿಚಕ್ರ ವಾಹನ ಸವಾರ ಸುರಕ್ಷತೆಗಾಗಿ ಹೆಲ್ಮೆಟ್‌ ಧರಿಸುವುದು ಕಡ್ಡಾಯ. ”ದ್ವಿಚಕ್ರ ವಾಹನ ಅಪಘಾತ ಪ್ರಕರಣಗಳಲ್ಲಿ ಬಹುತೇಕ ಸಾವುಗಳು ಹೆಲ್ಮೆಟ್‌ ಧರಿಸದೇ ಇರುವ ಕಾರಣ ಸಂಭವಿಸುತ್ತವೆ. ಆದ್ದರಿಂದ ವಾಹನ ಸವಾರರ ಸುರಕ್ಷತೆಗಾಗಿ ಹಿಂಬದಿ ಸವಾರರು ಕೂಡಾ ಹೆಲ್ಮೆಟ್ ಧರಿಸಬೇಕು ಎಂದು ನಿಯಮ ಜಾರಿಗೆ ತಂದಿದ್ದರು. ಅದ್ದನ್ನು ಸರಿಯಾಗಿ ಪಾಲಿಸದ ಕಾರಣ ಇದೀಗಾ ಹೊಸ ನಿಯಮನ್ನು ಜಾರಿಗೊಳಿಸಲು ಮುಂದಾಗಿದ್ದಾರೆ.

ನಗರದ ಎಲ್ಲಾ 44 ಸಂಚಾರ ಠಾಣೆಗಳ ಅಧಿಕಾರಿಗಳಿಗೆ ಪೆಟ್ರೋಲ್ ಬಂಕ್ ಮಾಲೀಕರ ಜೊತೆ ಚರ್ಚೆ ನಡೆಸಿ ವಿಷಯ ಮನವರಿಕೆ ಮಾಡಲು ಸೂಚಿಸಲಾಗಿದ್ದು ನಗರದಲ್ಲಿರುವ ಇಂಡಿಯನ್‌ ಆಯಿಲ್‌, ಭಾರತ್‌ ಪೆಟ್ರೋಲಿಯಂ, ಹಿಂದೂಸ್ತಾನ್‌ ಪೆಟ್ರೋಲಿಯಂ, ರಿಲಾಯನ್ಸ್‌, ಶೆಲ್‌ ಸೇರಿದಂತೆ ಎಲ್ಲ ಬಂಕ್‌ಗಳಿಗೆ ಪತ್ರ ಬರೆದು ನಮ್ಮ ಉದ್ದೇಶಕ್ಕೆ ಸಹಕರಿಸುವಂತೆ ಕೋರಲಾಗಿದೆ. ಹೆಲ್ಮೆಟ್ ಇಲ್ಲದಿದ್ದರೆ ಪೆಟ್ರೋಲ್ ಇಲ್ಲ ಎಂಬ ನಿಯಮ ಪಾಲಿಸುವಂತೆ ಮನವಿ ಮಾಡಲಾಗಿದೆ ಎಂದು ಸಂಚಾರ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ಪಿ ಹರಿಶೇಖರನ್ ತಿಳಿಸಿದ್ದಾರೆ.

ಇನ್ನುಮುಂದೆ ಹೆಲ್ಮೆಟ್ ಹಾಕಿದರಷ್ಟೇ ಪೆಟ್ರೋಲ್ ಬಂಕ್‌ಗಳಲ್ಲಿ ಗಾಡಿಗೆ ಪೆಟ್ರೋಲ್ ಹಾಕಲಾಗುತ್ತದೆ ಎನ್ನುವ ಹೊಸ ನಿಯಮವನ್ನು ಜಾರಿಗೆ ತರಲಾಗುತ್ತಿದೆ. ಬೈಕಿಗೆ ಪೆಟ್ರೋಲ್ ಬೇಕೇ ಬೇಕು ಅಂತಿದ್ದರೆ ಹೆಲ್ಮೆಟ್‌ನ್ನು ಕೂಡ ಕಡ್ಡಾಯವಾಗಿ ಹಾಕಲೇಬೇಕು. ಈಗಾಲೇ ಉತ್ತರಪ್ರದೇಶದ ನೊಯ್ಡಾದಲ್ಲಿ ಜೂನ್ ತಿಂಗಳಿನಿಂದ ಈ ನಿಯಮ ಜಾರಿಗೆ ತರಲಾಗಿದೆ. ಅಲಿಗಢದಲ್ಲಿ ಈ ನಿಯಮ ಈಗಾಗಲೇ ಜಾರಿಯಲ್ಲಿದೆ. ಮೈಸೂರಿನಲ್ಲಿ ನಿಯಮವನ್ನು ಜಾರಿಗೆ ತರಲು ನಿರ್ಧರಿಸಲಾಗಿತ್ತು ಆದರೆ ಇದುವರೆಗೂ ಜಾರಿಗೆ ಬಂದಿಲ್ಲ.

Comments are closed.