ಕರ್ನಾಟಕ

ಅನರ್ಹತೆಯ ಭೀತಿಯಿಂದ ಸಿದ್ದರಾಮಯ್ಯ ಮೊರೆ ಹೋದ ಅತೃಪ್ತರು?!

Pinterest LinkedIn Tumblr


ಸಮ್ಮಿಶ್ರ ಸರ್ಕಾರದ ವಿರುದ್ಧ ಅತೃಪ್ತಿಯ ಕೂಗೆಬ್ಬಿಸಿ ಮುಂಬೈ ಸೇರಿ ದೋಸ್ತಿ ಸರ್ಕಾರ ಪತನಗೊಳಿಸಿದ ರೆಬೆಲ್​ ಎಮ್​ಎಲ್​ಎಗಳಿಗೆ ಈಗ ಅನರ್ಹತೆಯ ಭೀತಿ ಕಾಡುತ್ತಿದ್ದ್ಯಾ? ಹೌದು ಎನ್ನುತ್ತಿದೆ ಮೂಲಗಳ ಮಾಹಿತಿ. ಸಧ್ಯ ಅನರ್ಹತೆಯ ಭೀತಿಯಲ್ಲಿರುವ ಅತೃಪ್ತರು ಸಿದ್ಧರಾಮಯ್ಯ ಮೊರೆ ಹೋಗಿದ್ದು, ಅವರಿಗೆ ಪೋನ್ ಕರೆ ಮಾಡಿದ್ದಾರೆ ಎಂಬ ಎಕ್ಸಕ್ಲೂಸಿವ್ ಮಾಹಿತಿ ಲಭ್ಯವಾಗುತ್ತಿದೆ.

ಹೌದು ಮೂವರು ಶಾಸಕರು ಅನರ್ಹರಾದ ಬೆನ್ನಲ್ಲೇ ಇನ್ನುಳಿದ ಶಾಸಕರಿಗೂ ಅನರ್ಹತೆಯ ಭೀತಿ ಎದುರಾಗಿದೆ. ಈ ಕುರಿತು ಮಾತನಾಡಿದ ಮಾಜಿ ಗೃಹ ಸಚಿವ ಎಂ.ಬಿ.ಪಾಟೀಲ್, ಅತೃಪ್ತರು ಸಿದ್ಧರಾಮಯ್ಯನವರಿಗೆ ಕರೆ ಮಾಡಿದ್ದಾರೆ ಎಂದಿದ್ದರು. ಈ ವಿಚಾರವನ್ನು ಒಪ್ಪಿಕೊಂಡಿರುವ ಮಾಜಿ ಸಿಎಂ ಸಿದ್ಧರಾಮಯ್ಯ ಹೌದು ನನಗೆ ಅತೃಪ್ತ ಇಬ್ಬರು ಶಾಸಕರು ಕರೆ ಮಾಡಿದ್ದಾರೆ ಎಂದಿದ್ದಾರೆ.

ಬೆಂಗಳೂರಿನ ಗಾಂಧಿಭವನದಲ್ಲಿ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದ ಮಾಜಿ ಸಿಎಂ ಸಿದ್ಧು, ಎಂ ಬಿ ಪಾಟೀಲ್ ಹೇಳಿರೋದು ನಿಜ. ಇಬ್ಬರು ಅತೃಪ್ತರು ನಂಗೆ ಕರೆ ಮಾಡಿದ್ರು.ನಾನು ಪೋನ್ ರಿಸೀವ್ ಮಾಡಿಲ್ಲ.ಅವರು ತಮ್ಮನ್ನು ಅನರ್ಹತೆ ಮಾಡ್ತಾರೆ ಅನ್ನೋ ಭಯಕ್ಕೆ ಕರೆ ಮಾಡಿದ್ರು. ನಾನು ಯಾಕೆ ಅವರ ಪೋನ್ ರಿಸೀವ್ ಮಾಡ್ಬೇಕು? ಅದು ಮುಖ್ಯವಾದ ವಿಷಯ ಅಲ್ಲ ಎನ್ನುವ ಮೂಲಕ ಅತೃಪ್ತರಿಗೆ ಸ್ಟ್ರಾಂಗ್​ ಮೆಸೆಜ್ ರವಾನಿಸಿದ್ದಾರೆ ಸಿದ್ಧರಾಮಯ್ಯ.

ಇನ್ನು ಜೆಡಿಎಸ್​ ಬಿಜೆಪಿಗೆ ಬಾಹ್ಯ ಬೆಂಬಲ ನೀಡುವ ಕುರಿತು ಮಾತನಾಡಿದ ಸಿದ್ಧು, ಈ ಬಗ್ಗೆ ನನಗೇನು ಗೊತ್ತಿಲ್ಲ. ಸಂಬಂಧಿಸಿದವರನ್ನು ಕೇಳಿ. ಬಿಎಸ್​ವೈ ಪ್ರಮಾಣವಚನ ತಗೊಂಡಿರೋದೆ ಕಾನೂನು ಬಾಹಿರ ಎಂದು ವಾಗ್ದಾಳಿ ನಡೆಸಿದ್ದಾರೆ.

Comments are closed.