ಉಡುಪಿ: ಶಾಲಾ ವಿದ್ಯಾರ್ಥಿನಿಗೆ ವರ್ಷವೊಂದರ ಹಿಂದೆ ಲೈಂಗಿಕ ಕಿರುಕುಳ ನೀಡಿದ್ದ ಆರೋಪದಲ್ಲಿ ಇನ್ನಾ ಗ್ರಾಮದ ಫೆಲಿಕ್ಸ್ ಡಿ’ ಸೋಜಾ(55) ಎಂಬಾತನನ್ನು ಪಡುಬಿದ್ರಿ ಪಿಎಸ್ಐ ಸುಬ್ಬಣ್ಣ ಬಂಧಿಸಿದ್ದಾರೆ.
ಬಾಲಕಿಯು ವರ್ಷದ ಹಿಂದೆ ಆರೋಪಿಯ ವಾಹನದಲ್ಲಿ ಶಾಲೆಗೆ ತೆರಳುತ್ತಿದ್ದಳು. ಈಗ ರಿಕ್ಷಾ ಮೂಲಕ ಶಾಲೆಗೆ ಹೋಗುತ್ತಿದ್ದಾಗಲೂ ಆರೋಪಿ ಕೈ ಸನ್ನೆಗಳ ಮೂಲಕ ಬಾಲಕಿಗೆ ಮಾನಸಿಕ ಹಿಂಸೆಯನ್ನು ನೀಡುತ್ತಿದ್ದ. ಸಮಾಜ ಕಲ್ಯಾಣ ಇಲಾಖಾಧಿಕಾರಿ ಪ್ರಭಾಕರ ಆಚಾರ್ಯ ಅವರು ಬಾಲಕಿಯನ್ನು ಆಪ್ತ ಸಮಾಲೋಚನೆಗೆ ಒಳಪಡಿಸಿದಾಗ ವರ್ಷದ ಹಿಂದೆಯೂ ಆತ ಕಿರುಕುಳ ನೀಡಿದ್ದ ವಿಷಯ ಬಹಿರಂಗವಾಯಿತು. ಈ ಅಧಿಕಾರಿಯ ಸೂಚನೆಯಂತೆ ಆರೋಪಿಯನ್ನು ಪೋಕ್ಸೋ ಕಾಯ್ದೆಯಡಿಯಲ್ಲಿ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ಬಂಧಿತ ಆರೋಪಿಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
Comments are closed.