ಲಕ್ನೋ:ಜೂಜು ಮತ್ತು ಕುಡಿತ ಒಟ್ಟಿಗೆ ಸೇರಿದರೆ ಏನಾಗುತ್ತದೆ ಎಂಬುದಕ್ಕೆ ಈ ಘಟನೆಯೇ ಸಾಕ್ಷಿಯಾಗಿದೆ! ಕುಡಿತದ ಚಟಕ್ಕೆ ದಾಸನಾಗಿದ್ದ ವ್ಯಕ್ತಿ ಜೂಜಾಟದಲ್ಲಿ ತೊಡಗಿ ಹಣವನ್ನೆಲ್ಲಾ ಕಳೆದುಕೊಂಡ ಮೇಲೆ ಕೊನೆಗೆ ಪತ್ನಿಯನ್ನೇ ಪಣಕ್ಕಿಟ್ಟು ಸೋತಿದ್ದ. ಬಳಿಕ ಗೆದ್ದ ಸ್ನೇಹಿತರು ಆತನ ಹೆಂಡತಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ಘಟನೆ ಉತ್ತರಪ್ರದೇಶದ ಜೈಪುರದಲ್ಲಿ ನಡೆದಿದೆ.
ಜೂಜಿನಲ್ಲಿ ಹೆಂಡತಿಯನ್ನು ಪಣಕ್ಕಿಟ್ಟು, ಸ್ನೇಹಿತರು ಗ್ಯಾಂಗ್ ರೇಪ್ ಮಾಡಿದ ಮೇಲೆ ಸಂತ್ರಸ್ತೆ ದೂರು ಕೊಡಲು ಪೊಲೀಸರ ಬಳಿ ಹೋದಾಗ ದೂರ ಸ್ವೀಕರಿಸಲು ನಿರಾಕರಿಸಿದ್ದರು. ಬಳಿಕ ಆಕೆ ಕೋರ್ಟ್ ಮೊರೆ ಹೋಗಿರುವುದಾಗಿ ವರದಿ ವಿವರಿಸಿದೆ.
ಕೋರ್ಟ್ ಆದೇಶದ ನಂತರ ಜೌನ್ ಪುರ್ ಜಿಲ್ಲೆಯ ಜಾಫರ್ ಬಾದ್ ಪೊಲೀಸ್ ಠಾಣೆಯಲ್ಲಿ ಘಟನೆಗೆ ಸಂಬಂಧಿಸಿದಂತೆ ಎಫ್ ಐಆರ್ ದಾಖಲಿಸಿಕೊಂಡಿರುವುದಾಗಿ ವರದಿ ತಿಳಿಸಿದೆ.
ಸಂತ್ರಸ್ತೆ ಜಾಫರಾಬಾದ್ ಪೊಲೀಸ್ ಠಾಣಾ ವ್ಯಾಪ್ತಿಯ ನಿವಾಸಿಯಾಗಿದ್ದಳು. ತನ್ನ ಗಂಡ ಕುಡುಕನಾಗಿದ್ದು, ಆತ ಜೂಜಿನಲ್ಲಿ ಹಣವನ್ನೆಲ್ಲಾ ಕಳೆದುಕೊಂಡ ಮೇಲೆ ತನ್ನನ್ನೇ(ಪತ್ನಿ) ಪಣಕ್ಕಿಟ್ಟಿದ್ದ ಎಂದು ಪೊಲೀಸರಿಗೆ ನೀಡಿರುವ ದೂರಿನಲ್ಲಿ ಉಲ್ಲೇಖಿಸಿರುವುದಾಗಿ ವರದಿ ಹೇಳಿದೆ.
ಸಂತ್ರಸ್ತೆ ಗಂಡನ ಗೆಳೆಯ ಅರುಣ್ ಮತ್ತು ಸಂಬಂಧಿ ಅನಿಲ್ ಮನೆಗೆ ಕುಡಿಯಲು ಮತ್ತು ಜೂಜಾಡಲು ಬರುತ್ತಿದ್ದರು ಎಂದು ಮಾಹಿತಿ ನೀಡಿದ್ದು, ಒಂದು ದಿನ ಜೂಜಿನಲ್ಲಿ ಸೋತಾಗ, ಪತ್ನಿಯನ್ನೇ ಪಣಕ್ಕಿಟ್ಟಿದ್ದ. ಈ ಸಂದರ್ಭ ಬಳಸಿಕೊಂಡ ಅನಿಲ್ ಮತ್ತು ಅರುಣ್ ಅತ್ಯಾಚಾರ ಎಸಗಿರುವುದಾಗಿ ದೂರಿನಲ್ಲಿ ವಿವರಿಸಿದ್ದಾಳೆ.
Comments are closed.