ಫುಟ್ಬಾಲ್ ಕ್ಲಬ್ ನ ಟೊಟೆನ್ಹ್ಯಾಮ್ ಹಾಟ್ಸ್ಪುರ್ ತಂಡದ ಖ್ಯಾತ ಆಟಗಾರನೊಬ್ಬ ಕುಡಿದ ಅಮಲಿನಲ್ಲಿ ತನ್ನದೆ ಅಶ್ಲೀಲ ವಿಡಿಯೋವನ್ನು ಸೋಷಿಯಲ್ ಮೀಡಿಯಾದಲ್ಲಿ ಲೈವ್ ಸ್ಟ್ರೀಮ್ ಮಾಡಿ ಅವಾಂತರ ಸೃಷ್ಟಿಸಿದ್ದಾನೆ. ಹೌದು ಇಂಗ್ಲಿಷ್ ಪ್ರೀಮಿಯರ್ ಲೀಗ್ನ ದೈತ್ಯ ಫುಟ್ಬಾಲ್ ಆಟಗಾರ ಮಾಜಿ ಫಾರ್ವರ್ಡ್ ಆಟಗಾರ ಕ್ಲಿಂಟನ್ ಎನ್ಜೀ ಇಂತಹದೊಂದು ಅವಾಂತರ ಎಸಗಿ ಮುಜುಗರಕ್ಕಿಡಾದ ಆಟಗಾರ.
ಇಂಗ್ಲಿಷ್ ಪ್ರೀಮಿಯರ್ ಲೀಗ್ನ ದೈತ್ಯ ಫುಟ್ಬಾಲ್ ಆಟಗಾರ ಮಾಜಿ ಫಾರ್ವರ್ಡ್ ಆಟಗಾರ ಕ್ಲಿಂಟನ್ ಎನ್ಜೀ ಕುಡಿದ ಅಮಲಿನಲ್ಲಿ ತಮ್ಮ ಸ್ನ್ಯಾಪ್ ಚಾಟ್ನಲ್ಲಿ ‘clinton14’ ಐಡಿ ಮೂಲಕ ತಮ್ಮದೇ ಸೆಕ್ಸ್ ವಿಡಿಯೊವನ್ನು ಸೋಷಿಯಲ್ ಮೀಡಿಯಾಗಳಲ್ಲಿ ಲೈವ್ ಆಗಿ ಪ್ರಸಾರ ಮಾಡುವ ಮೂಲಕ ಎಡವಟ್ಟೊಂದನ್ನು ಮಾಡಿಕೊಂಡಿದ್ದಾರೆ.
ಬಳಿಕ ಕುಡಿದ ಅಮಲಿನಿಂದ ಸ್ವಲ್ಪ ಎಚ್ಚರವಾದ ತಕ್ಷಣ ವಿಡಿಯೊವನ್ನು ಡಿಲೀಟ್ ಮಾಡಿ ಲೈವ್ ಸ್ಟ್ರೀಮ್ ಮಾಡಿದ್ದಕ್ಕೆ ಕ್ಷಮೆಯಾಚಿಸಿದ್ದಾರೆ. ಕಂಠಮಟ್ಟ ಕುಡಿದು ಅಪರಿಚಿತ ಮಹಿಳೆಯೊಂದಿಗೆ ತಮ್ಮ ಹೋಟೆಲ್ಗೆ ತೆರಳಿದ್ದ ಕ್ಲಿಂಟನ್ ಎನ್ಜೇ . ಇದೇ ವೇಳೆ ಗೂಗಲ್ ನಲ್ಲಿ ತಮ್ಮ ಸುದ್ದಿಯನ್ನು ಹುಡುಕಲು ಹೋಗಿ “ತಪ್ಪಾದ ಬಟನ್ ಒತ್ತಿದ್ದು , ಅದು ಲೈಪ್ ಸ್ಟ್ರೀಮ್ ಆನ್ ಆಗಿ ತಮ್ಮದೇ ಸೆಕ್ಸ್ ವಿಡಿಯೊವನ್ನು ನೇರ ಪ್ರಸಾರ ಮಾಡಿದ್ದಾರೆ. ಬಳಿಕ ಅರಿವಾದ ನಂತರ “ತಪ್ಪಾದ ಬಟನ್ ಒತ್ತಿದ ಪರಿಣಾಮ ಹೀಗಾಗಿದೆ,” ಎಂದು ತಿಳಿಸಿದ್ದಾರೆ.
ನೂತನ ಕ್ಲಬ್ ಜೊತೆಗೆ ಮಾಡಿಕೊಂಡ ಒಪ್ಪಂದವನ್ನು ಸಂಭ್ರಮಿಸುವ ಭರದಲ್ಲಿ ಇದೇ ಸುದ್ದಿಯನ್ನು ಓದಲು ಹೋಗಿ ತಪ್ಪಾದ ಬಟನ್ ಒತ್ತಿ ಈ ರೀತಿಯಾಗಿದೆ. ಎಂದು ವಿವರಣೆ ನೀಡುತ್ತಾ “ನನ್ನನ್ನು ಕ್ಷಮಿಸಿಬಿಡಿ. ನಾನು ಬಹಳ ಕುಡಿದ ಪರಿಣಾಮ ಹೀಗಾಗಿದೆ ಎಂದು ಹೇಳಿದ್ದಾರೆ. ಆದರೆ ಕ್ಲಿಂಟನ್ ತಮ್ಮ ವಿಡಿಯೊ ಡಿಲೀಟ್ ಮಾಡುವ ಮುನ್ನ ಅವರ ಸೆಕ್ಸ್ ವಿಡಿಯೋವನ್ನು ಸಾವಿರಾರು ಮಂದಿ ವೀಕ್ಷಿಸಿದ್ದರು.
Comments are closed.