ರಾಷ್ಟ್ರೀಯ

ಫೈನ್ ಹಾಕಿದ ಪೊಲೀಸ್ ಠಾಣೆಗೇ ಕರೆಂಟ್ ಕಟ್‌ಮಾಡಿದ ಭೂಪ!!

Pinterest LinkedIn Tumblr


ಸಾಮಾನ್ಯವಾಗಿ ವಾಹನ ಸವಾರರಿಗೆ ಸಂಚಾರ ನಿಯಮ ಉಲ್ಲಂಘನೆ ಮಾಡಿದರೆ ಪೊಲೀಸ್ ಅಧಿಕಾರಿಗಳು ದಂಡ ವಿಧಿಸುವುದು ನೋಡಿರುವುದು ಸಹಜ. ಆದರೆ ಇಲ್ಲೊಬ್ಬ ವ್ಯಕ್ತಿ ಕಾನೂನು ಪಾಠ ಹೇಳಿದ ಟ್ರಾಫಿಕ್ ಪೊಲೀಸ್ ಯೊರ್ವನಿಗೆ ಕಾನೂನು ಪಾಠ ಹೇಳುವ ಮೂಲಕವೇ ತಿರುಗುತ್ತರ ನೀಡಿರುವ ಘಟನೆ ಉತ್ತರ ಪ್ರದೇಶದ ಫರೋಜಾಬಾದ್ ನಲ್ಲಿ ನಡೆದಿದೆ.

ಹೌದು ಮುಳ್ಳನ್ನು ಮುಳ್ಳಿನಿಂದಲೆ ತೆಗೆಯಬೇಕು ಎಂಬ ವಾಕ್ಯದಂತೆ ಉತ್ತರ ಪ್ರದೇಶದಲ್ಲಿ ಹೆಲ್ಮೆಟ್ ಧರಿಸಿಲ್ಲ ಎಂಬ ಕಾರಣಕ್ಕೆ ಟ್ರಾಫಿಕ್ ಪೊಲೀಸ್ ಒಬ್ಬರು ಲೈನ್ ಮ್ಯಾನ್ ಗೆ ದಂಡ ವಿಧಿಸಿ ಕಾನೂನು ಪಾಠ ಮಾಡಿದ್ದಾರೆ. ಇದರಿಂದ ಕೋಪಗೊಂಡ ಲೈನ್ ಮ್ಯಾನ್ ವಿದ್ಯುತ್ ಸ್ಥಗಿಗೊಳಿಸುವ ಮೂಲಕ ಸೇಡು ತೀರಿಸಿಕೊಂಡಿದ್ದಾರೆ.

ಹೌದು ಶ್ರೀನಿವಾಸ್ ಎಂಬ ಲೈನ್ ಮ್ಯಾನ್ ರಿಪೇರಿ ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದ ವೇಳೆ ಟ್ರಾಫಿಕ್ ಪೊಲೀಸರು ಅಡ್ಡ ಹಾಕಿ ಹೆಲ್ಮೆಟ್ ಧರಿಸದೆ ಇದ್ದದಕ್ಕೆ 500 ರೂ ದಂಡ ವಿಧಿಸಿದ್ದಾರೆ. ಇನ್ನೂ ಶ್ರೀನಿವಾಸ್ ಪೊಲೀಸ್ ಗೆ ಎಷ್ಟೇ ಮನವಿ ಮಾಡಿಕೊಂಡರು ಬಿಡದೆ ಆತನಿಗೆ ರಮೇಶ್ ಚಂದ್ರ ಎಂಬ ಪೊಲೀಸ್ ಕಾನೂನಿನ ಪಾಠ ಹೇಳಿ ದಂಡ ವಿಧಿಸಿದ್ದಾರೆ.

ಹೀಗಾಗಿ ಕೋಪಗೊಂಡ ಶ್ರೀನಿವಾಸ್ ರಮೇಶ್ ಚಂದ್ರ ಕಾರ್ಯ ನಿರ್ವಹಿಸುತ್ತಿದ್ದ ಪೊಲೀಸ್ ಠಾಣೆಯ ವಿದ್ಯುತ್ ಬಿಲ್ ನನ್ನು ಪರಿಶೀಲನೆ ನಡೆಸಿದಾಗ 7 ಲಕ್ಷ ರೂ ಬಿಲ್ ಬಾಕಿ ಇರುವುದನ್ನು ಗಮನಿಸಿ ಪೊಲೀಸರಿಗೆ ತಕ್ಕ ಪಾಠ ಕಲಿಸಬೇಕೆಂದು ನಾಲ್ಕೈದು ಗಂಟೆಗಳ ಕಾಲ ಠಾಣೆಯ ವಿದ್ಯುತ್ ನನ್ನು ಸ್ಥಗಿತಗೊಳಿಸಿದ್ದಾರೆ. ಇದರಿಂದ ಠಾಣೆಯಲ್ಲಿನ ಪೊಲೀಸರು ವಿದ್ಯುತ್ ಇಲ್ಲದೆ ಹಲವು ಗಂಟೆಗಳ ಕಾಲ ಪರದಾಡಿದ್ದಾರೆ.

ಸದ್ಯ ಈ ವಿಚಾರವಾಗಿ ಪೊಲೀಸರು ಶ್ರೀನಿವಾಸ್ ರನ್ನು ಪ್ರಶ್ನಿಸಿದಾಗ , ಶ್ರೀನಿವಾಸ್ ಪೊಲೀಸರಿಗೆ ಕಾನೂನು ಪಾಠ ಮಾಡುವ ಮೂಲಕ ಬುದ್ದಿಕಲಿಸಿದ್ದಾರೆ. ಇನ್ನೂ ಬುಧವಾರ ಬಾಕಿ ಬಿಲ್ ನಲ್ಲಿ ಸ್ವಲ್ಪ ಹಣ ಪಾವತಿಸಿದ ನಂತರ ಠಾಣೆಗೆ ವಿದ್ಯುತ್ ನನ್ನು ಕಲ್ಪಿಸಲಾಗಿದೆ.

Comments are closed.