ರಾಷ್ಟ್ರೀಯ

ದೆಹಲಿಯ ಜೆಎನ್ ಯು ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ನಡೆಸಿ ರಸ್ತೆಗೆ ತಳ್ಳಿದ ಕ್ಯಾಬ್ ಚಾಲಕ !

Pinterest LinkedIn Tumblr

 

ನವದೆಹಲಿ: ಜೆಎನ್ ಯು ವಿಶ್ವವಿದ್ಯಾನಿಲಯದ ವಿದ್ಯಾರ್ಥಿನಿಯ ಮೇಲೆ ಕ್ಯಾಬ್ ಡ್ರೈವರ್ ಅತ್ಯಾಚಾರವೆಸಗಿದ್ದು, ರಸ್ತೆ ಮೇಲೆ ಆಕೆಯನ್ನು ತಳ್ಳಿದ್ದಾನೆ.

ದೆಹಲಿಯ ತನ್ನ ಸ್ನೇಹಿತರ ಮನೆಯಲ್ಲಿ ಹುಟ್ಟುಹಬ್ಬದ ಸಮಾರಂಭವನ್ನು ಮುಕ್ತಾಯಗೊಳಿಸಿ ವಾಪಸ್ಸಾಗಲು ಕಾಯ್ದಿರಿಸಿದ್ದ ಕ್ಯಾಬ್ ನಲ್ಲಿ ಈ ಘಟನೆ ನಡೆದಿದೆ.

’ಜೆಎನ್ ಯು ಗೆ ವಾಪಸ್ಸಾಗುತ್ತಿದ್ದ ಮಾರ್ಗ ಮಧ್ಯದಲ್ಲಿ ಈ ಘಟನೆ ನಡೆದಿದ್ದು, ಅತ್ಯಾಚಾರವೆಸಗಿದ ಬಳಿಕ ಐಐಟಿ-ದೆಹಲಿ ಬಳಿಯ ರಸ್ತೆಯಲ್ಲಿ ತನ್ನನ್ನು ತಳ್ಳಿದ್ದಾನೆ ಎಂದು ಸಂತ್ರಸ್ತ ಯುವತಿ ಆರೋಪಿಸಿದ್ದಾಳೆ.

ಚಾಲನೆಯಲ್ಲಿದ್ದ ಕಾರಿನಲ್ಲಿ ಸತತ ಮೂರು ಗಂಟೆಗಳ ಕಾಲ ತನ್ನ ಮೇಲೆ ಅತ್ಯಾಚಾರ ನಡೆದಿದ್ದು, ರಸ್ತೆ ಬದಿಯಲ್ಲಿ ಪ್ರಜ್ಞಾಹೀನ ಸ್ಥಿತಿಒಯಲ್ಲಿ ಪತ್ತೆಯಾಗಿದ್ದಳು.

Comments are closed.