ಬಾಲಿವುಡ್ ಅಂಗಳದ ದಿ ಮೋಸ್ಟ್ ಕ್ಯೂಟ್ ಕಪಲ್ ಎಂದರೆ ಅದು ಹ್ಯಾಂಡ್ಸಮ್ ಹೀರೋ ರಣವೀರ್ ಹಾಗೂ ಕ್ಯೂಟ್ ಡಾಲ್ ನಟಿ ದೀಪಿಕಾಪಡುಕೋಣೆ. ಆದರೇ ಇತ್ತೀಚಿಗೆ ಬ್ಯಾಕ್ ಟು ಬ್ಯಾಕ್ ಚಿತ್ರಗಳಲ್ಲಿ ಬ್ಯುಸಿಯಾಗಿರುವ ನಟ ರಣವೀರ್ ರೋಸ್ ಕೊಟ್ಟು, ಕಿಸ್ ನೀಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ. ಆದರೆ ರಣವೀರ್ ಕಿಸ್ ಮಾಡಿದ್ದು, ದೀಪಿಕಾ ಪಡುಕೋಣೆಗಲ್ಲ….ಇದೇನಿದು ಹೊಸ ವಿಷ್ಯ ಅಂದ್ರಾ ಈ ಸ್ಟೋರಿ ನೋಡಿ.
ಅಯ್ಯೋ ರಣ್ವೀರ್ ಡಿಪ್ಪಿ ಗೆ ಕಿಸ್ ನೀಡುವುದು ಒಂದು ವಿಷಯನ ಅಂದ್ಕೋಬೇಡಿ. ಯಾಕಂದ್ರೆ ವಿಷಯ ಅದಲ್ಲ. ರಣ್ವೀರ್ ಕೀಸ್ ನೀಡಿರುವುದು ಪತ್ನಿ ದೀಪಿಕಾಳಿಗೆ ಅಲ್ಲವೇ ಅಲ್ಲ.
ಶಾಕ್ ಆಯ್ತಾ.. ಇಂತಹ ವಿಚಾರ ತಿಳಿದ ಮೇಲೆ ಶಾಕ್ ಆಗಲೇ ಬೇಕಲ್ವ. ಈ ಕ್ಯೂಟ್ ಪೇರ್ ನಡುವೆ ವಿರಸ ಏನಾದ್ರು ಏರ್ಪಟ್ಟಿರಬಹುದಾ. ದಾಂಪತ್ಯದಲ್ಲಿ ಏನಾದರು ಕಿರಿಕಿರಿ ಉಂಟಾಗಿ ರಣ್ವೀರ್ ಬೇರೆ ಹುಡುಗಿಯ ಜೊತೆ ಬ್ಯುಸಿ ಆಗ್ಬಿಟ್ರಾ ಅಂತೆಲ್ಲ ಪ್ರಶ್ನೆಗಳು ಉದ್ಬವವಾಗುತ್ತಿದ್ಯಾ, ನಿಮ್ಮ ಕ್ಯೂರಿಯಾಸಿಟಿಗೆ ಉತ್ತರು ಮುಂದೆ ಹೇಳ್ತೀವಿ ಓದಿ.
ಬಾಲಿವುಡ್ ನ ಸ್ಟಾರ್ ನಟ ರಣ್ವೀರ್ ತಮ್ಮ 83ನೇ ಚಿತ್ರದ ಶೂಟಿಂಗ್ಗಾಗಿ ಲಂಡನ್ ಪ್ರವಾಸದಲ್ಲಿದ್ದು, ಚಿತ್ರದ ಪ್ರಮುಖ ದೃಶ್ಯವೊಂದನ್ನು ಲಂಡನ್ನ ಸೌತ್ಹಾಲ್ನಲ್ಲಿ ಚಿತ್ರೀಕರಣ ಮಾಡಲಾಯ್ತು. ಈ ವೇಳೆ ರಣವೀರ್ ಶೂಟಿಂಗ್ ಸೆಟ್ಗೆ ಬರ್ತಿದ್ದಂತೆ ಈ ಸ್ಟಾರ್ ನಟನ ಫ್ಯಾನ್ಸ್ ಸಾಗರದೋಪಾದಿಯಲ್ಲಿ ಹರಿದುಬಂದರು.
ವಿಶೇಷ ಎಂದರೆ ಕಾಲಿನ ಸ್ವಾದೀನ ಕಳೆದು ಕೊಂಡು ವೀಲ್ಚೇರ್ನಲ್ಲಿ ಜೀವನ ನಡೆಸುತ್ತಿರುವ ವೃದ್ಧೆಯೊಬ್ಬರು ಬಹಳ ಉತ್ಸುಕತೆಯಿಂದ ತನ್ನ ನೆಚ್ಚಿನ ನಟ ರಣ್ವೀರ್ ನೋಡಲು ಬಂದಿದ್ದರು. ಅಜ್ಜಿಯನ್ನು ನೋಡಿದ ರಣ್ವೀರ್ ಪ್ರೀತಿಯಿಂದ ಅವರನ್ನು ಮಾತಾಡಿಸಿ ಗುಲಾಬಿ ಹೂವನ್ನು ನೀಡಿ ಸಿಹಿ ಮುತ್ತೊಂದನ್ನು ಕೊಟ್ಟರು.ಈ ವೀಡಿಯೋವನ್ನು ರಣ್ವೀರ್ ಇನ್ಸ್ಟಾಗ್ರಾಮ್ನಲ್ಲಿ ಅಪ್ಲೋಡ್ ಮಾಡಿದ್ದು, ಈ ವಿಡಿಯೋ ಇದೀಗಾ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸೌಂಡ್ ಮಾಡ್ತಿದೆ.
Comments are closed.