ಮನೋರಂಜನೆ

ಬಾಲಿವುಡ್ ನಟಿ ಸೋನಾಕ್ಷಿ ಸಿನ್ಹಾ ಬಂಧನ?

Pinterest LinkedIn Tumblr


ಮುಂಬೈ: ಬಾಲಿವುಡ್ ನಟಿ ಸೋನಾಕ್ಷಿ ಸಿನ್ಹಾ ಅವರನ್ನು ಅರೆಸ್ಟ್ ಮಾಡಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಸೋನಾಕ್ಷಿ ಸಿನ್ಹಾ ಅವರ ಕೈಯಿಗೆ ಕೋಳ ಹಾಕುತ್ತಿದ್ದಾರೆ. ಈ ವೇಳೆ ಸೋನಾಕ್ಷಿ ಸಿನ್ಹಾ ‘ಏನೂ ಮಾಡುತ್ತಿದ್ದೀರಾ? ನೀವು ನನಗೆ ಹೀಗೆ ಹೇಗೆ ಅರೆಸ್ಟ್ ಮಾಡಲು ಸಾಧ್ಯ? ಎಂದು ಹೇಳುತ್ತಿದ್ದಾರೆ.

ಸೋನಾಕ್ಷಿ ಅವರ ಈ ವಿಡಿಯೋ ಅಸಲಿಯೋ, ನಕಲಿಯೋ ಎಂಬುದು ಗೊತ್ತಿಲ್ಲ. ಈ ವಿಡಿಯೋ ಮೂಲಕ ಸೋನಾಕ್ಷಿ ಅವರ ಮುಂಬರುವ ‘ಮಿಶನ್ ಮಂಗಲ್’ ಚಿತ್ರವನ್ನು ಪ್ರಮೋಟ್ ಮಾಡುತ್ತಿದ್ದಾರಾ ಎಂಬುದು ಕೂಡ ತಿಳಿದು ಬಂದಿಲ್ಲ. ಆದರೆ ಈ ವಿಡಿಯೋ ನೋಡಿ ಹಲವರು ಸೋನಾಕ್ಷಿ ಕಾನೂನು ಸಮಸ್ಯೆಯಲ್ಲಿ ಸಿಕ್ಕಿಹಾಕಿಕೊಂಡಿದ್ದಾರೆ ಎಂದು ಹೇಳುತ್ತಿದ್ದಾರೆ.

ಈ ವಿಡಿಯೋ ಜೊತೆಗೆ ಸೋನಾಕ್ಷಿ ಅವರ ಮತ್ತೊಂದು ವಿಡಿಯೋ ಕೂಡ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ಸೋನಾಕ್ಷಿ ಬಂಧನದಿಂದ ತಪ್ಪಿಸಿಕೊಂಡು ಹೊರ ಹೋಗುತ್ತಿರುವುದು ಕ್ಯಾಮೆರಾದಲ್ಲಿ ಸೆರೆ ಆಗಿದೆ.

ಸದ್ಯ ಸೋನಾಕ್ಷಿ ಅವರ ಮಿಶನ್ ಮಂಗಲ್ ಚಿತ್ರ ಚಂದ್ರಯಾನದ ಕತೆಯಾಗಿದ್ದು, ಈ ಚಿತ್ರದಲ್ಲಿ ನಟ ಅಕ್ಷಯ್ ಕುಮಾರ್, ನಟಿಯರಾದ ವಿದ್ಯಾ ಬಾಲನ್, ತಾಪ್ಸಿ ಪನ್ನು, ನಿತ್ಯಾ ಮೆನನ್ ಸೇರಿದಂತೆ ಹಲವು ಕಲಾವಿದರು ನಟಿಸಿದ್ದಾರೆ.

Comments are closed.