ಬೆಂಗಳೂರು: ಶಿವಾಜಿನಗರ ಕ್ಷೇತ್ರದ ಕಾಂಗ್ರೆಸ್ ಅನರ್ಹ ಶಾಸಕ ರೋಷನ್ ಬೇಗ್ ಅವರು ತ್ರಿಶಂಕು ಪರಿಸ್ಥಿತಿಗೆ ಸಿಲುಕಿದ್ರಾ(?) ಎಂಬ ಅನುಮಾನಗಳು ಮೂಡುತ್ತಿದ್ದು, ಬಿಜೆಪಿಯತ್ತ ಹೋಗಲು ರೋಷನ್ ಬೇಗ್ ಮೀನಾಮೇಷ ಏಣಿಸುತ್ತಿರುವುದೇ ಇದೇ ಈ ಅನುಮಾನಕ್ಕೆ ಕಾರಣವಾಗಿದೆ.
ಈ ಹಿಂದೆ ಇದ್ದ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರವನ್ನು ರಾಜೀನಾಮೆ ನೀಡುವ ಮೂಲಕ ಉರುಳಿಸಿದ್ದರು. ಅಷ್ಟೇ ಅಲ್ಲದೇ ಬಳಿಕ ಬಿಜೆಪಿಗೆ ಹೋಗಲು ಮಾತುಕತೆಯನ್ನು ಕೂಡ ನಡೆಸಿದ್ದರು ಆದರೆ ರೋಷನ್ ಬೇಗ್ ಮೊದಲ ಮನವಿಗೆ ಬಿಜೆಪಿ ಡೋಂಟ್ ಕೇರ್ ಎಂದಿದೆ.
ನೀವು ರಿಸೈನ್ ಮಾಡಿ ಸರ್ಕಾರವನ್ನೇನೋ ಉರುಳಿಸಿದಿರಿ, ಹಾಗಂತ ಅಂತ ನಿಮ್ಮ ಎಲ್ಲಾ ಮಾತನ್ನು ಕೇಳೋಕೆ ಆಗುತ್ತಾ(?) ಎಂದು ಕೈ ಅನರ್ಹ ರೋಷನ್ ಬೇಗ್ಗೆ ಪರೋಕ್ಷವಾಗಿ ಭಾರತೀಯ ಜನತಾ ಪಾರ್ಟಿ ಟಾಂಗ್ ಕೊಟ್ಟಿದೆ.
ಅದುವಲ್ಲದೇ ಸೋಮವಾರ ಮುಸ್ಲಿಂ ಭಾಂದವರ ಬಕ್ರಿದ್ ಹಬ್ಬದ ಹಿನ್ನೆಲೆಯಲ್ಲಿ ಕೂರ್ಬಾನಿಗೆ ಅವಕಾಶ ನೀಡುವಂತೆ ರೋಷನ್ ಬೇಗ್ ಅವರು ಪತ್ರ ಬರೆದಿದ್ದರು ಇದನ್ನು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರಿಗೆ ರವಾನಿಸಲಾಗಿತ್ತು ಆದರೆ ಬಿಜೆಪಿಯೂ ಗೋಹತ್ಯೆ ಮಾಡದಂತೆ ಪೊಲೀಸ್ ಆಯುಕ್ತರಿಗೆ ದೂರು ನೀಡಿದೆ.
ಹೀಗಾಗಿ ಅನರ್ಹ ಶಾಸಕ ರೋಷನ್ ಬೇಗ್ ಅವರು ಸಂದಿಗ್ಧ ಪರಿಸ್ಥಿತಿ ಸಿಲುಕಿದ್ದಾರೆ ಇತ್ತ ಸಮುದಾಯದ ಕೆಂಗಣ್ಣಿಗೂ ಗುರಿಯಾಗಿದ್ದು ಅತ್ತ ಬಿಜೆಪಿಗೆ ಹೋದರೆ ಮತ್ತಷ್ಟು ಕಷ್ಟ ಎಂಬ ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಹೀಗಾಗಿ ಸದ್ಯ ರೋಷನ್ ಬೇಗ್ ಅವರು ಬಿಜೆಪಿಯತ್ತ ಮುಖ ಮಾಡಲು ಹಿಂದೇಟು ಹಾಕುತ್ತಿದ್ದಾರೆ. ಅತ್ತ ಪಕ್ಷದಲ್ಲೇ ಉಳಿಯಲು ಉಚ್ಚಾಟನೆಯ ಶಿಕ್ಷೆ ಆಗಿದೆ ಹೀಗಾಗಿ ಗೊಂದಲದ ಅವರು ಪರಿಸ್ಥಿತಿಯಲ್ಲಿದ್ದಾರೆ.
Comments are closed.