ಬೆಂಗಳೂರು: ನಟ ಕಿಚ್ಚಾ ಸುದೀಪ್ ಅವರ ಇತ್ತೀಚೆಗಿನ ಟ್ವೀಟ್ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಕಿಚ್ಚನ ಟ್ವೀಟ್ ಹೇಳಿಕೆ ಕುರಿತು ಸಿನಿಪ್ರಿಯರಲ್ಲಿ ಚರ್ಚೆ ಆರಂಭವಾಗಿದೆ.
ಹೌದು.. ನಟ ಕಿಚ್ಚಾ ಸುದೀಪ್ ಸಾಮಾಜಿಕ ಜಾಲತಾಣಗಳಲ್ಲಿ ಆ್ಯಕ್ಟಿವ್ ಆಗಿರುತ್ತಾರೆ. ಆದರೆ ಸುದೀಪ್ ಈ ವರೆಗೂ ಯಾರಿಗೂ ಟಾಂಗ್ ನೀಡುವ ಉದ್ದೇಶದಿಂದ ಟ್ವಿಟರ್ ಬಳಕೆ ಮಾಡಿಲ್ಲ. ಆದರೆ ಅವರ ಒಂದು ಟ್ವೀಟ್ ಈ ಕುರಿತಂತೆ ಹಲವು ಪ್ರಶ್ನೆಗಳನ್ನು ಹುಟ್ಟು ಹಾಕಿದೆ.
ಇಷ್ಟಕ್ಕೂ ಆ ಟ್ವೀಟ್ ನಲ್ಲಿ ಏನಿದೆ ಗೊತ್ತಾ?
‘ಒಬ್ಬ ನಿಜವಾದ ಪುರುಷ ತಾನು ಗಂಡಸು ಎಂದು ಪ್ರೂವ್ ಮಾಡಲು ಮದ್ಯಪಾನ ಮಾಡುವುದಿಲ್ಲ. ಹಾಗೇ ಕತ್ತಲಾಗಲಿ ಎಂದು ಕಾಯುವುದೂ ಇಲ್ಲ.’ ಇದು ನಾನು ಎಲ್ಲೋ ಓದಿದ ಸುಂದರ ಸಾಲುಗಳು. ತುಂಬ ಅದ್ಭುತವಾದ ಅರ್ಥ ಕೊಡುತ್ತದೆ ಎಂದು ಕಿಚ್ಚ ಸುದೀಪ್ ಟ್ವೀಟ್ ಮಾಡಿದ್ದಾರೆ.
ಹಾಗೇ ತಮ್ಮ ಫೋಟೋ ಇರುವ ಚಿತ್ರವನ್ನು ಪೋಸ್ಟ್ ಮಾಡಿದ್ದು, ಅದರಲ್ಲಿ ಕೂಡ ನಾಲ್ಕು ಸಾಲು ಬರೆದಿದ್ದು, ‘ಏನನ್ನೋ ಸಾಬೀತು ಮಾಡುವುದಕ್ಕೋಸ್ಕರ ನಾನು ಯಾರೆಂದರೆ ಅವರ ಜತೆಗೆ ಹೋರಾಟಕ್ಕೆ ಇಳಿಯುವುದಿಲ್ಲ. ನನ್ನ ಎದುರಾಳಿಗೆ ನನ್ನೊಂದಿಗೆ ಫೈಟ್ ಮಾಡಲು ಯೋಗ್ಯತೆ ಇರಬೇಕು. ಅಂದಾಗ ಮಾತ್ರ ನಾನೂ ಫೈಟ್ ಮಾಡುತ್ತೇನೆ’ ಎಂದು ಹೇಳಿದ್ದಾರೆ.
Comments are closed.