ಕರಾವಳಿ

ಸ್ತ್ರೀಯರು ಕಾಲುಂಗರವನ್ನು ಧರಿಸುವುದರಿಂದ ಏನೆಲ್ಲ ಉಪಯೋಗ ಬಲ್ಲಿರಾ..?

Pinterest LinkedIn Tumblr

ಮದುವೆಯಾದ ಹೆಣ್ಣು ಮಕ್ಕಳ ಕಾಲಿಗೆ ಮದುವೆಯ ದಿನ ಗಂಡನ ಕೈಯಿಂದ ಕಾಲಿನ ಬೆರಳಿಗೆ ಕಾಲುಂಗರವನ್ನು ಹಾಕಿಸುತ್ತಾರೆ ಅಂದಿನಿಂದ ಅವರು ಕಾಲುಂಗರವನ್ನು ಬಿಚ್ಚುವ ಆಗಿಲ್ಲ ಎಂಬುದು ನಮ್ಮ ಹಿಂದೂ ಸಂಪ್ರದಾಯದವಾಗಿದೆ ಮದುವೆಯಾದ ಮಹಿಳೆಯರು ಕಾಲುಂಗರವನ್ನು ಧರಿಸುವುದರಿಂದ ಆ ಮಹಿಳೆಗೆ ಮದುವೆ ಆಗಿದೆ ಎಂಬುದು ಗೊತ್ತಾಗುತ್ತದೆ ಇದರ ಜೊತೆಗೆ ಅವರ ಆರೋಗ್ಯವನ್ನು ಕಾಪಾಡಲು ಕೂಡ ಸಹಾಯ ಮಾಡುತ್ತದೆ. ಸಾಮಾನ್ಯವಾಗಿ ಬೆಳ್ಳಿಯ ಕಾಲುಂಗರವನ್ನೇ ಧರಿಸುತ್ತಾರೆ ಆದರೆ ಯಾಕೆ ಬೆಳ್ಳಿಯ ಕಾಲುಂಗರವನ್ನು ಧರಿಸುತ್ತಾರೆ ಗೊತ್ತೇ ಬೆಳ್ಳಿಯ ಕಾಲುಂಗುರವನ್ನು ಧರಿಸುವುದರಿಂದ ದೇಹದಲ್ಲಿನ ಧನಾತ್ಮಕ ಶಕ್ತಿಯನ್ನು ಮೇಲ್ಮುಖ ವಾಗಿ ಹರಿಸುತ್ತದೆ ಜೊತೆಗೆ ದೇಹದಿಂದ ಬರುವ ಋಣಾತ್ಮಕ ಅಂಶಗಳನ್ನು ಬೆರಳಿನ ಮೂಲಕ ಭೂಮಿಗೆ ಕಳುಹಿಸುತ್ತದೆ ಅದಕ್ಕಾಗಿಯೇ ಎಲ್ಲರೂ ಸಹ ಬೆಳ್ಳಿಯ ಕಾಲುಂಗರವನ್ನು ಧರಿಸುತ್ತಾರೆ.

ಮದುವೆಯಾದ ಸ್ತ್ರೀಯರು ಕಾಲುಂಗರವನ್ನು ಧರಿಸುವುದರಿಂದ ಏನೆಲ್ಲ ಉಪಯೋಗ ಆಗುತ್ತದೆ ಗೊತ್ತೇ. ಕಾಲುಂಗುರಗಳನ್ನು ಧರಿಸುವು ದರಿಂದ ಸ್ತ್ರೀಯರಿಗೆ ಸ್ತ್ರೀಧರ್ಮದ ಬಗ್ಗೆ. ಕೆಲಸ ಕರ್ತವ್ಯಗಳ ಬಗ್ಗೆ. ತಮ್ಮ ಅರಿವಾಗುತ್ತದೆ. ಸಾಮಾನ್ಯವಾಗಿ ಕಾಲುಂಗುರಗಳು ಗೋಲಾ ಕಾರದಲ್ಲಿ ಇರುತ್ತವೆ ಇವು ಬ್ರಹ್ಮಾಂಡದಿಂದ ಬರುವಂತಹ ಇಚ್ಛಾಲಹರಿಗಳನ್ನು ಗ್ರಹಿಸುವ ಮತ್ತು ಸಂಗ್ರಹಿಸಿಡುವ ಕ್ಷಮತೆಯಿರುವುದ ರಿಂದ ಇಚ್ಛಾಶಕ್ತಿಯ ಲಹರಿಗಳ ಸ್ಪರ್ಶದಿಂದ ಸ್ತ್ರೀಯರ ಪ್ರಾಣ ದೇಹ ಶುದ್ಧಿಯಾಗುತ್ತದೆ. ವಾಯುಮಂಡಲದಲ್ಲಿರುವ ಕೆಟ್ಟ ಶಕ್ತಿಗಳು ಸ್ತ್ರೀಯರ ಕಾಲುಗಳಿಂದ ಅವರ ಶರೀರದಕ್ಕೆ ಪ್ರವೇಶಿಸುವ ಪ್ರಮಾಣವು ಕಡಿಮೆ ಮಾಡಲು ಸಹಕಾರಿಯಾಗುತ್ತದೆ.

ಎರಡೂ ಪಾದಗಳಲ್ಲಿ ಕಾಲುಂಗುರಗಳನ್ನು ಧರಿಸುವುದರಿಂದ, ಸ್ತ್ರೀಯರ ಋತುಚಕ್ರವು ನಿಯಮಿತಗೊಂಡು, ಸಮರ್ಪಕವಾದ ಅಂತರದಲ್ಲಿ ಉಂಟಾಗುತ್ತದೇ. ಕಾಲುಂಗರವನ್ನು ಧರಿಸುವುದರಿಂದ ದೇಹದ ಎಲ್ಲ ಭಾಗಗಳಿಗೂ ಕೂಡ ರಕ್ತದ ಪರಿಚಲನೆ ಸರಾಗವಾಗಿ ಅರಿಯುತ್ತದೆ. ಕಾಲಿನ ಎರಡನೇ ಬೆರಳು ದೇಹದ ಎಲ್ಲ ಭಾಗಗಳಿಗೂ ಕೂಡ ಸಂಪರ್ಕವನ್ನು ಹೊಂದಿರುವುದರಿಂದ ಈ ಬೆರಳಿಗೆ ಕಾಲುಂಗರ ಧರಿಸುವುದರಿಂದ ಮಹಿಳೆಗೆ ಸಂಬಂಧ ಪಟ್ಟ ಎಲ್ಲ ರೀತಿಯ ಸಮಸ್ಯೆಗಳು ನಿವಾರಣೆ ಆಗುತ್ತವೆ. ಬೆಳ್ಳಿಯು ಎಲ್ಲ ಲೋಹಗಳಿಗಿಂತಲೂ ಹೆಚ್ಚು ಉಷ್ಣ ವಾಹಕತೆಯನ್ನು ಹೊಂದಿದೆ ಹಾಗಾಗಿ ಇದು ದೇಹದಲ್ಲಿನ ಅಧಿಕ ಉಷ್ಣತೆಯನ್ನು ಕಡಿಮೆ ಮಾಡುತ್ತದೆ.

ಕಾಲುಂಗರವನ್ನು ಧರಿಸುವುದರಿಂದ ವಿವಾಹಿತ ಸ್ತ್ರೀಯರಿಗೆ, ಗರ್ಭ ಧರಿಸಲು ಸಹಕಾರಿಯಾಗುತ್ತದೆ. ಜೊತೆಗೆ ನಿರ್ದಿಷ್ಟ ನರವೊಂದು ಕಾಲಿನ ಎರಡನೆಯ ಬೆರಳನ್ನು ಗರ್ಭಾಶಯಕ್ಕೆ ಸಂಪರ್ಕಿಸುವಾಗ, ಅದು ಹೃದಯದ ಮೂಲಕ ಹಾದುಹೋಗುತ್ತದೆ ಎಂದು ಕೂಡ ಹೇಳಲಾಗುತ್ತದೆ. ಅದ್ದರಿಂದ ಕಾಲುಂಗುರಗಳನ್ನು ಯಾವಾಗಲೂ ಬಲ ಮತ್ತು ಎಡ ಪಾದಗಳ ಎರಡನೆಯ ಬೆರಳುಗಳಿಗೇ ಧರಿಸುತ್ತಾರೆ. ಬಲ ಮತ್ತು ಎಡ ಪಾದಗಳ ಎರಡನೇ ಬೆರಳಿಗೆ ಕಾಲುಂಗರವನ್ನು ಧರಿಸುವುದರಿಂದ ಮಹಿಳೆಯರ ಗರ್ಭಾಶಯವನ್ನು ನಿಯಂತ್ರಿಸುತ್ತದೆ ಮತ್ತು ಗರ್ಭಾಶಯಕ್ಕೆ ಸಮಪ್ರಮಾಣದ, ಸಂತುಲಿತ ರಕ್ತದೊತ್ತಡವನ್ನು ನಿರ್ವಹಿಸುವುದರ ಮೂಲಕ ಅದರ ಆರೋಗ್ಯವನ್ನು ಕಾಪಾಡುತ್ತದೆ.

ಹಾಗೆಯೇ ಸಾಮಾನ್ಯವಾಗಿ ಕಾಲುಂಗರವನ್ನು ಬೆಳ್ಳಿಯದ್ದೇ ಹಾಕುತ್ತಾರೆ ಏಕೆಂದರೆ ಬೆಳ್ಳಿ ಒಂದು ಉತ್ತಮ ವಾಹಕವಾಗಿದ್ದು, ಅದರಿಂದ ಮಾಡಲ್ಪಟ್ಟ ಕಾಲುಂಗುರಗಳು, ಭೂಮಿಯ ಧ್ರುವ ಶಕ್ತಿಗಳನ್ನು ಹೀರಿ ಶರೀರಕ್ಕೆ ವರ್ಗಾಯಿಸುತ್ತವೆ ಹಾಗೂ ತನ್ಮೂಲಕ ಸಂಪೂರ್ಣ ದೈಹಿಕ ವ್ಯವಸ್ಥೆಗೆ ಹೊಸ ಚೈತನ್ಯವನ್ನು ಒದಗಿಸುತ್ತವೆ. ಕಾಲುಂಗುರವನ್ನು ಧರಿಸುವುದರಿಂದ ಗಂಡ ಹೆಂಡತಿಯರ ಲೈಂಗಿಕ ಜೀವನ ಕೂಡ ತೃಪ್ತಿಕರವಾಗಿರುತ್ತದೆ. ಆದರೆ ಇತ್ತೀಚೆಗೆ ಬೆಳ್ಳಿಯ ಕಾಲುಂಗರದ ಜೊತೆಗೆ ಶ್ರೀಮಂತರು ಚಿನ್ನದ ಕಾಲುಂಗರವನ್ನು ತೊಡಲು ಶುರು ಮಾಡಿದ್ದಾರೆ ಆದರೆ ಚಿನ್ನದಲ್ಲಿ ಸಾಕ್ಷಾತ್ ಲಕ್ಷ್ಮಿ ದೇವಿ ನೆಲೆಸಿರುವ ಕಾರಣ ಚಿನ್ನದ ಕಾಲುಂಗರವನ್ನು ಧರಿಸುವುದು ಒಳ್ಳೆಯದಲ್ಲ ಆದಷ್ಟು ಬೆಳ್ಳಿಯ ಕಾಲುಂಗರವನ್ನು ಧರಿಸಿ ಶಾಸ್ತ್ರ ಸಂಪ್ರದಾಯವನ್ನು ಉಳಿಸುವ ಜೊತೆಗೆ ಆರೋಗ್ಯವನ್ನು ಕಾಪಾಡಿಕೊಳ್ಳಿ.

Comments are closed.