ಕರಾವಳಿ

ಆರ್ಥಿಕವಾಗಿ ಸಂಕಷ್ಟದಲ್ಲಿರುವವರಿಗೆ ಪರಿಹಾರ ಒದಗಿಸುವುದು ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಕರ್ತವ್ಯ : ಐಕಳ ಹರೀಶ್ ಶೆಟ್ಟಿ

Pinterest LinkedIn Tumblr

ಮಂಗಳೂರು: ಬಂಟ ಸಮಾಜದಲ್ಲಿ ಆರ್ಥಿಕವಾಗಿ ಸಂಕಷ್ಟದಲ್ಲಿರುವವರನ್ನು ಗುರುತಿಸಿ ಅವರಿಗೆ ಪರಿಹಾರ ಒದಗಿಸಿಕೊಡುವುದು ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಕರ್ತವ್ಯವಾಗಿದೆ ಎಂದು ಬಂಟರ ಸಂಘದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ತಿಳಿಸಿದರು.
ಬಂಟ್ಸ್‌ಹಾಸ್ಟೆಲ್‌ನಲ್ಲಿರುವ ಅಮರತೋತ್ಸವ ಕಟ್ಟಡದಲ್ಲಿ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಕಚೇರಿಯಲ್ಲಿ ೪೦ ಮಂದಿ ಫಲಾನುಭವಿಗಳಿಗೆ ಪರಿಹಾರ ಧನ ವಿತರಿಸಿ ಮಾತನಾಡಿದರು.

ಎಪ್ರಿಲ್ 1ರಿಂದ ಆಗೋಸ್ಟ್ ವರೆಗೆ ಸುಮಾರು 63ಲಕ್ಷ ರೂವರೆಗೆ ಆರ್ಥಿಕವಾಗಿ ಸಂಕಷ್ಟದಲ್ಲಿರುವವರಿಗೆ ಪರಿಹಾರಧನವನ್ನು ವಿತರಿಸಲಾಗಿದೆ. ಆಗಸ್ಟ್ ತಿಂಗಳಷ್ಟೇ ಹತ್ತು ಲಕ್ಷ ಐದು ಸಾವಿರರೂ. ಹಣವನ್ನು ವೈದ್ಯಕೀಯ ನೆರವು ವಿದ್ಯಾಭ್ಯಾಸಕ್ಕೆ ಮನೆ ರಿಪೇರಿ ಹಾಗೂ ಮನೆ ನಿರ್ಮಾಣಕ್ಕೆ ಹಣವನ್ನು ನೀಡಲಾಯಿತು ಎಂದು ಅವರು ತಿಳಿಸಿದರು.

ಖಾಯಿಲೆಗೆ ತುತ್ತಾಗಿರುವ ಸುರೇಖಾ ಕಾರ್ಕಳ, ರಾಘವೇಂಧ್ರ ಶೆಟ್ಟಿ ಕುಂದಾಪುರ, ಚಂದ್ರಶೇಖರ ಅಡಪ ಬಂಟ್ವಾಳ, ವಸಂತಿ ಶೆಟ್ಟಿ ಪುತ್ತೂರು, ದಿನೇಶ್ ರೈ ಸೋಮೇಶ್ವರ, ಪ್ರೇಮಲತಾ ಶೆಟ್ಟಿ ಕಾಸರಗೋಡು ಗಣೇಶ್ ಶೆಟ್ಟಿ ಕರ್ನಿರೆ ಮೊದಲಾದವರಿಗೆ ಪರಿಹಾರಧನವನ್ನು ವಿತರಿಸಲಾಯಿತು.

ಅದೇ ರೀತಿ ವಿದ್ಯಾಭ್ಯಾಸಕ್ಕೆ ನೆರವು ಕೋರಿ ಅರ್ಜಿ ಸಲ್ಲಿಸಿದ ಸವಿತಾ ಶೆಟ್ಟಿ ಮುಲ್ಕಿ, ಅನುಷಾ ಶೆಟ್ಟಿ ಮೂಡಬಿದ್ರೆ, ಐಸಿರಾ ಎನ್ ಶೆಟ್ಟಿ ಮಂಗಳೂರು, ಲೋಲಾಕ್ಷಿ ಶೆಟ್ಟಿ, ಸಾಹಿಸ್ಪೂರ್ತಿ ಭಂಡಾರಿ ಕಾಸರಗೋಡು, ಶಕುಂತಳಾ ಶೆಟ್ಟಿ, ಮುಕ್ತಾ ಜೆಪ್ಪು, ಪ್ರತಿಭಾ ಶೆಟ್ಟಿ ಸುರತ್ಕಲ್, ಶಬರೀಷ್ ಶೆಟ್ಟಿ ಉಡುಪಿ ಮೊದಲಾದವರಿಗೆ ನೆರವು ನೀಡಲಾಯಿತು.

ಇದೇ ವೇಳೆ ದ್ವಿತೀಯ ಪಿಯುಸಿಯಲ್ಲಿ 98.67 ಶೇ. ಅಂಕ ಗಳಿಸಿದ ಶಿವಮೊಗ್ಗ ವಿಶಾಲ ಕಾಲೇಜಿನ ಶಬರೀಷ್ ಎ. ಶೆಟ್ಟಿ ಅವರನ್ನು ಸನ್ಮಾನಿಸಿ ಸಿ‌ಎ ಮಾಡಲು ಧನ ಸಹಾಯ ವಿತರಿಸಲಾಯಿತು.

ವಿದ್ಯಾರ್ಥಿಗಳು ಸಮಾಜದ ಆಸ್ತಿ. ಹೀಗಾಗಿ ಜಾಗತಿಕ ಬಂಟರ ಸಂಘಗಳ ಒಕ್ಕೂಟವು ನಿರಂತರವಾಗಿ ವಿದ್ಯಾರ್ಥಿವೇತನವನ್ನು ವಿಸ್ತರಿಸುತ್ತಾ ಬಂದಿದೆ ಎಂದು ಸಂಘದ ಉಪಾಧ್ಯಕ್ಷ ಕರ್ನಿರೆ ವಿಶ್ವನಾಥ ಶೆಟ್ಟಿ ತಿಳಿಸಿದರು. ಸಂಘದ ಪ್ರಧಾನ ಕಾರ್ಯದರ್ಶಿ ಜಯಕರ ಶೆಟ್ಟಿ ಇಂದ್ರಾಳಿ ಅವರು ಮಾತನಾಡಿ, ಐಕಳ ಹರೀಶ್ ಶೆಟ್ಟಿ ಒಕ್ಕೂಟದ ಅಧ್ಯಕ್ಷರಾದ ಬಳಿಕ ಸುಮಾರು ಒಂದು ಕೋಟಿ ಅರುವತ್ತು ಲಕ್ಷ ರೂಪಾಯಿಗೂ ಮಿಕ್ಕಿದ ಪರಿಹಾರ ಧನವನ್ನು ದಾನಿಗಳಿಂದ ಸಂಗ್ರಹಿಸಿ ವಿತರಿಸಿದ್ದಾರೆ ಎಂದರು.

ಜತೆ ಕಾರ್ಯದರ್ಶಿ ಸತೀಶ್ ಅಡಪ ಸಂಕಬೈಲ್ ಕಾರ್ಯಕ್ರಮ ನಿರ್ವಹಿಸಿದರು.ಸಮಾರಂಭದಲ್ಲಿ ಕಾರ್ಯಕಾರಿ ಸಮಿತಿ ಸದಸ್ಯರಾದ ಬಾಲಕೃಷ್ಣ ರೈ ಕೊಲ್ಲಾಡಿ, ಚಂದ್ರಶೇಖರ ಹೆಗ್ಡೆ ಶಾನಾಡಿ, ಮನೋಜ್ ಶೆಟ್ಟಿ ವರ್ಕಾಡಿ, ಪ್ರವೀಣ್ ಶೆಟ್ಟಿ ಕುಂದಾಪುರ, ವಿಶೇಷ ಆಹ್ವಾನಿತರಾದ ಉಲ್ಲಾಸ್ ಆರ್. ಶೆಟ್ಟಿ ಪೆರ್ಮುದೆ, ಜಗನ್ನಾಥ ಶೆಟ್ಟಿ ಬಾಳ, ಸುರೇಶ್ ಶೆಟ್ಟಿ ಸೂರಿಂಜೆ, ಹೇಮಂತ ಶೆಟ್ಟಿ, ಒಕ್ಕೂಟದ ಆಡಳಿತಾಧಿಕಾರಿ ಸಚ್ಚಿದಾನಂದ ಹೆಗ್ಡೆ ಕೊಳ್ಕೆಬೈಲ್ ಮೊದಲಾದವರು ಉಪಸ್ಥಿತರಿದ್ದರು.

Comments are closed.