ರಾಷ್ಟ್ರೀಯ

500 ವರ್ಷ ಹಳೆಯ ದೇವಸ್ಥಾನ ಧ್ವಂಸ ವಿರೋಧಿಸಿ ಪಂಜಾಬ್‌ ಬಂದ್

Pinterest LinkedIn Tumblr


ಚಂಡೀಗಢ: 500 ವರ್ಷ ಪುರಾತನ ಗುರು ರವಿದಾಸ್‌ ದೇವಸ್ಥಾನ ಮತ್ತು ಸಮಾಧಿಯನ್ನು ಧ್ವಂಸಗೊಳಸಿದ ಪ್ರಕರಣವನ್ನು ವಿರೋಧಿಸಿ ಇಂದು ಪಂಜಾಬ್‌ ರಾಜ್ಯದಲ್ಲಿ ಬಂದ್‌ ಘೋಷಣೆ ಮಾಡಲಾಗಿದೆ.

ರವಿದಾಸಿಯ ಸಮಾಜದವರು ನೀಡಿದ ಈ ಬಂದ್‌ ಗೆ ಪಂಜಾಬ್‌ ನ ಜಲಂಧರ್‌ ನಲ್ಲಿ ಮಂಗಳವಾರ ಎಲ್ಲಾ ಶಾಲಾ ಕಾಲೇಜುಗಳು, ಸರಕಾರಿ ಕಚೇರಿಗಳನ್ನು ಮುಚ್ಚಲಾಗಿದೆ.

ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಹೆಚ್ಚುವರಿ ಭದ್ರತೆಯನ್ನು ಒದಗಿಸಿದ್ದಾರೆ.

ರವಿದಾಸ್‌ ಸಮಾಜದವರು ಮಂಗಳವಾರ ಶಾಂತಿಯುವ ಬಂದ್‌ ಗೆ ಕರೆ ನೀಡಿದ್ದು, ಆಂಬುಲೆನ್ಸ್‌, ಮದುವೆ ವಾಹನಗಳು, ಮಕ್ಕಳು ಮತ್ತು ವಿದೇಶಿಗರ ವಾಹನಗಳಿಗೆ ರಿಯಾಯತಿ ನೀಡಲಾಗಿದೆ.

Comments are closed.