ಮನೋರಂಜನೆ

ಸಂದರ್ಶನ ನೀಡುವಾಗ ರಶ್ಮಿಕಾ ಮಂದಣ್ಣ ಮೇಲೆ ಕಾಲಿಟ್ಟ ವಿಜಯ್ ದೇವರಕೊಂಡ!

Pinterest LinkedIn Tumblr


ಸೌತ್‌ ಇಂಡಿಯಾ ಮೋಸ್ಟ್‌ ಹ್ಯಾಪೆನಿಂಗ್ ಆ್ಯಂಡ್ ಗಾಸಿಪ್ ಜೋಡಿ ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ’ಡಿಯರ್ ಕಾಮ್ರೆಡ್’ ಹಿಟ್‌ ಸಿನಿಮಾದ ನಂತರ ಬೆಸ್ಟ್‌ ಪೇರ್ ಎಂದು ಫೇಮಸ್‌ ಆಗಿದ್ದಾರೆ. ಆದರೆ ಇವರಿಬ್ಬರ ಮಧ್ಯ ಬಿರುಕು ಬರುವಂತಹ ಘಟನೆ ಸಂದರ್ಶನವೊಂದರಲ್ಲಿ ನಡೆದಿದೆ.

‘ಡಿಯರ್ ಕಾಮ್ರೆಡ್‌’ ಬಿಗ್‌ ಹಿಟ್‌ ಆದ ನಂತರ ಖಾಸಗಿ ವಾಹಿನಿಯಲ್ಲಿ ಸಂದರ್ಶನ ನೀಡುವಾಗ ವಿಜಯ್, ರಶ್ಮಿಕಾ ಜೊತೆ ನಡೆದುಕೊಂಡ ರೀತಿ ಉದ್ಧಟತನ ಎಂದೆನಿಸದೇ ಇರದು.

ಖಾಸಗಿ ವಾಹಿನಿಗೆ ನೀಡಿದ ಸಂದರ್ಶನದ ವಿಡಿಯೋವನ್ನು ಯೂಟ್ಯೂಬ್‌ನಲ್ಲಿ ಅಪ್ಲೋಡ್ ಮಾಡಲಾಗಿದೆ. ನಿರೂಪಕಿ, ‘ಗೀತಾ ಗೋವಿದಂ’ ನ ಗೀತಾ ಹಾಗೂ ‘ಡಿಯರ್ ಕಾಮ್ರೆಡ್’ ಲಿಲ್ಲಿ ಪಾತ್ರಕ್ಕೆ ಇರುವ ವ್ಯತ್ಯಾಸವೇನೆಂದು ಕೇಳಿದಾಗ ‘ಜೀವನದಲ್ಲಿ ಎಲ್ಲಾ ಪಾತ್ರವನ್ನು ಒಮ್ಮೆ ಮಾಡಬೇಕು. ಗೀತಾ, ಲಿಲ್ಲಿ ಹಾಗೂ ಈ ತಾತನ ಜೊತೆಯೂ ನಟಿಸಬೇಕು ‘ ಎಂದು ದೇವರಕೊಂಡರನ್ನು ತೋರಿಸಿ ತಾತ ಎಂದು ಕರೆಯುತ್ತಾರೆ. ಇದಕ್ಕೆ ತಕ್ಷಣವೇ ವಿಜಯ್ ತನ್ನ ಕಾಲನ್ನು ರಶ್ಮಿಕಾಳ ಕಾಲಿನ ಮೇಲಿಡುತ್ತಾರೆ.

ವಿಜಯ್ ಕಾಲಿಟ್ಟು, ತಾತ ಅಂದ್ಯಲ್ಲಾ, ಸರಿ ತಾತನ ಕಾಲು ಒತ್ತು ಎಂದು ಹೇಳುತ್ತಾರೆ. ರಶ್ಮಿಕಾ ಕೋಪಿಸಿಕೊಳ್ಳದೇ ಕೂಲ್ ಆಗಿ ವಿಜಯ್ ಕಾಲನ್ನು ಕೆಳಗಿಳಿಸುತ್ತಾರೆ. ಆ ನಂತರ ಮತ್ತೊಮ್ಮೆ ವಿಜಯ್ ಕಾಲನ್ನು ರಶ್ಮಿಕಾಳ ಕಾಲಿನ ಮೇಲಿಡುತ್ತಾರೆ. ಆಗಲೂ ರಶ್ಮಿಕಾ ನಗುನಗುತ್ತಾ ವಿಜಯ್ ಕಾಲನ್ನು ಕೆಳಗಿಳಿಸುತ್ತಾರೆ. ವಿಜಯ್ ದೇವರಕೊಂಡ ನಡೆಗೆ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Comments are closed.