ನಿನ್ನೆಯಷ್ಟೇ ರಿಲಯನ್ಸ್ ಗಿಗಾ ಫೈಬರ್ ಇಂಟರ್ನೆಟ್ ಸೇವೆ ಹಾಗೂ ರಿಲಾಯನ್ಸ್ ಡಿಜಿಟಲ್ ಟಿವಿ ಲಾಂಚ್ ಮಾಡುತ್ತೇನೆ ಎಂದಿದ್ದ ಮುಖೇಶ್ ಅಂಬಾನಿ, ಈ ಸಿಹಿಸುದ್ದಿ ನೀಡಿದ ಕೆಲವೇ ಗಂಟೆಗಳಲ್ಲಿ ಜಿಯೋ ಗಿಗಾಫೈಬರ್ ಆರಂಭಿಸುವ ಮುಹೂರ್ತವನ್ನು ಫಿಕ್ಸ್ ಮಾಡಿದ್ದು, ಮುಂದಿನ ತಿಂಗಳ ಗಣೇಶ್ ಹಬ್ಬದ ವೇಳೆಗೆ ಈ ಯೋಜನೆ ಜನರಿಗೆ ಲಭ್ಯವಾಗಲಿದೆ.
ಜುಲೈ 2017ರಂದು ರಿಲಯನ್ಸ್ ಸಂಸ್ಥೆ ತನ್ನ ಜಿಯೋ 4G ಸೇವೆಯನ್ನು ಬಳಕೆದಾರರಿಗೆ ಬಿಡುಗಡೆ ಮಾಡಿತು. ಮೊದಲ ಐದಾರು ತಿಂಗಳು ಉಚಿತ ಸೇವೆ ನೀಡಿದ್ದ ರಿಲಯನ್ಸ್ ಸಂಸ್ಥೆ, ಇಡೀ ಮೊಬೈಲ್ ಮಾರುಕಟ್ಟೆಯನ್ನು ಆಪೋಸನೆಗೆ ತೆಗೆದುಕೊಳ್ಳುವತ್ತ ದಾಪುಗಾಲು ಹಾಕಿತು.
ಫ್ರೀ ಕಾಲ್, ಫ್ರೀ ಡಾಟಾ ಎನ್ನುವ ಮೂಲಕ ಮುಖೇಶ್ ಅಂಬಾನಿ ಸಂಸ್ಥೆ ಆರಂಭಗೊಂಡ ಕೆಲವೇ ತಿಂಗಳಲ್ಲಿ ಸುಮಾರು ಹನ್ನೊಂದು ಕೋಟಿಗೂ ಅಧಿಕ ಗ್ರಾಹಕರನ್ನು ತನ್ನತ್ತ ಸೆಳೆಯುವ ಮೂಲಕ, ಇಡೀ ದೇಶದ ಇತರ ಟೆಲಿಕಾಂ ಸಂಸ್ಥೆಗಳಿಗೆ ಊಹಿಸಲೂ ಅಸಾಧ್ಯವಾದ ಹೊಡೆತವನ್ನು ನೀಡಿದ್ದರು. ಈಗ, ಮುಖೇಶ್ ಅಂಬಾನಿ, ISP (Internet Service Provider) ಸಂಸ್ಥೆಗಳಿಗೆ ನಿದ್ದೆಗೆಡಿಸುವ ಕೆಲಸಕ್ಕೆ ದಿನ ನಿಗದಿ ಮಾಡಿದ್ದು, ಅದು ಇದೇ ಬರುವ ಸೆಪ್ಟಂಬರ್ 5ರಂದು.
ನಿನ್ನೆ ನಡೆದ ರಿಲಯನ್ಸ್ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಮುಕೇಶ್ ಅಂಬಾನಿ, ಸಧ್ಯದಲ್ಲೇ ಡಿಜಿಟಲ್ ಟಿವಿ ಲಾಂಚ್ ಮಾಡುತ್ತೇವೆ ಎಂದು ಬಕ್ರೀದ್ ಹಬ್ಬದಂದು ವಿಶೇಷ ಕೊಡುಗೆ ನೀಡಿದ್ದರು. ಇದೀಗಾ ಜಿಯೋ ಗಿಗಾಫೈಬರ್ ಮುಂದಿನ ತಿಂಗಳಿನಿಂದ ಪ್ರಾರಂಭಿಸಲಾಗುತ್ತದೆ ಎಂದು ತಿಳಿಸಿದ್ದಾರೆ.
ಈಗಾಗಲೇ ಜಿಯೋ 4ಜಿ ಸಿಮ್ ಮೂಲಕ ಡಿಜಿಟಲ್ ಕ್ಷೇತ್ರದಲ್ಲಿ ಧೂಳೆಬಿಸುತ್ತಿರುವ ರಿಲಯನ್ಸ್ ಜಿಯೋ ಟೆಲಿವಿಷನ್ ಮಾರ್ಕೆಟ್ಗೂ ಎಂಟ್ರಿ ಕೊಡಲು ಮುಂಧಾಗಿದ್ದು, ಇದರಿಂದ ಷೇರು ಸೇರಿದಂತೆ ಹಲವು ವ್ಯಾಪಾರ ಕ್ಷೇತ್ರಗಳಲ್ಲಿ ರಿಲಯನ್ಸ್ ಸಂಚಲನ ಮೂಡಿಸಿದೆ. ಒಟ್ಟಾರೆ ಜಿಯೋ ಸಿಮ್ ನಂತೆ, ರಿಲಯನ್ಸ್ ಗಿಗಾ ಫೈಬರ್ ಇಂಟರ್ನೆಟ್ ಸೇವೆ, ಬ್ರಾಡ್ ಬ್ಯಾಂಡ್ ಲೋಕದಲ್ಲಿ ತಲ್ಲಣ ಮೂಡಿಸುವ ಎಲ್ಲಾ ಲಕ್ಷಣಗಳಿವೆ.
ಈಗಾಗಲೇ ದೇಶದ ವಿವಿಧ ಭಾಗದ ಒಂದೂವರೆ ಕೋಟಿ ಗ್ರಾಹಕರು ಗಿಗಾ ಸೇವೆಯನ್ನು ನೋಂದಣಿ ಮಾಡಿಕೊಂಡಿದ್ದಾರೆಂದು” ಹೇಳಿರುವ ಮುಖೇಶ್, 100 Mbps ಮೂಲ ಸ್ಪೀಡ್ ನಿಂದ ಹಿಡಿದು 1Gbps ವರೆಗೆ ವಿವಿಧ ಪ್ಲ್ಯಾನ್ ಬಗ್ಗೆ ಮಾಹಿತಿಯನ್ನು ನೀಡಿದ್ದಾರೆ. “ಇಡೀ ದೇಶದಲ್ಲಿ ಅತೀಹೆಚ್ಚು ಜಿಎಸ್ಟಿ ಪಾವತಿಸುವ ಕಂಪೆನಿ ನಮ್ಮದೆಂದು” ಹೇಳಿರುವ ಮುಖೇಶ್, “ಗಿಗಾ ಸೇವೆಗಾಗಿ 3.5ಲಕ್ಷ ಕೋಟಿ ಹಣ ಹೂಡಿಕೆ ಮಾಡಲಾಗಿದೆ,ಎಂಬ ವಿವರಣೆ ನೀಡಿದ್ದಾರೆ.
ಇನ್ನೊಂದೆಡೆ ರಿಲಾಯನ್ಸ್ ಡಿಜಿಟಲ್ ಟಿವಿಗೆ ವೆಲ್ಕಂ ಆಫರ್ ಎಂದು LED ಟಿವಿ, ಡಿಜಿಟಲ್ ಸೆಟ್ ಟಾಪ್ ಬಾಕ್ಸ್, ಸ್ಥಿರ ದೂರವಾಣಿ ಉಚಿತ. ಜಿಯೋ ಫೈಬರ್ ಮೂಲಕ ಟಿವಿ ಸಂಪರ್ಕ… ಹೀಗೆ ಹಲವು ಪ್ಲ್ಯಾನ್ ಗಳನ್ನು ಅಂಬಾನಿ ಪ್ರಕಟಿಸಿದ್ದಾರೆ. ಮುಖೇಶ್ ಅಂಬಾನಿಯ ‘ಗಿಗಾ ಹೊಡೆತಕ್ಕೆ’ ಇನ್ನೆಷ್ಟು ಕಂಪೆನಿಗಳು ಬಾಗಿಲು ಮುಚ್ಚಿಸುವ ನೀರಿಕ್ಷೆ ಇದೆ.
Comments are closed.