ರಾಷ್ಟ್ರೀಯ

ದೀಪಾವಳಿ ವೇಳೆಗೆ 50 ಸಾವಿರ ಗಡಿದಾಟುವ ಚಿನ್ನದ ಬೆಲೆ!

Pinterest LinkedIn Tumblr


ಚಿನ್ನ ಪ್ರಿಯರಿಗೆ ಮತ್ತೊಂದು ಬಿಗ್ ಶಾಕ್ ಎದುರಾಗಿದೆ. ಹೌದು ಷೇರುಮಾರುಕಟ್ಟೆಯಲ್ಲಿ ಡಾಲರ್ಸ್ ಮುಂದೆ ರೂಪಾಯಿಯ ಮೌಲ್ಯ ಕುಸಿತಗೊಂಡಿದ್ದು, ಮಂಗಳವಾರದಿಂದಲೂ ಹೆಚ್ಚಾಗುತ್ತಿರುವ ಚಿನ್ನದ ಬೆಲೆ ಗುರುವಾರದ ಅಂತ್ಯಕ್ಕೆ 10 ಗ್ರಾಂಗೆ 150 ರೂ. ಏರಿಕೆ ಕಂಡಿದ್ದು, ಸಧ್ಯ 10 ಗ್ರಾಂಗೆ 38,200 ರೂಪಾಯಿಗಳಿದ್ದು, ದೀಪಾವಳಿ ವೇಳೆಗೆ ಈ ದರ 10 ಗ್ರಾಂಗೆ 50 ಸಾವಿರ ತಲುಪುವ ನೀರಿಕ್ಷೆ ಇದೆ.

ಕೈಗಾರಿಕೆ ಘಟಕ ಮತ್ತು ನಾಣ್ಯ ತಯಾರಕರಿಂದ ಬೇಡಿಕೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಚಿನ್ನದ ದರ ನಾಗಾಲೋಟ ಕಂಡಿದೆ. ಗುರುವಾರದಿಂದ ದೆಹಲಿಯಲ್ಲಿ ಪ್ರತಿ ಗ್ರಾಂ ಚಿನ್ನದ ಬೆಲೆಯಲ್ಲಿ 150 ರೂ ಏರಿಕೆಯಾಗಿದ್ದು, 10 ಗ್ರಾಂ ಚಿನ್ನಕ್ಕೆ 38970 ಏರಿಕೆಯಾಗಿದ್ದರೆ, ಬೆಳ್ಳಿ ಕೂಡ ಗ್ರಾಂ ಗೆ ರೂ 60 ರಂತೆ ಒಂದು ಕೆಜಿ ಬೆಳ್ಳಿಗೆ 45,100 ರೂಪಾಯಿ ದರ ಕಂಡಿದೆ.

ಇದಕ್ಕೆ ಮೂಲ ಕಾರಣ ಡಾಲರ್ ಎದುರು ರೂಪಾಯಿ ದರ ಕುಸಿದಿದ್ದು 71.72 ಪ್ರತಿ ಡಾಲರ್ ನಂತೆ ಇಂದು ವಹಿವಾಟು ನಡೆಸಿದೆ. ಇನ್ನೂ ನ್ಯೂಯಾರ್ಕ್​ನಲ್ಲಿ ಚಿನ್ನದ ಬೆಲೆ ಪ್ರತಿ ಔನ್ಸಿಗೆ 1,500 ಯುಎಸ್ ಡಾಲರ್ ನಂತೆ ಹಾಗೂ ಬೆಳ್ಳಿ ಬೆಲೆ ಪ್ರತಿ ಔನ್ಸಿಗೆ 17.09 ಯುಎಸ್ ಡಾಲರ್ ನಲ್ಲಿ ವ್ಯವಹಾರ ನಡೆಯುತ್ತಿದೆ.

ಜೊತೆಗೆ ಅಖಿಲ ಭಾರತ ಸರಾಫ್ ಅಸೋಸಿಯೇಷನ್ ವರದಿಯಂತೆ, ಶೇ 99.9 ಪರಿಶುದ್ಧ ಚಿನ್ನ ಪ್ರತಿ ಗ್ರಾಂ ಗೆ 38,970ರೂ ಹಾಗೂ ಶೇ 99.5 ಪರಿಶುದ್ಧ ಚಿನ್ನ ಪ್ರತಿ ಗ್ರಾಂ ಗೆ 38,820 ರೂನಷ್ಟು ಏರಿಕೆಗೊಳಿಸಲಾಗಿದೆ. ಸದ್ಯಬೆಳ್ಳಿ ನಾಣ್ಯಗಳಿಗೆ ಬೇಡಿಕೆ ಕಂಡು ಬಂದಿದ್ದು 100 ಕ್ಕೆ 91,000 ರು ಖರೀದಿಗೆ ಹಾಗೂ 92,000ರು ಮಾರಾಟದ ಬೆಲೆ ಪಡೆದುಕೊಂಡಿದೆ.

ಶ್ರಾವಣ ಮಾಸದಲ್ಲೇ ಚಿನ್ನ ಇಷ್ಟು ದರ ಪಡೆದುಕೊಂಡಿದ್ದು, ದೀಪಾವಳಿ ಹಾಗೂ ಧನ್​ ತೇರಸ್​ ವೇಳೆಗೆ ಈ ದರ 10 ಗ್ರಾಂಗೆ 50 ಸಾವಿರ ದಾಟುವ ಮುನ್ಸೂಚನೆ ಲಭ್ಯವಾಗಿದೆ. ಇದು ಚಿನ್ನ ಪ್ರಿಯರ ನಿದ್ದೆಗೆಡಿಸಿದ್ದು, ಮದುವೆ ಸೇರಿದಂತೆ ಸಮಾರಂಭಗಳಿಗೆ ಚಿನ್ನ ಖರೀದಿಸುವುದೇ ಕಷ್ಟವಾಗಿ ಮಧ್ಯಮವರ್ಗದ ಜನರು ಪರದಾಡುವಂತಾಗಿದೆ.

Comments are closed.