ಅಂತರಾಷ್ಟ್ರೀಯ

ಹೊತ್ತಿ ಉರಿಯುತ್ತಿರುವ ಶೇ 20ರಷ್ಟು ಆಮ್ಲಜನಕವನ್ನು ಉತ್ಪಾದಿಸುವ ಅಮೆಜಾನ್ ಕಾಡು!!

Pinterest LinkedIn Tumblr


ವಿಶ್ವದಲ್ಲಿ ಅತಿ ದೊಡ್ಡ ಹಾಗೂ ವೈವಿಧ್ಯವನ್ನು ಒಳಗೊಂಡಿರುವ ವಿಸ್ಮಯಕಾರಿ ಅಮೆಜಾನ್ ಕಾಡಿನಲ್ಲಿ ಮುಗಿಲು ಮುಟ್ಟುವಂತಹ ಬೆಂಕಿಯ ಜ್ವಾಲೆಗಳು ಏಳುತ್ತಿದೆ. ಅಪಾರ ಹಾಗೂ ಅಪರೂಪದ ಸಸ್ಯ ಮತ್ತು ಪ್ರಾಣಿಗಳಿಗೆ ಆಶ್ರಯ ನೀಡಿರುವ ಅಮೇಜಾನ್ ಅರಣ್ಯ ಹೊತ್ತಿ ಉರಿಯುತ್ತಿದೆ.

ಹೌದು ಬ್ರೆಜಿಲ್, ಪೆರು, ಕೊಲಂಬಿಯಾ, ಫ್ರಾನ್ಸ್, ವೆನೆಜುವೆಲಾ, ಈಕ್ವೆಡಾರ್, ಗಯಾನಾ, ಬೊಲಿವಿಯಾ ಮತ್ತು ಸುರಿನೇಮ್ ದೇಶಗಳಲ್ಲಿ ಹರಡಿಕೊಂಡಿರುವ ಅಮೇಜಾನ್ ಕಾಡಿನಲ್ಲಿ ಉಂಟಾಗಿರುವ ಕಾಡ್ಗಿಚ್ಚು ಭಾರಿ ಪ್ರಮಾಣದ ಅನಾಹುತ ಸೃಷ್ಟಿಸಿದೆ. ಸಾವಿರಾರು ಎಕರೆ ಕಾಡು ಬೆಂಕಿಯ ಜ್ವಾಲೆಗೆ ಸುಟ್ಟು ಭಸ್ಮವಾಗಿವೆ.

ಇನ್ನು ಅತ್ಯಂತ ದಟ್ಟ ಕಾಡನ್ನು ಹೊಂದಿರುವ ಭಾಗದಲ್ಲಿ ಬೆಂಕಿ ಹೊತ್ತಿ ಉರಿಯುತ್ತಿದ್ದರೂ ಈ ದೇಶಗಳ ಗಮನಕ್ಕೆ ಬಂದಿಲ್ಲ. ನಾಸಾದ ಸ್ಯಾಟಲೈಟ್ ಬೆಂಕಿಯ ರೋಷಾವೇಷದ ಚಿತ್ರವನ್ನು ಸೆರೆಹಿಡಿದಿವೆ. ಭಾರಿ ಗಾಳಿಯಿಂದಾಗಿ ಬೆಂಕಿ ವ್ಯಾಪಿಸುವ ರಭಸ ಇನ್ನಷ್ಟು ಜೋರಾಗಿದ್ದು, ಕಪ್ಪನೆಯ ದಟ್ಟ ಹೊಗೆ ಆವರಿಸಿಕೊಂಡಿದೆ. ಅದನ್ನು ನಂದಿಸುವುದಕ್ಕೆ ಹರಸಾಹಸ ಪಡಬೇಕಾಗಿದೆ.

ಜಗತ್ತಿನ ಶೇ 20ರಷ್ಟು ಆಮ್ಲಜನಕವನ್ನು ಉತ್ಪಾದಿಸುವ ಹಾಗೂ ಜಗತ್ತಿನ ಶೇ 10ರಷ್ಟು ಜೀವವೈವಿಧ್ಯಗಳಿಗೆ ನೆಲೆ ನೀಡಿದ ಕಾಡು ಅಮೇಜಾನ್ . ಇದು ಹವಾಮಾನದ ವೈಪರೀತ್ಯಗಳನ್ನು ನಿಯಂತ್ರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ. 550 ಮಿಲಿಯನ್ ಹೆಕ್ಟೇರ್ ವಿಸ್ತೀರ್ಣದಲ್ಲಿ ಅಮೇಜಾನ್ ಕಾಡು ಹರಡಿಕೊಂಡಿದೆ. ಬೆಂಕಿಯ ರಭಸ ಕಾಡಿನ ಸುತ್ತಮುತ್ತ ವಾಸಿಸುವ ಪ್ರದೇಶಗಳ ಜನರಲ್ಲಿ ಆತಂಕ ಮೂಡಿಸಿದೆ.

Comments are closed.