‘ಒರು ಅಡಾರ್ ಲವ್’ ಚಿತ್ರ ಬಾಕ್ಸ್ ಆಫೀಸ್ನಲ್ಲಿ ಮಕ್ ಮಕಾಡೆ ಮಲಗಿದರೂ, ಆ ಚಿತ್ರದ ನಟಿ ಪ್ರಿಯಾ ಪ್ರಕಾಶ್ ವಾರಿಯರ್ಗೆ ಬೇಡಿಕೆ ಚೂರೂ ಆಕಾಡೆ ಈಕಡೆ ಆಗಿಲ್ಲ. ಸಾಲು ಸಾಲು ಸಿನಿಮಾಗಳ ಆಫರ್ ಕ್ಯೂ ನಿಂತಿವೆ.
ಕನ್ನಡಕ್ಕೆ ಈಗಾಗಲೇ ಎಂಟ್ರಿ ನೀಡಿರುವ ಈ ಕಣ್ಸನ್ನೆ ಸುಂದರಿಗೆ ಈಗ ಮತ್ತೊಂದು ಕನ್ನಡ ಸಿನಿಮಾ ಸಿಕ್ಕಿದೆ. ‘ಪಡ್ಡೆಹುಲಿ’ ಸಿನಿಮಾ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿಕೊಟ್ಟಿರುವ ನಟ ಶ್ರೇಯಸ್ ಮಂಜು ಅಭಿನಯದ ಮುಂದಿನ ಚಿತ್ರ ‘ವಿಷ್ಣು ಪ್ರಿಯಾ’ಗೆ ನಾಯಕಿಯಾಗಿ ಪ್ರಿಯಾ ವಾರಿಯರ್ ಸೆಲೆಕ್ಟ್ ಆಗಿದ್ದಾರೆ.
ನಿರ್ಮಾಪಕ ಗಂಡುಗಲಿ ಕೆ. ಮಂಜು ಅವರು ಡಾ. ವಿಷ್ಣುವರ್ಧನ್ ಅವರಿಗೆ ದೊಡ್ಡ ಅಭಿಮಾನಿ. ಹಾಗಾಗಿ, ಪುತ್ರ ಶ್ರೇಯಸ್ ನಟಿಸಿದ್ದ ‘ಪಡ್ಡೆಹುಲಿ’ ಚಿತ್ರದಲ್ಲಿ ವಿಷ್ಣು ಛಾಯೆ ಇತ್ತು. ಅದರಲ್ಲಿ ಕಥಾನಾಯಕ ವಿಷ್ಣುವರ್ಧನ್ಗೆ ಫ್ಯಾನ್ ಆಗಿದ್ದ. ಅಲ್ಲದೆ, ‘ನಾಗರಹಾವು’ ಚಿತ್ರೀಕರಣವಾಗಿದ್ದ ಚಿತ್ರದುರ್ಗದಲ್ಲೇ ‘ಪಡ್ಡೆಹುಲಿ’ ಸಿನಿಮಾದ ಶೂಟಿಂಗ್ ನಡೆದಿತ್ತು. ಈಗ ಶ್ರೇಯಸ್ ನಟಿಸಲಿರುವ ಎರಡನೇ ಚಿತ್ರಕ್ಕೆ ಕೆ. ಮಂಜು ಬಂಡವಾಳ ಹೂಡುತ್ತಿದ್ದು, ‘ವಿಷ್ಣು ಪ್ರಿಯಾ’ ಟೈಟಲ್ ಫಿಕ್ಸ್ ಮಾಡಿ‘ಸಾಹಸ ಸಿಂಹ’ನ ಮೇಲಿರುವ ಅಭಿಮಾನ ಮೇರೆದಿದ್ದಾರೆ.
ಸೆ.9 ರಂದು ವಿಷ್ಣು ಪ್ರಿಯಾ ಸಿನಿಮಾದ ಶೂಟಿಂಗ್ ಆರಂಭಗೊಳ್ಳಲಿದೆ. ವಿಶೇಷವೆಂದರೆ, ಈ ಚಿತ್ರದ ನಾಯಕಿ ಮಾತ್ರವಲ್ಲ, ನಿರ್ದೇಶಕರು ಕೂಡ ಮಲಯಾಳಂ ಚಿತ್ರರಂಗದವರೇ. ಮಾಲಿವುಡ್ನ ಖ್ಯಾತ ನಿರ್ದೇಶಕ ವಿ.ಕೆ. ಪ್ರಕಾಶ್ ‘ವಿಷ್ಣು ಪ್ರಿಯಾ’ಗೆ ಆಕ್ಷನ್-ಕಟ್ ಹೇಳುತ್ತಿದ್ದಾರೆ. 9 ವರ್ಷಗಳ ಹಿಂದೆ ಕನ್ನಡದಲ್ಲಿ ‘ಐದೊಂದ್ಲಾ ಐದು’ ಚಿತ್ರ ಮಾಡಿದ್ದ ಅವರೀಗ ಮತ್ತೊಮ್ಮೆ ಚಂದನವನಕ್ಕೆ ಮರುಳುತ್ತಿದ್ದಾರೆ.
ಇನ್ನು, ಕನ್ನಡದಲ್ಲಿ ಸೂರಜ್ ಕುಮಾರ್ ನಟಿಸಲಿರುವ ಚೊಚ್ಚಲ ಚಿತ್ರದಲ್ಲೂ ಪ್ರಿಯಾ ನಾಯಕಿಯಾಗಿ ಬಣ್ಣ ಹಚ್ಚುವುದು ಬಹುತೇಕ ಖಚಿತ. ಅಕಾಸ್ಮಾತ್ ಪ್ರಿಯಾ ನಟನೆಯ ಒರ್ ಆಡರ್ ಗೆದ್ದಿದ್ರೆ ಪ್ರಿಯಾರನ್ನು ಹಿಡಿಯೋದು ಕಷ್ಟ ಇತ್ತು. ಮೊದಲ ಸಿನಿಮಾ ಸೋತರು ಒಂದು ಮಟ್ಟಕ್ಕೆ ಬೆಡಿಕೆ ಇದೆ. ಸದ್ಯ ಬಾಲಿವುಡ್ ಸಿನಿಮಾ ಒಂದರಲ್ಲಿ ಪ್ರಿಯಾ ನಟಿಸುತ್ತಿತ್ತಿದ್ದು ಶೀಘ್ರದಲ್ಲಿಯೇ ಬೆಂಗಳೂರಿಗೆ ಕಾಲಿಡಲಿದ್ದಾರೆ ಕೇರಳ ಕುವರಿ.
Comments are closed.