ಮುಂಬೈ: ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಅಭಿನಯದ ‘ನಿನ್ನಿಂದಲೆ’ ಚಿತ್ರದ ಮೂಲಕ ಕನ್ನಡಿಗರಿಗೆ ಪರಿಚಿತರಾಗಿದ್ದ ಮುಂಬೈ ಬೆಡಗಿ ಎರಿಕಾ ಫರ್ನಾಂಡೀಸ್ ಲವ್ನಲ್ಲಿ ಬಿದ್ದಿದ್ದಾರೆ ಎಂಬ ಗುಸು ಗುಸು ಕೇಳಿಬರುತ್ತಿದ್ದು, ಸಹನಟನೊಬ್ಬನ ಜತೆ ವಿದೇಶ ಪ್ರವಾಸದಲ್ಲಿರುವುದು ಅದಕ್ಕೆ ಪುಷ್ಟಿ ನೀಡುವಂತಿದೆ.
ಬಾಲಿವುಡ್ ಕಿರುತೆರೆಯ ಪ್ರಸಿದ್ಧ ‘ಕಸೌತಿ ಜಿಂದಗಿ ಕ್ಯಾ’ ಧಾರಾವಾಹಿಯಲ್ಲಿ ಪ್ರೇರಣ ಮತ್ತು ಅನುರಾಗ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಎರಿಕಾ ಮತ್ತು ಪಾರ್ಥ್ ಸಮ್ಥಾನ್ ನಿಜ ಜೀವನದಲ್ಲೂ ಪ್ರೇಯಸಿ ಆಗಿದ್ದಾರೆ ಎಂದು ಹೇಳಲಾಗಿದೆ. ಇದೇ ಕಾರಣಕ್ಕಾಗಿ ಅವರಿಬ್ಬರು ಪದೇಪದೆ ಡೇಟಿಂಗ್ ಎಂಬ ವದಂತಿಯ ಸುತ್ತ ಸುತ್ತುತ್ತಿದ್ದಾರೆ. ಎಲ್ಲಿಗೇ ಹೋದರು ಜತೆಯಲ್ಲಿಯೇ ಹೋಗುತ್ತಿರುವುದು ಇಬ್ಬರ ನಡುವೆ ಪ್ರೀತಿ ಇರುವುದು ನಿಜವೆಂದು ಅಭಿಮಾನಿಗಳು ಮಾತನಾಡಿಕೊಳ್ಳುತ್ತಿದ್ದಾರೆ.
ಸದ್ಯ ದ್ವೀಪ ರಾಷ್ಟ್ರ ಮಾಲ್ಡೀವ್ಸ್ನಲ್ಲಿ ಈ ಜೋಡಿ ಬೀಡುಬಿಟ್ಟಿದ್ದು, ಇದಕ್ಕೆ ಸಂಬಂಧಪಟ್ಟ ಫೋಟೊಗಳನ್ನು ಇಬ್ಬರು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಇದುವರೆಗೂ ಅವರಿಬ್ಬರು ಜತೆಯಲ್ಲಿದ್ದ ಫೋಟೊಗಳು ಎಲ್ಲಿಯೂ ಕಂಡಿರಲಿಲ್ಲ. ಆದರೆ, ಇದೀಗ ಮಾಲ್ಡೀವ್ಸ್ ಬೀಚ್ನಲ್ಲಿ ಎರಿಕಾ ಮತ್ತು ಪಾರ್ಥ್ ಎಂಜಾಯ್ ಮಾಡುತ್ತಿರುವ ಫೋಟೊಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಇದೇ ಫೋಟೊಗಳು ಇವರಿಬ್ಬರ ನಡುವೆ ಪ್ರೀತಿ ಇರುವುದನ್ನು ಸಾಬೀತು ಪಡಿಸುತ್ತದೆ ಎಂದು ನೆಟ್ಟಿಗರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
2014ರಲ್ಲಿ ಸ್ಯಾಂಡಲ್ವುಡ್ನಲ್ಲಿ ಬಿಡುಗಡೆಯಾದ ನಿನ್ನಿಂದಲೆ ಚಿತ್ರದಲ್ಲಿ ಪುನೀತ್ ರಾಜ್ಕುಮಾರ್ಗೆ ಎರಿಕಾ ಜೋಡಿಯಾಗಿದ್ದರು. ಆದರೆ, ಈ ಚಿತ್ರ ಹೇಳಿಕೊಳ್ಳುವಷ್ಟು ಯಶಸ್ವಿಯಾಗಲಿಲ್ಲ. ಇದರೊಂದಿಗೆ 2015ರಲ್ಲಿ ತೆರೆಕಂಡ ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ‘ಬುಗುರಿ’ ಚಿತ್ರದಲ್ಲೂ ನಾಯಕಿಯಾಗಿದ್ದರು. ಈ ಚಿತ್ರವು ಕೂಡ ಯಶಸ್ಸು ಸಾಧಿಸಲಿಲ್ಲ. ನಂತರ ದಿನಗಳಲ್ಲಿ ಕನ್ನಡ ಚಿತ್ರರಂಗದಿಂದ ಎರಿಕಾ ದೂರವಾದರು.
Comments are closed.