ರಾಷ್ಟ್ರೀಯ

ವಿಪಕ್ಷಗಳ ಮಾರಕ ಶಕ್ತಿ, ದುಷ್ಟ ಶಕ್ತಿಯನ್ನು ಬಳಕೆ ಮಾಡುತ್ತಿರುವುದರಿಂದಲೇ ಬಿಜೆಪಿ ನಾಯಕರ ಸಾವು; ಸಾಧ್ವಿ ಪ್ರಗ್ಯಾ ಆರೋಪ

Pinterest LinkedIn Tumblr

ಸದಾ ವಿವಾದಾತ್ಮಕ ಹೇಳಿಕೆ ಮೂಲಕವೇ ಗಮನ ಸೆಳೆಯುವ ಭೋಪಾಲ್​​​ ಸಂಸದೆ ಸಾಧ್ವಿ ಪ್ರಗ್ಯಾ ಸಿಂಗ್​ ಠಾಕೂರ್​ ಈ ಮತ್ತೊಂದು ಹೇಳಿಕೆ ನೀಡುವ ಮೂಲಕ ಸುದ್ದಿಯಾಗಿದ್ದಾರೆ.

ಒಂದೇ ತಿಂಗಳಲ್ಲಿ ಬಿಜೆಪಿಯ ಇಬ್ಬರು ಮಹಾನ್​ ನಾಯಕರ ಸಾವು ಸಂಭವಿಸಿದೆ. ಇದಕ್ಕೆ ಕಾರಣ ವಿಪಕ್ಷಗಳ ಮಾರಕ ಶಕ್ತಿ. ವಿಪಕ್ಷಗಳು ದುಷ್ಟ ಶಕ್ತಿಯನ್ನು ಬಳಕೆ ಮಾಡುತ್ತಿದ್ದು, ಇದೇ ಕಾರಣದಿಂದಾಗಿ ಇಬ್ಬರು ನಾಯಕರು ನಮ್ಮನ್ನು ಅಗಲಿದ್ದಾರೆ ಎಂದಿದ್ದಾರೆ.

ಸಮಾರಂಭವೊಂದರಲ್ಲಿ ಮಾತನಾಡಿದ ಅವರು, ಒಮ್ಮೆ ಮಹಾರಾಜ್​ಜಿ ನನಗೆ ನಿಮ್ಮ ಕೆಟ್ಟ ದಿನಗಳು ಶುರುವಾದವು. ವಿರೋಧಪಕ್ಷಗಳು ಬಿಜೆಪಿ ಮೇಲೆ ದುಷ್ಟಶಕ್ತಿಯ ಪ್ರಯೋಗ ಮಾಡಲಿದೆ ಎಂದಿದ್ದರು. ಬಳಿಕ ನಾನು ಅವರು ಏನು ಹೇಳಿದರು ಎಂದು ಮರೆತು ಹೋದೆ. ಆದರೆ ಈಗ ನಮ್ಮ ಪಕ್ಷದ ಹಿರಿಯ ನಾಯಕರು ಒಬ್ಬರಾದ ಮೇಲೆ ಒಬ್ಬರು ಸಾವನ್ನಪ್ಪಿರುವುದರಿಂದ ಮಹಾರಾಜ್​ಜೀ ಹೇಳಿಕೆ ಬಗ್ಗೆ ನಾನು ಯೋಚಿಸಬೇಕಿದೆ. ಮಹಾರಾಜ್​ಜೀ ಸರಿಯಾಗಿಯೇ ಹೇಳಿದ್ದಾರೆ ಅಲ್ವೇ ಎಂದರು.

ಆಗಸ್ಟ್​ 6ರಂದು ಸುಷ್ಮಾ ಸ್ವರಾಜ್​ ಸಾವನ್ನಪ್ಪಿದರೆ, ಆಗಸ್ಟ್​ 24ರಂದು ಅರುಣ್​ ಜೇಟ್ಲಿ ಇಹಲೋಕ ತ್ಯಜಿಸಿದ್ದರು.

ಇದಕ್ಕೂ ಮುನ್ನ ಬಿಜೆಪಿಯ ಹಿರಿಯ ನಾಯಕರಾದ ಗೋವಾ ಸಿಎಂ ಮನೋಹರ್​ ಪರಿಕ್ಕರ್​, ಅನಂತ ಕುಮಾರ್​ ಕಳೆದ ಆಗಸ್ಟ್​ನಲ್ಲಿ ಅಟಲ್​ ಬಿಹಾರಿ ವಾಜಪೇಯಿ ಸಾವನ್ನಪ್ಪಿದ್ದರು.

2019ರಲ್ಲಿ ಭೂಪಾಲ್​ನಿಂದ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿದ್ದ ಸಾಧ್ವಿ ಪ್ರಗ್ಯಾ ಗೆಲುವು ಗಳಿಸಿದರು. ಮಹಾತ್ಮಗಾಂಧಿಯನ್ನು ಕೊಂದ ನಾಥುರಾಮ್​ ಗೋಡ್ಸೆಯನ್ನು ದೇಶಭಕ್ತ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದರು. ಇದರಿಂದ ಪಕ್ಷ ಅವರಿಗೆ ಶೋಕಾಸ್​ ನೋಟಿಸ್​ ಕೂಡ ಜಾರಿ ಮಾಡಿತು.

ಇದಕ್ಕೂ ಮುನ್ನ ಶಾಪದಿಂದಾಗಿಯೇ ಮಹಾರಾಷ್ಟ್ರ ಎಟಿಎಸ್​ ಮುಖ್ಯಸ್ಥ ಹೆಮಂತ್​ ಕರ್ಕರೆ ಮುಂಬೈ ದಾಳಿಯಲ್ಲಿ ಸಾವನ್ನಪ್ಪಿದ್ದರು ಎಂದಿದ್ದರು.

Comments are closed.