ಮುಂಬೈ: ಹೊಟ್ಟೆ ಪಾಡಿಗಾಗಿ ಪಶ್ಚಿಮ ಬಂಗಾಳದಲ್ಲಿ ಹಾಡು ಹೇಳಿ ಭಿಕ್ಷೆ ಬೇಡಿ ಬದುಕುತ್ತಿದ್ದ ರಾನು ಮಂಡಲ್ ಅವರಿಗೆ ಬಾಲಿವುಡ್ ಸಂಗೀತ ನಿರ್ದೇಶಕ ಹಿಮೇಶ್ ರೇಶಮಿಯಾ ತಮ್ಮ ಚಿತ್ರದಲ್ಲಿ ಹಾಡೊಂದನ್ನು ಹಾಡಿಸಿದ್ದು ಆ ಹಾಡಿಗಾಗಿ ರಾನು ಹಿಮೇಶ್ ರೇಶಮಿಯಾ ಕೊಟ್ಟಿರುವ ಸಂಭಾವನೆ ನಿಜಕ್ಕೂ ಘನತೆಗೆ ತಕ್ಕದಾಗಿದೆ.
ಹಿಮೇಶ್ ರೇಶಮಿಯಾ ಬರೋಬ್ಬರಿ 6-7 ಲಕ್ಷ ರುಪಾಯಿಯನ್ನು ರಾನು ಅವರಿಗೆ ನೀಡಿದ್ದಾರೆ ಎನ್ನಲಾಗಿದೆ. ಮೊದಲ ರಾನು ಅವರು ಇಷ್ಟೊಂದು ಮೊತ್ತದ ಸಂಭಾವನೆ ಸ್ವೀಕರಿಸಲು ನಿರಾಕರಿಸಿದ್ದು ರೇಶಮಿಯಾ ಅವರೇ ಬಲವಂತ ಮಾಡಿ ಸಂಭಾವನೆ ನೀಡಿದ್ದಾರಂತೆ.
https://www.instagram.com/p/B1eVI_cjQS3/?utm_source=ig_embed
ಲತಾ ಮಂಗೇಶ್ಕರ್ ಅವರ ‘ಎಕ್ ಪ್ಯಾರ್ ಕಾ ನಗ್ಮಾ ಹೈ’ ಹಾಡನ್ನು ರಾನು ಮಂಡಲ್ ರೈಲ್ವೆ ನಿಲ್ದಾಣವೊಂದರಲ್ಲಿ ಹಾಡುತ್ತಿದ್ದಾಗ ಯಾರೂ ಒಬ್ಬರು ಚಿತ್ರಿಸಿ ವೈರಲ್ ಮಾಡಿದರು. ಇದಾದ ಬಳಿಕ ಮಂಡಲ್ ಅವರನ್ನು ಬಾಲಿವುಡ್ ಸಂಗೀತ ನಿರ್ದೇಶಕ ಹಿಮೇಶ್ ರೇಶಮಿಯಾ ಅವರು ಕರೆದು ತಮ್ಮ ಮುಂದಿನ ಚಿತ್ರಕ್ಕೆ ಹಾಡು ಹಾಡಿಸಿದ್ದರು.
ಕೃಷ್ಣನಗರದಲ್ಲಿ ಜನಿಸಿ ಬಾಲ್ಯವನ್ನು ಅಲ್ಲಿಯೇ ಕಳೆದಿರುವ ಇವರು ನಂತರ ಸಂಪಾದನೆಗಾಗಿ ಮುಂಬೈಗೆ ಬಂದಿದ್ದಾರೆ. ಆದರೆ, ಮಾನಸಿಕ ಖಿನ್ನತೆಗೊಳಗಾಗಿ ಮತ್ತೆ ರಣಘಾತ್ ಗೆ ಹಿಂತಿರುಗಿದ್ದಾರೆ. ಇತ್ತೀಚಿಗೆ ರಾನು ಅವರನ್ನು ಟಿವಿ ರಿಯಾಲಿಟಿ ಶೋವೊಂದಕ್ಕೆ ಆಹ್ವಾನಿಸಲಾಗಿತ್ತು. ಈ ಶೋನಲ್ಲಿ ರಾನು ಅವರ ಗಾಯನಕ್ಕೆ ಫಿದಾ ಆದ ಜಡ್ಜ್ ಹಿಮೇಶ್ ರೇಶಮಿಯಾ ಹಾಡಲು ಅವಕಾಶ ನೀಡಿದ್ದರು.
ಹಿಮೇಶ್ ರೇಶಮಿಯಾ ಅವರ ಮುಂದಿನ ‘ಹ್ಯಾಪಿ ಹಾರ್ಡಿ ಮತ್ತು ಹೀರ್ ” ಚಿತ್ರದಲ್ಲಿ ರಾನು ಮಂಡಲ್ ಹಾಡಿರುವ ‘ತೇರಿ ಮೇರಿ ಕಹಾನಿ’ ಗೀತೆಯನ್ನು ಹಿಮೇಶ್ ರೇಶಮಿಯಾ ತಮ್ಮ ಇನ್ಸಾಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದರು. ರಾನು ಮಂಡಲ್ ಟಿವಿ ಶೋವೊಂದಕ್ಕೆ ಬರುವ ಮುಂಚೆ ಸಲೊನ್ ವೊಂದನ್ನು ನಡೆಸುತ್ತಿದ್ದರು ಎಂಬುದು ತಿಳಿದುಬಂದಿದೆ.
ಹಿಮೇಶ್ ಅವರ ಕಾರ್ಯಕ್ಕೆ ಪ್ರಶಂಸೆಯ ಮಹಾಪೂರವೇ ಹರಿದುಬರುತ್ತಿದೆ. ಪ್ರತಿಭಾವಂತರನ್ನು ಕಂಡರೆ ನೆರವು ನೀಡುವಂತೆ ತಮ್ಮಗೆ ಸಲ್ಮಾನ್ ಖಾನ್ ತಂದೆ ಸಲಹೆ ನೀಡಿದ್ದರು ಎಂದು ಅವರು ಹೇಳಿದ್ದಾರೆ.
Comments are closed.