ಕರ್ನಾಟಕ

ಯುವಕನೋರ್ವನನ್ನು ನಡುರಸ್ತೆಯಲ್ಲಿಯೇ ಅಟ್ಟಾಡಿಸಿ ಕೊಂದು ಹಾಕಿದ ಹಂತಕರು

Pinterest LinkedIn Tumblr

ಬೆಂಗಳೂರು: ಯುವಕನೋರ್ವನನ್ನು ನಾಲ್ವರು ನಡುರಸ್ತೆಯಲ್ಲಿಯೇ ಅಟ್ಟಾಡಿಸಿ ಕೊಲೆಗೈದಿರುವ ಘಟನೆ ಬೆಂಗಳೂರಿನ ಸುಂಕದಕಟ್ಟೆ ಬಳಿಯ ಹೆಗ್ಗನಹಳ್ಳಿ ಕ್ರಾಸ್ ನಲ್ಲಿ ನಡೆದಿದೆ.

ಮಹೇಶ್ ಕುಮಾರ್ ಕೊಲೆಯಾದ ಯುವಕ. ರಾತ್ರಿ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ಮಹೇಶ್ ನನ್ನು ನಾಲ್ವರು ಅಡ್ಡಗಟ್ಟಿದ್ದಾರೆ. ಈ ವೇಳೆ ನಾಲ್ವರು ತಮ್ಮ ಬಳಿಯಲ್ಲಿದ್ದ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದಾರೆ. ಕೊಲೆ ಬಳಿಕ ನಾಲ್ವರು ಪರಾರಿಯಾಗಿದ್ದಾರೆ.

ಕೊಲೆಯಾದ ಮಹೇಶ್ ಕುಮಾರ್ ಇತ್ತೀಚೆಗೆ ಜೈಲಿನಿಂದ ಹೊರ ಬಂದಿದ್ದನು. ಕೊಲೆ ಪ್ರಕರಣದಲ್ಲಿ ಜೈಲುಪಾಲಾಗಿದ್ದ ಮಹೇಶ್ ಕುಮಾರ್ ಹೊರ ಬರುತ್ತಿದ್ದಂತೆ ಕೊಲೆಯಾಗಿದ್ದಾನೆ. ತಡರಾತ್ರಿ ಘಟನೆ ನಡೆದಿದ್ದು, ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಸ್ಥಳಕ್ಕೆ ಕಾಮಾಕ್ಷಿಪಾಳ್ಯ ಠಾಣಾ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

Comments are closed.