ಆರೋಗ್ಯ

ಪ್ರತಿ ನಿತ್ಯ ಸಲಾಡ್‌ಗಳ ತಿನ್ನುವುದರಿಂದ ಸಿಗುವ ಪ್ರಯೋಜನಗಳನ್ನು ತಿಳಿಯೋಣ.

Pinterest LinkedIn Tumblr

ಡಯೆಟ್ ಮಾಡುವವರಿಗೆ ಹಾಗೂ ಬೆಳೆಯುವ ಮಕ್ಕಳಿಗೆ ಪ್ರೋಟೀನ್ ಅತ್ಯವಶ್ಯಕ.ಅದಕ್ಕಾಗಿ ಪ್ರತಿ ನಿತ್ಯ ಸಲಾಡ್ ತಿನ್ನುವುದರಿಂದ ದೇಹಕ್ಕೆ ಅಗತ್ಯವಾದ ಶಕ್ತಿ ಪಡೆಯಲು ಸಾಧ್ಯ. ಅದು ಮೊಳಕೆ ಕಾಳು, ವಿವಿಧ ತರಕಾರಿಗಳ ಸಲಾಡ್ ನಲ್ಲಿ ದೊರಕುತ್ತದೆ. ಸಲಾಡ್‌ಗಳ ತಿನ್ನುವುದರಿಂದ ಸಿಗುವ ಪ್ರಯೋಜನಗಳನ್ನು ಬಗ್ಗೆ ತಿಳಿಯೋಣ.

ತೂಕ ಕಡಿಮೆ
ದೇಹಕ್ಕೆ ಪೌಷ್ಟಿಕಾಂಶಗಳನ್ನು ಒದಗಿಸುವಲ್ಲಿ ಸಲಾಡ್ ಪ್ರಮುಖ ಪಾತ್ರ ವಹಿಸುತ್ತದೆ. ಕಚ್ಚಾ ಸಲಾಡ್‌ನಲ್ಲಿ ಕ್ಯಾಲೋರಿ ಕಡಿಮೆ ಇರುವುದರಿಂದ ತೂಕ ಕಳೆದುಕೊಳ್ಳಲು ಸಹಾಯವಾಗುತ್ತದೆ. ಹಸಿರು ಸಲಾಡ್ ಹಾಗೂ ಹಣ್ಣಿನ ಸಲಾಡ್ ಸೇವಿಸುವುದರಿಂದ ತೂಕ ಹೆಚ್ಚಾಗುವುದಿಲ್ಲ. ಊಟಕ್ಕಿಂತ ಮೊದಲು ಸಲಾಡ್ ಸೇವಿಸಿದರೆ ತೂಕ ಕಡಿಮೆ ಮಾಡಿಕೊಳ್ಳಬಹುದು.

ರೋಗಗಳನ್ನು ತಡೆಗಟ್ಟುತ್ತದೆ
ಹಸಿರು ಎಲೆಗಳ ಮತ್ತು ಹಣ್ಣುಗಳ ಸಲಾಡ್ ತಿನ್ನುವುದರಿಂದ ಹಲವು ರೋಗಗಳಿಂದ ಮುಕ್ತಿ ಹೊಂದಬಹುದು. ಕ್ಯಾನ್ಸರ್ ಹಾಗೂ ಹೃದಯ ಸಂಬಂಧಿತ ಕಾಯಿಲೆಗಳನ್ನು ತಡೆಗಟ್ಟಬಲ್ಲ ಶಕ್ತಿ ಸಲಾಡ್‌ನಲ್ಲಿದೆ.

ಚರ್ಮದ ಆರೈಕೆಗೆ
ಚರ್ಮವನ್ನು ಮೃದುವಾಗಿಸಲು ಹಾಗೂ ಸುಂದರವಾಗಿ ಕಾಣಲು ಸಲಾಡ್ ಅತ್ಯವಶ್ಯಕ.

ಜೀರ್ಣಕ್ರಿಯೆಗೆ
ಹಸಿರು ತರಕಾರಿಗಳ ಸಲಾಡ್ ನಲ್ಲಿ ಫೈಬರ್ ಅಂಶ ಇರುವುದರಿಂದ ಜೀರ್ಣಕ್ರಿಯೆ ಸರಾಗವಾಗಿ ಆಗುತ್ತದೆ.

ಕೊಬ್ಬು ನಿವಾರಿಸುತ್ತದೆ
ತರಕಾರಿಗಳ ಸಲಾಡ್ ಕೊಬ್ಬು ನಿವಾರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಕೊಬ್ಬಿನ ಆಹಾರ ತಿನ್ನುವವರಿಗೆ ಇದು ಸಹಾಯ ಮಾಡಬಲ್ಲದ್ದು.

Comments are closed.